ಬೆಂಗಳೂರು,ಜೂನ್,7,2022(www.justkannada.in): ಪಠ್ಯ ಪುಸ್ತಕ ಪರಿಷ್ಕರಣೆ ವಿವಾದಕ್ಕೆ ಸಂಬಂಧಿಸಿದಂತೆ ರೋಹಿತ್ ಚಕ್ರತೀರ್ಥ ನಿವಾಸಕ್ಕೆ ಸರ್ಕಾರ ಪೊಲೀಸ್ ಭದ್ರತೆ ನೀಡಿದೆ.
ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿ ಅಧ್ಯಕ್ಷರಾಗಿದ್ದ ರೋಹಿತ್ ಚಕ್ರತೀರ್ಥ ಅವರಿಗೆ ಅನೇಕ ಸಂಘಟನೆಗಳಿಂದ ಬೆದರಿಕೆ ಬಂದಿದೆ ಎನ್ನಲಾಗಿದ್ದು ಈ ಹಿನ್ನೆಲೆಯಲ್ಲಿ ಜಯನಗರದಲ್ಲಿರುವ ರೋಹಿತ್ ಚಕ್ರತೀರ್ಥ ನಿವಾಸ ಪೊಲೀಸ್ ಭದ್ರತೆ ನೀಡಲಾಗಿದೆ. ಸರ್ಕಾರ ಪೊಲೀಸರನ್ನ ನಿಯೋಜನೆ ಮಾಡಿದೆ.
ರೋಹಿತ್ ಚಕ್ರತೀರ್ಥ ಅವರ ಮನೆಗೆ ಪೊಲೀಸ್ ಭದ್ರತೆ ನೀಡಿರುವುದಕ್ಕೆ ಗರಂ ಆಗಿರುವ ಕರವೇ ನಾರಾಯಣಗೌಡ. ರೋಹಿತ್ ಗೆ ನೀಡಿರುವ ರಕ್ಷಣೆ ಹಿಂಪಡೆಯಿರಿ. ಅವನು ತಪ್ಪು ಮಾಡಿಲ್ಲ ಅಂಧ್ರೆ ಭದ್ರತೆ ಯಾಕೆ..? ಎಂದು ಪ್ರಶ್ನಿಸಿದ್ದಾರೆ.
Key words: Textbook-revision-controversy-Police- security – Rohit Chakratheertha -residence.