ಬೆಂಗಳೂರು, ಏ.27, 2020 : (www.justkannada.in news ) ಕೋವಿಡ್ 19 ವೈರಸ್ ವಿರುದ್ಧದ ಹೋರಾಟದಲ್ಲಿ ನಾಗರಿಕರು ತಮ್ಮ ಜವಾಬ್ದಾರಿಯುತ ಪಾತ್ರವನ್ನು ನಿರ್ವಹಿಸುತ್ತಿರುವುದರ ನಡುವೆಯೂ ಕೆಲವೊಂದು ಲೋಪಗಳು ಕಂಡು ಬರುತ್ತಿವೆ.
ಈ ಪೈಕಿ ಹಲವು ಜನರು ಒಂದೇ ಸ್ಯಾನಿಟೈಸರ್ / ಸೋಪ್ ಅನ್ನು ಸ್ಪರ್ಶಿಸುತ್ತಿರುವುದು ಕಂಡು ಬಂದಿದೆ. ಇದು ನಿಜಕ್ಕೂ ಆರೋಗ್ಯಕರವಲ್ಲ ಅಥವಾ ಆರೋಗ್ಯಕರ ಅಭ್ಯಾಸವಲ್ಲ. ಇದನ್ನು ಗಮನಿಸಿದ ವಿದ್ಯಾರ್ಥಿಯೊಬ್ಬ ಸಮಸ್ಯೆಗೊಂದು ಪರಿಹಾರ ಪತ್ತೆ ಹಚ್ಚಿ ಸುದ್ಧಿಯಾಗಿದ್ದಾನೆ.
ಇನ್ವೆಂಚರ್ ಅಕಾಡೆಮಿಯಲ್ಲಿ ವ್ಯಾಸಂಗ ಮಾಡುತ್ತಿರುವ ಬೆಂಗಳೂರಿನ ನಿವಾಸಿ, 14 ವರ್ಷದ ಕೃಷ್ಣನ್ ಗುಪ್ತಾ ಎಂಬಾತನೇ ಈಗ ಗಮನ ಸೆಳೆದಿರುವ ಯುವ ಸಂಶೋಧಕ. ಈತ ಲೆಗೊ ಮೈಂಡ್‌ಸ್ಟಾರ್ಮ್ ಇವಿ 3 ತಂತ್ರಜ್ಞಾನ ಬಳಸಿ ‘ ನೋ-ಟಚ್ ‘ ಹ್ಯಾಂಡ್ ಸ್ಯಾನಿಟೈಸರ್ ಡಿಸ್ಪೆನ್ಸರ್ ಅನ್ನು ಅಭಿವೃದ್ಧಿಪಡಿಸಿದ್ದಾನೆ.
NO-TOUCH HAND SANITIZER ಬಳಕೆಯ ಪರಿಕಲ್ಪನೆಯು ತುಂಬಾ ಸುಲಭದ್ದಾಗಿದೆ. ಆರಂಭದಲ್ಲಿ, ಅಲ್ಟ್ರಾಸಾನಿಕ್ ಸಂವೇದಕವು ಯಾವುದೇ ವಸ್ತುವನ್ನು (ಈ ಸಂದರ್ಭದಲ್ಲಿ ಒಂದು ಕೈ) ಸಂವೇದಕದ 12 ಸೆಂ.ಮೀ ವ್ಯಾಪ್ತಿಯಲ್ಲಿ ಬಂದಾಗ ಗ್ರಹಿಸುತ್ತದೆ. ಬಳಿಕ ಅದನ್ನು ರವಾನಿಸಿ, ರೋಬೋಟ್‌ನಲ್ಲಿರುವ ದೊಡ್ಡ ಮೋಟಾರ್ ಒಂದು ತೋಳನ್ನು ಚಲಿಸುವಂತೆ ಮಾಡುತ್ತದೆ, ಅದು ನಂತರ ಸ್ಯಾನಿಟೈಸರ್ ಮುಚ್ಚಳವನ್ನು ಕೆಳಕ್ಕೆ ತಳ್ಳುತ್ತದೆ, ಇದು ಸ್ಯಾನಿಟೈಸರ್ ಅನ್ನು ಹೊರಹಾಕಲು ಅನುವು ಮಾಡಿಕೊಡುತ್ತದೆ.
ಕೃಷ್ನ್, ಸ್ವತಃ ಲೆಗೊ ಮೈಂಡ್‌ಸ್ಟಾರ್ಮ್ ಇವಿ 3 ತುಣುಕುಗಳನ್ನು ಬಳಸಿ ಭೌತಿಕ ರೋಬೋಟ್ ವಿನ್ಯಾಸವನ್ನು ರಚಿಸಿದ್ದಲ್ಲದೆ, ಕೋಡ್ ಅನ್ನು ಬರೆದು ಅದನ್ನು ‘ಲೆಗೋ ಮೈಂಡ್‌ಸ್ಟಾರ್ಮ್‌ನ ಶಿಕ್ಷಣ ಇವಿ 3’ ಸಾಫ್ಟ್‌ವೇರ್ ಬಳಸಿ ಪ್ರೋಗ್ರಾಮ್ ಮಾಡಿದ್ದಾನೆ.
KEY WORDS : The concept of NO.TOUCH HAND SANITIZER- developed- Sanitiser Dispenser-Krishn Gupta-BANGALORE
ENGLISH SUMMARY :
The alarming spread of the novel coronavirus or the CoVID-19 has triggered a pandemic that the world is left grappling with. As per the WHO and other medical institutions, the most significant contribution we can make to contain the spread of the CoVID-19 include washing and sanitising our hands regularly. With definite medicines or vaccination not yet available, inhibiting its spread from one individual to another is imperative to check the impact of the virus on people’s lives and their well-being.
While citizens are playing their part in the fight against the virus, numerous people touching the same sanitisers/soap dispenser is not healthy or a hygienic practice.
Krishn Gupta, a 14-year-old, a resident of Bengaluru, studying at the Inventure Academy, has developed a No-touch Hand Sanitiser Dispenser using Lego Mindstorm EV3.
The concept of NO-TOUCH HAND SANITIZER use is not very complicated. Initially, the ultrasonic sensor senses any object (a hand in this case) when it comes within a range of 12 cm of the sensor. Post that, the Large Motor which is on the robot, moves an arm, which then pushes the sanitiser knob down, which lets the sanitiser out.
Krishn has created the physical robot design by himself using Lego Mindstorm EV3 pieces and has written the code and programmed it using the ‘LEGO MINDSTORM’s Education EV3’ software.
Commenting on the need for No hand dispenser, the 14-year-old, Krishn said: “I thought of designing this ‘No-Hands Sanitiser Dispenser’ post the lockdown announcement made by our honourable Prime Minister. While my grandfather kept telling everyone in the family not to touch anything and to sanitise our hands, I noticed that everyone was touching the same sanitiser bottle. I felt the need to make a no-hand sanitiser dispenser which would promote hygiene, especially at hospitals and workplaces. My family has shifted to the no-hand dispenser and I would request everyone to practise this.”
Krishn has been taking robotics classes for the last few years where he learns how to make such robots and coding for the same. He has been taking part in competitions like “World Robotics Olympiad” and “First Lego League” on a regular basis.