ಬೆಂಗಳೂರು,ಜನವರಿ,31,2021(www.justkannada.in) : ಕರ್ನಾಟಕದಲ್ಲಿ ಕನ್ನಡಿಗರು-ಮರಾಠಿಗರು ಬಾಂಧವ್ಯದಿಂದ ಇದ್ದಾರೆ. ಅಣ್ಣ ತಮ್ಮಂದಿರಂತೆ ಇರುವಾಗ ಠಾಕ್ರೆ ಬಂದು ಹುಳಿ ಹಿಂಡುವ ಕೆಲಸ ಮಾಡಬಾರದು ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.
ಉದ್ಧವ್ ಠಾಕ್ರೆ ನೇತೃತ್ವದ ಸಮ್ಮಿಶ್ರ ಸರ್ಕಾರ ಕನ್ನಡಿಗರನ್ನು ಕೆರಳಿಸುವ ಹೇಳಿಕೆ ನೀಡುತ್ತಿದೆ. ಠಾಕ್ರೆ ತಮ್ಮ ಕುರ್ಚಿ ಉಳಿಸಿಕೊಳ್ಳಲು ಇಂಥಹ ವಿವಾದಾತ್ಮಕ ಹೇಳಿಕೆ ನೀಡಿ ಮಹಾರಾಷ್ಟ್ರದ ಜನರನ್ನು ಮಾನಸಿಕವಾಗಿ ಬೇರೆಡೆಗೆ ಸೆಳೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಉದ್ಧವ್ ಠಾಕ್ರೆಯನ್ನು ಕೆಳಗಿಸಲು ಕಾಂಗ್ರೆಸ್ ತಂತ್ರ ಹೆಣೆಯುತ್ತಿದ್ದು, ಹೀಗಾಗಿ, ಕೆಳಗಿಳಿಯುವ ಮುನ್ನ ಇಂಥ ಹೇಳಿಕೆ ನೀಡುತ್ತಿದ್ದಾರೆ. ತಮ್ಮ ಅಧಿಕಾರ ಉಳಿಸಿಕೊಳ್ಳಲು ಠಾಕ್ರೆ ಇಂಥ ಕುಲಗೆಡಿಸುವ ಕೆಲಸಕ್ಕೆ ಕೈ ಹಾಕಬಾರದು ಎಂದು ಹೇಳಿದರು.ಮಹದಾಯಿ ನದಿ ನೀರು ಹಂಚಿಕೆ ಕುರಿತು ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ ಹೇಳಿಕೆಗೆ ಪ್ರತಿಕ್ರಿಯಿಸಿದ ಕಾರಜೋಳ, ಯಾರ ಮಾತನ್ನೂ ಯಾರೂ ಕೇಳಬೇಕಾಗಿಲ್ಲ. ನಾವೂ ಯಾರ ಮಾತು ಕೇಳಬೇಕಾಗಿಲ್ಲ. ನೆಲ, ಜಲ, ನಾಡು-ನುಡಿ ಪ್ರಶ್ನೆ ಬಂದಾಗ ನಾವು ನಮ್ಮ ನೆಲ-ಜಲ ಪರವಾಗಿ ಇರುತ್ತೇವೆ ಎಂದು ತಿಳಿಸಿದ್ದಾರೆ.
key words : Thackeray-Sour-Squeeze-Work-Should not-DCM- Govinda Karajola