ಬೆಂಗಳೂರು,ಮೇ,30,2023(www.justkannada.in): ಹಿಂದಿನ ಬಿಜೆಪಿ ಸರ್ಕಾರ ಅಳವಡಿಸಿದ್ದ ಕೆಲ ಪಠ್ಯಗಳನ್ನ ತೆಗೆದು ಹಾಕಲು ಮತ್ತೆ ಪಠ್ಯ ಪರಿಷ್ಕರಣೆಗೆ ಮುಂದಾದ ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾಜಿ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾತನಾಡಿರುವ ಮಾಜಿ ಸಚಿವ ಬಿ.ಸಿ ನಾಗೇಶ್, ಕಾಂಗ್ರೆಸ್ ಎಲ್ಲದರಲ್ಲೂ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದೆ. ಕಾಂಗ್ರೆಸ್ ಪಕ್ಷ ಸುಳ್ಳು ಹೇಳಿ ಮತ ಬ್ಯಾಂಕ್ ಗಟ್ಟಿಮಾಡಿಕೊಳ್ಳುತ್ತದೆ. ನಾವು ಭಾರತೀಯ ಶಿಕ್ಷಣ ಬೇಕು ಅಂತಾ ಪರಿಷ್ಕರಣೆ ಮಾಡಿದ್ದೇವೆ. ಕಾಂಗ್ರೆಸ್ ಇದಕ್ಕೆ ಕೇಸರೀಕರಣ ಅಂತಾ ಹೇಳುತ್ತಿದೆ. ನಾವು ಪಠ್ಯದಲ್ಲಿ ಸೇರಿಸಿರುವ ಯಾವ ಪಾಠ ಕೇಸರೀಕರಣ ಆಗಿದೆ ಅಂತಾ ಕಾಂಗ್ರೆಸ್ ನವರು ಹೇಳಲಿ ಎಂದರು.
ವಿದ್ಯಾರ್ಥಿಗಳು ಆದರ್ಶ ಪುರುಷ ಆಗಲು ಪಠ್ಯ ಅಳವಡಿಸಿದ್ದು ಕೇಸರೀಕರಣನಾ? ಟಿಪ್ಪು ಸುಲ್ತಾನ್ ಪಾಠವನ್ನು ಒಂದಷ್ಟು ಕಡಿತ ಮಾಡಿರುವುದು ನಿಜ. ಟಿಪ್ಪು ಸುಲ್ತಾನ್ ಏನು ಮಾಡಿದ್ದಾನೆ ಅಂತಾ ಎಲ್ಲರಿಗೂ ಗೊತ್ತಿದೆ ಎಂದು ಬಿ.ಸಿ ನಾಗೇಶ್ ಟಾಂಗ್ ನೀಡಿದರು.
Key words: Text revision- Former Education Minister -BC Nagesh – against – Congress government.