ಬೆಂಗಳೂರು, ಡಿಸೆಂಬರ್ 12, 2021 (www.justkannada.in): ಕೇಂದ್ರದ ಕೃಷಿ ಕಾನೂನುಗಳ ವಿರುದ್ಧ ರೈತರು ಒಂದು ವರ್ಷಕ್ಕೂ ಅಧಿಕ ಕಾಲದಿಂದ ನಡೆಸುತ್ತಿದ್ದ ಪ್ರತಿಭಟನೆ ಕೊನೆಗೊಂಡಿದೆ.
ಶನಿವಾರ ಮುಂಜಾನೆಯಿಂದಲೇ ರೈತರು ದೆಹಲಿ ಹೊರ ವಲಯದ ಸಿಂಘು, ಟಿಕ್ರಿ, ಘಾಜಿಪುರ ಗಡಿಯಿಂದ ತೆರಳುತ್ತಿದ್ದಾರೆ. ಆ ವಿಡಿಯೊ, ಫೋಟೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಗಮನ ಸೆಳೆಯುತ್ತಿವೆ.
ಟ್ವಿಟರ್ ಮತ್ತು ಫೇಸ್ಬುಕ್ಗಳಲ್ಲಿ ಡೆಕೋರೇಟಿವ್ ಲೈಟ್ಗಳನ್ನು ಹಾಕಿಕೊಂಡ ಟ್ರ್ಯಾಕ್ಟರ್ ಮತ್ತು ಕಾರುಗಳಲ್ಲಿ ರೈತರು ಹಿಂದಿರುಗುತ್ತಿರುವ ಫೋಟೊಗಳನ್ನು ಬಳಕೆದಾರರು ಹಂಚಿಕೊಂಡಿದ್ದಾರೆ.
ಅಂಬಾಲ ಸಮೀಪದ ಸಿಂಘು ಗಡಿಯಲ್ಲಿ ಚಾರ್ಟರ್ಡ್ ವಿಮಾನದಲ್ಲಿ ರೈತರ ಮೇಲೆ ಹೂವಿನ ಮಳೆಗರೆಯುತ್ತಿರುವ ವಿಡಿಯೊವನ್ನು ಹಂಚಿಕೊಳ್ಳಲಾಗಿದೆ.