ಬೆಂಗಳೂರು,ಜೂನ್,22,2022(www.justkannada.in): ರಾಜ್ಯದಲ್ಲಿ ವಿವಾದಕ್ಕೆ ಕಾರಣವಾಗಿರುವ ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿಯ ಮತ್ತೊಂದು ಯಡವಟ್ಟು ಮಾಡಿದ್ದು, 7ನೇ ತರಗತಿಯ ಸಮಾಜ ವಿಜ್ಞಾನ ಭಾಗ-1ರಲ್ಲಿರುವ ‘ಮೈಸೂರು ಒಡೆಯರ್ ಪಾಠದಿಂದ ಮುಮ್ಮಡಿ ಕೃಷ್ಣರಾಜ ಒಡೆಯರ್, 10ನೇ ಚಾಮರಾಜ ಒಡೆಯರ್, ನಾಲ್ವಡಿ ಕೃಷ್ಣರಾಜ ಒಡೆಯರ್,ಹಾಗೂ ದಿವಾನರಾಗಿದ್ದ ಸರ್. ಎಂ. ವಿಶ್ವೇಶ್ವರಯ್ಯ, ಸರ್. ಮಿರ್ಜಾ ಇಸ್ಮಾಯಿಲ್ ಹಾಗೂ ಕಮಿಷನರ್ ಗಳಾದ ಮಾರ್ಕ್ ಕಬ್ಬನ್, ಎಲ್.ಬಿ. ಬೌರಿಂಗ್ ಅವರ ಪಠ್ಯಗಳನ್ನೂ ಕೈಬಿಟ್ಟಿದೆ.
ಟಿಪ್ಪು ವ್ಯಕ್ತಿತ್ವ ಮತ್ತು ಸಾಧನೆಯಿಂದ ಮಿರ್ಜಾ ಇಸ್ಮಾಯಿಲ್ ವರೆಗಿನ ಸುಮಾರು ಆರು ಪುಟಗಳ ಪಠ್ಯವನ್ನು ಚಕ್ರತೀರ್ಥ ಸಮಿತಿ ಕೈಬಿಟ್ಟಿದೆ. ಆ ಪಾಠದಲ್ಲಿ ಮೈಸೂರಿನ ಇತಿಹಾಸದಲ್ಲಿ 19ನೇ ಶತಮಾನದ ಆರಂಭದಿಂದ 20ನೇ ಶತಮಾನದ ಮಧ್ಯಂತರದವರೆಗೆ ಪ್ರಮುಖ ಪಾತ್ರ ವಹಿಸಿದ ಪ್ರಮುಖರ ಪರಿಚಯ ನೀಡಲಾಗಿತ್ತು. ಜೊತೆಗೆ, ನಾಲ್ವಡಿ ಕೃಷ್ಣರಾಜ ಒಡೆಯರ್ ಜೀವನ ಮತ್ತು ಸಾಧನೆಗಳನ್ನೂ ಪರಿಚಯಿಸ ಲಾಗಿತ್ತು. ಅಷ್ಟೂ ಭಾಗಕ್ಕೆ ಕತ್ತರಿ ಹಾಕಲಾಗಿದೆ. ಬರಗೂರು ರಾಮಚಂದ್ರಪ್ಪ ನೇತೃತ್ವದ ಸಮಿತಿಯು ಪರಿಷ್ಕರಿಸಿದ್ದ ಪಠ್ಯದಲ್ಲಿ ಈ ಭಾಗ ಇತ್ತು.
ಬರಗೂರು ನೇತೃತ್ವದ ಸಮಿತಿ ಮೈಸೂರು ಒಡೆಯ ಕುರಿತು ಹೆಚ್ಚಿನ ಸ್ಥಳಾವಕಾಶ ನೀಡದೆ, ಹೈದರಾಲಿ ಮತ್ತು ಟಿಪ್ಪು ಸುಲ್ತಾನ್ ಚರಿತ್ರೆಗೆ ಆದ್ಯತೆ ನೀಡಿತ್ತು’ ಎಂದು ಈ ಹಿಂದೆ ಶಿಕ್ಷಣ ಸಚಿವರು ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೆ, ಪಠ್ಯದಲ್ಲಿ ಟಿಪ್ಪು ಸುಲ್ತಾನ್ ಕುರಿತ ವೈಭವೀಕರಣವಿದೆ ಎಂದು ಕತ್ತರಿ ಪ್ರಯೋಗಿಸಲು ಹೋಗಿರುವ ಚಕ್ರತೀರ್ಥ ಸಮಿತಿ ನಾಲ್ವಡಿ ಕೃಷ್ಣರಾಜ ಒಡೆಯರ ಅವರ ಪ್ರಮುಖ ಸಾಧನೆಗಳನ್ನು ಕುರಿತು ಸುಮಾರು ಎರಡು ಪುಟಗಳ ವಿವರಗಳೂ ಸೇರಿದಂತೆ ಮೈಸೂರು ಒಡೆಯರ್ ಕಾಲಘಟ್ಟದ ಇತಿಹಾಸವನ್ನು ತೆಗೆದುಹಾಕಿದೆ.
