ಬೆಂಗಳೂರು,ಜೂನ್,8,2022(www.justkannada.in): ಪಠ್ಯ ಪುಸ್ತಕ ಪರಿಷ್ಕರಣೆ ಪ್ರಜಾಪ್ರಭುತ್ವಿಕರಣ ಆಗಬೇಕು. ಕೇಸರೀಕರಣವಾಗಬಾರದು ಎಂದು ವಿಧಾನಪರಿಷತ್ ಬಿಜೆಪಿ ಸದಸ್ಯ ಹೆಚ್.ವಿಶ್ವನಾಥ್ ಅಸಮಾಧಾನ ವ್ಯಕ್ತಪಡಿಸಿದರು.
ತಮ್ಮ ಸರ್ಕಾರದ ನಡೆಯನ್ನೇ ಟೀಕಿಸಿ ಮಾತನಾಡಿದ ಎಂಎಲ್ ಸಿ ಹೆಚ್.ವಿಶ್ವನಾಥ್, ಸಚಿವರು ಆರ್ ಎಸ್ಎಸ್ ಮುಂದೆ ಮಂಡಿಯೂರಿದ್ದು ಸರಿಯಲ್ಲ. ಪಠ್ಯ ಪುಸ್ತಕ ಪರಿಷ್ಕರಣೆ ಪ್ರಜಾಪ್ರಭುತ್ವಿಕರಣ ಆಗಬೇಕು ಪಠ್ಯಪುಸ್ತಕ ಕೇಸರಿಕರಣ ಆಗಬಾರದು. ಪಠ್ಯ ಪರಿಷ್ಕರಣೆಗೆ ಆರ್ ಎಸ್ ಎಸ್ ಒಪ್ಪಿದೆ ಅನ್ನೋದು ಎಷ್ಟು ಸರಿ. ಇದೊಂದು ಸಂವಿಧಾನ ವಿರೋಧಿ ನಡವಳಿಕೆ ಎಂದು ಬೇಸರ ವ್ಯಕ್ತಪಡಿಸಿದರು.
ಆರ್ ಎಸ್ಎಸ್ ಬಗ್ಗೆ ನನಗೆ ಗೌರವವಿದೆ. ಹಾಗಂತ ಪಠ್ಯಪುಸ್ತಕ ಕೇಸರೀಕರಣ ಮಾಡೋದು ಸರಿಯಲ್ಲ ಎಂದು ಹೆಚ್.ವಿಶ್ವನಾಥ್ ನುಡಿದರು.
Key words: Textbook- revision – democratization-MLC- H.Vishwanath.