ಮೈಸೂರು, ಜೂ.26, 2020 : (www.justkannada.in news ) : ಸ್ಯಾಂಡಲ್ ವುಡ್ ನಟಿ ಸಿಂಧು ಲೋಕನಾಥ್, ಮಾಧ್ಯಮಗಳ ಗಾಸಿಪ್ ವರದಿಯಿಂದ ತೀವ್ರ ಬೇಸರಗೊಂಡಿದ್ದಾರೆ. ಈ ಸಂಬಂಧ ಮಾಧ್ಯಮದವರ ವರ್ತನೆ ಖಂಡಿಸಿ ಫೇಸ್ ಬುಕ್ ಪುಟದಲ್ಲಿ ಪುಟ್ಟ ಬರಹ ಪೋಸ್ಟ್ ಮಾಡಿದ್ದಾರೆ.
ಸಿಂಧುಲೋಕನಾಥ್, ತಲೆಕೂದಲನ್ನು ತುಂಡರಿಸಿಕೊಂಡಿದ್ದನ್ನೇ ನೆಪವಾಗಿಸಿಕೊಂಡ ಟಿವಿ ಚಾನೆಲ್ ಗಳು ಆಕೆಯ ಆರೋಗ್ಯ ಸ್ಥಿತಿ ಬಗ್ಗೆ ಕಪೋಲಕಲ್ಪಿತ ವರದಿ ಪ್ರಸಾರ ಮಾಡಿದ್ದವು. ಈ ಧೋರಣೆಗೆ ಸೆಡ್ಡು ಹೊಡೆದಿರುವ ಸಿಂಧು ಲೋಕನಾಥ್, ಮೈದಾನದಲ್ಲಿ ಫುಟ್ ಬಾಲ್ ಆಡುತ್ತಿರುವ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ, ತಮ್ಮ ದೈಹಿಕ ಆರೋಗ್ಯದ ಬಗ್ಗೆ ವದಂತಿ ಹಬ್ಬಿಸಿದ್ದ ಮಾಧ್ಯಮದವರ ಮುಖಕ್ಕೆ ಮಂಗಳಾರತಿ ಮಾಡಿದ್ದಾರೆ.
ಸಿಂಧುಲೋಕನಾಥ್ ಅವರ ಫೇಸ್ ಬುಕ್ ಪುಟದಲ್ಲಿನ ಸಾರಾಂಶವಿಷ್ಟು…
ಈ ಚಿತ್ರಗಳನ್ನು ಮಾಧ್ಯಮ ಜನರಿಗೆ ಅರ್ಪಿಸುತ್ತಿರುವೆ. ಅವರು ನನ್ನನ್ನು ‘ಅನಾರೋಗ್ಯ’ ವ್ಯಕ್ತಿಯೆಂದು ಬಿಂಬಿಸುವ ಮೂಲಕ ಅನೇಕರಲ್ಲಿ ಗೊಂದಲ ಸೃಷ್ಠಿಸಿದ್ದಾರೆ. ಮಾಧ್ಯಮದವರ ಈ ಎಡವಟ್ಟಿನಿಂದ ಹಲವಾರು ಮಂದಿ ನನಗೆ ಸಂದೇಶಗಳನ್ನು ಕಳುಹಿಸಿ ಆರೋಗ್ಯ ವಿಚಾರಿಸುತ್ತಿದ್ದಾರೆ.
ಆದ್ದರಿಂದ ಮಾಧ್ಯಮದವ್ರಿಗೆ ಕೆಲವು ಅಮೂಲ್ಯ ಪದಗಳು..
ನನ್ನ ಕೂದಲನ್ನು ಕತ್ತರಿಸುವುದು ನಾನು ‘ಅನಾರೋಗ್ಯ’ ಎಂದು ಅರ್ಥವಲ್ಲ. ಕೂದಲನ್ನು ಕತ್ತರಿಸುವುದು ನಾನು ‘ಖಿನ್ನತೆಗೆ ಒಳಗಾಗಿದ್ದೇನೆ’ ಎಂದಲ್ಲ. ಕೂದಲನ್ನು ಕತ್ತರಿಸುವುದು ‘ಲಿಂಗ ಪಕ್ಷಪಾತ’ ಆಗಲು ಸಾಧ್ಯವಿಲ್ಲ. ನಾನು ವಿಭಿನ್ನವಾಗಿ ಕಾಣಲು ಯತ್ನಿಸಿದ್ದೇನೆ. ಆದ್ದರಿಂದಲೇ ಈ ಬದಲಾವಣೆ.