“ಮಹಾತ್ಮ ಗಾಂಧೀಜಿ ಅವರಿಂದ ರಾಜರ್ಷಿ ಕರಸಿಕೊಂಡ ನಾಲ್ವಡಿಯವರು ಕೃಷ್ಣರಾಜ ಸಾಗರ ಅಣೆಕಟ್ಟು ನಿರ್ಮಾಣ ಮಾಡಿದ್ದನ್ನು, ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸಿದ್ದನ್ನು, ಮೊದಲ ಬಾರಿಗೆ ಮಹಿಳೆ ಯರಿಗೆ ಮತದಾನದ ಹಕ್ಕು ನೀಡಿದ್ದನ್ನೂ ಒಳಗೊಂಡಂತೆ ಶಿಕ್ಷಣ, ಸಾಹಿತ್ಯ, ಕೈಗಾರಿಕೆ, ಬ್ಯಾಂಕ್ ಮುಂತಾದ ಕ್ಷೇತ್ರಗಳ ಪ್ರಗತಿಗೆ ಕಾರಣವಾದದ್ದನ್ನು ಬರಗೂರು ನೇತೃತ್ವದ ಪಠ್ಯಪುಸ್ತಕದಲ್ಲಿ ವಿವರಿಸಲಾಗಿತ್ತು. ಚಕ್ರತೀರ್ಥ ಸಮಿತಿಯು ಈ ಎಲ್ಲ ವಿವರಗಳನ್ನೂ ಕೈಬಿಟ್ಟಿದೆ. ಅಷ್ಟೇ ಅಲ್ಲದೆ, ವಿಶ್ವೇಶ್ವರಯ್ಯನವರನ್ನು ಕುರಿತ ವಿವರಗಳಿಗೂ ಕತ್ತರಿ ಹಾಕಿದೆ. ಗತಿ ಮಿರ್ಜಾ ಇಸ್ಮಾಯಿಲ್ ಅವರ ಪಠ್ಯಕ್ಕೂ ಒದಗಿದೆ.
7ನೇ ತರಗತಿಯ ಸಮಾಜ ವಿಜ್ಞಾನ ಭಾಗ-1ರಲ್ಲಿದ್ದ ‘ಭಕ್ತಿ ಪಂಥ ಮತ್ತು ಸೂಫಿ ಪರಂಪರೆ ‘ಎಂಬ ಪಾಠದಿಂದ ಅಕ್ಕಮಹಾದೇವಿ, ಶಿಶುನಾಳ ಶರೀಫರು, ಕನಕದಾಸರು ಮತ್ತು ಪುರಂದರದಾಸರನ್ನು ಕುರಿತ ಎಲ್ಲ ವಿವರಗಳನ್ನೂ ತೆಗೆದುಹಾಕಲಾಗಿದೆ. ಉತ್ತರ ಭಾರತದವರನ್ನು ಮಾತ್ರ ಉಳಿಸಿಕೊಂಡು ಕರ್ನಾಟಕದ ಅಸ್ಮಿತೆಗೆ ಧಕ್ಕೆ ತರಲಾಗಿದೆ ಎಂಬ ಆಕ್ಷೇಪ ವ್ಯಕ್ತವಾಗಿದೆ. ಅರನೇ ತರಗತಿಯ ಸಮಾಜ ವಿಜ್ಞಾನ ಭಾಗ-1ರಲ್ಲಿ ಬರಗೂರು ಸಮಿತಿಯು ಚಂದ್ರಗುಪ್ತ ಮೌರ್ಯನನ್ನು ಕುರಿತು ನೀಡಿದ್ದ ಅಂಶಗಳನ್ನು ತಿರುಚಿ, ಚಕ್ರತೀರ್ಥ ಸಮಿತಿ ಚಾಣಕ್ಯನನ್ನು ವೈಭವೀಕರಿಸಿದೆ ಎಂಬ ಟೀಕೆ ವ್ಯಕ್ತವಾಗಿದೆ.
ಕೃಪೆ: ಪ್ರಜಾವಾಣಿ.
Key words: Text -Revision –Committee-myore-Wodeyar -texts – Abandoned
ENGLISH SUMMARY..
Another mistake from school textbook revision committee: Text on Mysuru Wadiyar’s also axed
Bengaluru, June 22, 2022 9www.justkannada.in): The school text book revision committee, led by Rohit Chakratheerta, which has faced severe criticism from across the state due to its several mistakes, has committed yet another mistake. Lessons concerning Mummadi Krishnaraja Wadiyar, 10th Chamaraja Wadiyar, Nalwadi Krishnaraja Wadiyar and Diwan Sir. M. Visvesvaraya, Sir Mirza Ismail and Commissioners Mark Cubbon, L.B. Bowring has been removed from the Social Science-Part 1 text book of 7th standard.
The committee is said to have omitted about six pages of the lessons starting from explanation of Tipu’s personality and achievements to Mirza Ismail. This portion of the lessons included the introduction of kings, and their roles in history from 19th century to the middle of the 20th century. Also, Nalwadi Krishnaraja Wadiyar’s life history and achievements were also introduced in this portion. But this entire portion has been removed. This portion existed in the text revised by committee led by Baraguru Ramachandrappa.
It is also alleged that details of Akkamahadevi, Shishunala Shariff, Kanakadas and Purandaradasa is removed from the lesson, “Bhakti Pantha mattu Soofi Parampare,’ in the Social Science Part-1 text book of 7th standard. It is alleged that only text relating to North Karnataka has been retained and the other regions have been insulted. The committee led by Chakrateertha is also said to have glorified Chankya by twisting the text relating to the Maurya as revised by the Baraguru Ramachandrappa committee, in the Social Science Part-1 text book of 6th standard.
Keywords: School text book revision/ Rohith Chakrateertha committee/ mistake/ Mysuru Wadiyar/ axed