ಪಠ್ಯ ಪುಸ್ತಕ ಪರಿಷ್ಕರಣೆ : ರಾಜ್ಯ ಸರ್ಕಾರದ ಕಾರ್ಯ ವೈಖರಿಗೆ ಶಾಸಕ ತನ್ವೀರ್ ಸೇಠ್ ಖಂಡನೆ‌.

ಮೈಸೂರು,ಜೂನ್4,2022(www.justkannada.in): ಪಠ್ಯ ಪುಸ್ತಕ ಪರಿಷ್ಕರಣೆ ಸಂಬಂಧ ರಾಜ್ಯ ಸರ್ಕಾರದ ಕಾರ್ಯ ವೈಖರಿಗೆ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್  ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮೈಸೂರಿನಲ್ಲಿ ಈ ಕುರಿತು ಮಾತನಾಡಿದ ಶಾಸಕ ತನ್ವೀರ್ ಸೇಠ್,  ಪಠ್ಯ ಪುಸ್ತಕ ಪರಿಷ್ಕರಣೆಯಲ್ಲಿ ರಾಜ್ಯ ಸರ್ಕಾರ ಕೈವಾಡ ಇರಬಾರದು. ನಾನು ಶಿಕ್ಷಣ ಸಚಿವನಾಗಿದ್ದಾಗ ಸಾಹಿತಿ ಬರಗೂರು ರಾಮಚಂದ್ರಪ್ಪ ಅಧ್ಯಕ್ಷತೆಯಲ್ಲಿ ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿ ರಚಿಸಲಾಗಿತ್ತು. ಆಗ ರಚಿಸಿದ್ದ 27 ಸಮಿತಿಗಳಲ್ಲಿ 170ಕ್ಕೂ ಹೆಚ್ಚು ಸದಸ್ಯರು ಇದ್ದರು‌. ಆಗ 1 ರಿಂದ 10ನೇ ತರಗತಿ ವರೆಗಿನ ಪಠ್ಯವನ್ನು ಪರಿಷ್ಕರಣೆ ಮಾಡಲಾಯಿತು. ಈಗ 11 ಜ‌ನ ಸದಸ್ಯ ಸಮಿತಿಯಲ್ಲಿ ಗೊಂದಲ ಆಗುತ್ತಿದೆ. ಆದರೆ ಸಮಿತಿಯಲ್ಲಿದ್ದ ಸದಸ್ಯರು ಕುವೆಂಪು, ಬಸವಣ್ಣನವರ ಬಗ್ಗೆ ಅವಹೇಳನಕಾರಿಯಾಗುವಂತಹ ವಿಷಯಗಳನ್ನು ಸೇರಿಸಿದ್ದು ಸರಿಯಲ್ಲ‌. ಸಮಿತಿಯಲ್ಲಿ ಇದ್ದವರೆ ಈ ರೀತಿ ಪ್ರವೃತ್ತಿ ತೋರಿದರೆ ಮಕ್ಕಳ ಸ್ಥಿತಿ ಏನಾಗಬೇಡ.. ಪಠ್ಯ ಪುಸ್ತಕ ಪರಿಷ್ಕರಣೆಯಲ್ಲಿ ಸರ್ಕಾರದ ಕೈವಾಡ ಇರಬಾರದು ಪಠ್ಯ ಪುಸ್ತಕ ಪರಿಷ್ಕರಣೆ ಪಾರದರ್ಶಕವಾಗಿ ಆಗಬೇಕು ಎಂದರು.start-oxygen-bus-service-mysore-mla-tanvir-sait-letter-incharge-minister

ಶ್ರೀರಂಗಪಟ್ಟಣ ಜಾಮಿಯಾ ಮಸೀದಿ ವಿವಾದ ಕುರಿತು ಪ್ರತಿಕ್ರಿಯಿಸಿದ ಶಾಸಕ ತನ್ವೀರ್ ಸೇಠ್, ಸ್ವಾತಂತ್ರದ ಸಲುವಾಗಿ ಪ್ರಾಣ ತ್ಯಾಗ ಮಾಡಿದ್ದು ಯಾರು..? ಬ್ರಿಟಿಷ್‌ ಗುಲಾಮರಾಗಿ ಇದ್ದದ್ದು ಯಾರು.? ಈ ಇತಿಹಾಸ ತಿರುಚಲು ಸಾಧ್ಯವಿಲ್ಲ. ಟಿಪ್ಪು ಅರಮನೆ ಮುಂಭಾದಲ್ಲೆ ರಂಗನಾಥಸ್ವಾಮಿ ದೇವಾಲಯ ಗಟ್ಟಿಯಾಗಿ ನಿಂತಿದೆ.ಅದರ ಜೀರ್ಣೋದ್ಧಾರಕ್ಕೆ ಟಿಪ್ಪು ನೀಡಿದ ನೆರವು, ಇದೆಲ್ಲವೂ ಇತಿಹಾಸದಲ್ಲಿ ಇದೆ. ಯಾವುದೋ ನೆಪ ಇಟ್ಟುಕೊಂಡು ಗೊಂದಲ ಸೃಷ್ಟಿ ಮಾಡುವುದು ಸರಿ ಅಲ್ಲ. ಜಾಮೀಯಾ ಮಸೀದಿ ಸಂರಕ್ಷಣೆ ಮಾಡುವಂತ ಜವಾಬ್ಧಾರಿ ವಕ್ಫ್ ಮಂಡಳಿಗೆ ಕೊಟ್ಡಿದೆ. ಇದರ ಮಾಲಿಕತ್ವ ನಮಗೆ ಕೊಟ್ಟಿಲ್ಲ. ಆರ್ಕಾಲಜಿ ಸರ್ವೆ ಆಫ್ ಇಂಡಿಯಾ ಇದರ ಸಂರಕ್ಷಣೆ ಮಾಡಬೇಕು ಎಂದು ತಿಳಿಸಿದರು.

Key words: Text book-revision-MLA-Tanvir sait- condemns- state government