ನನ್ನ ಕತ್ತರಿಸಿದ ಕೂದಲಿನ ಕುರಿತು ನಿಮ್ಮ ಅಸಂಬದ್ದ ಅಭಿಪ್ರಾಯ ಹಾಸ್ಯಾಸ್ಪದವಾಗಿದೆ, ಅದು (ಕೂದಲು) ಅಂತಿಮವಾಗಿ ಶೀಘ್ರದಲ್ಲೇ, ಉತ್ತಮವಾಗಿಯೇ ಬೆಳೆಯುತ್ತದೆ.
ಅನಾರೋಗ್ಯ, ಖಿನ್ನತೆ, ಯಾರೊಬ್ಬರ ವೈಯಕ್ತಿಕ ಜೀವನ, ಅವರ ವೈವಾಹಿಕ ಸ್ಥಿತಿಯನ್ನು ಅಗೆಯುವುದು, ನಿಮ್ಮದೇ ಆದ ಉಹೆಗಳನ್ನು ಮಾಡುವುದು , ಕಥೆಗಳನ್ನು ಹೆಣೆಯುವುದು ನಿಮಗೆ ಉತ್ತಮ ಟಿಆರ್‌ಪಿ (ಟೆಲಿವಿಷನ್ ರೇಟಿಂಗ್ ಪಾಯಿಂಟ್) ನೀಡಬಹುದು. ಆದರೆ ಅವರ ಜೀವನದಲ್ಲಿ ಏನಾದರೂ ತಪ್ಪಾದಲ್ಲಿ ನೀವು ಅದರ ಜವಾಬ್ದಾರಿ ಹೂರುವಿರಾ..?
ಒಳ್ಳೆಯ ವಿಷಯಗಳು / ಚಲನಚಿತ್ರ ಪ್ರಚಾರಕ್ಕಾಗಿ ನೀವು ನಿಮ್ಮ ವಾಹಿನಿ ಮುಖ್ಯಸ್ಥರ ಅನುಮತಿ ಕೇಳಬೇಕಾಗುತ್ತದೆ. ಆದರೆ ಈ ರೀತಿಯ ಅನಗತ್ಯ, ವದಂತಿ, ಸುಳ್ಳು ಸುದ್ದಿಗಳನ್ನು ಪ್ರಸಾರ ಮಾಡಲು ಉಚಿತವಾದ ಸ್ಲಾಟ್ ಗಳೇ ಲಭಿಸುತ್ತವೆ. ಈ ಸಾಂಕ್ರಾಮಿಕ ಸಮಯದಲ್ಲಿ ಮಾಧ್ಯಮಗಳು, ಸ್ವಲ್ಪ ಗುಣಾತ್ಮಕ ವಿಷಯಗಳ ಪ್ರಚಾರಕ್ಕೆ ಹೆಚ್ಚಿನ ಸಮಯ ನೀಡುವ ಅವಶ್ಯಕತೆ ಇದೆ.
ಜನರನ್ನು ಗೊಂದಲ ಗೂಡಿಗೆ ತಳ್ಳುವುದನ್ನು ನಿಲ್ಲಿಸಿ. ಮಾಧ್ಯಮದವರಿಗೆ ಸುದ್ಧಿ ಪ್ರಸಾರ ಮಾಡುವ ಸ್ವಾತಂತ್ರ್ಯವಿದ್ದರೆ, ನನಗೂ ವಾಕ್ ಸ್ವಾತಂತ್ರ್ಯವಿದೆ.
ನನ್ನ ಆರೋಗ್ಯದ ಬಗ್ಗೆ , ನನ್ನ ಮನಸ್ಸಿನ ಸ್ಥಿತಿಯ ಬಗ್ಗೆ ಕಾಳಜಿ ವಹಿಸಿದ ಎಲ್ಲರಿಗೂ , ತುಂಬಾ ಧನ್ಯವಾದಗಳು. ನಿಜವಾಗಿಯೂ ಅದ್ಭುತವಾಗಿದೆ. ಎಲ್ಲಾ ಪ್ರೀತಿಗಾಗಿ ಧನ್ಯವಾದಗಳು.
oooo
key words : sindhu.loknath-kannada-film-actress-media-journalist-gossip-report. @SindhuLoknath
ENGLISH SUMMARY :
Dedicating this set of pics to the media people, who potrayed me as a ‘Sick’ person causing panic in many people who kept pouring in messages checking if am alright. A few precious words to the media guys-
Chopping my hair doesn’t mean am ‘Sick’
Chopping hair doesn’t mean am ‘Depressed’
Chopping hair can’t be ‘Gender biased’. I wanted to experiment with a different look n hence I did.
It was ridiculous on your part to make such an issue over my chopped hair which is eventually gonna grow soon (in a much better way) n the words I put up in my previous post. If you haven’t understood what I meant, read it another 10times,May be you will get it.
Tampering somebody’s image showcasing them as sick, depressed, digging into somebody’s personal life, their marital status,making your own assumptions n stories might give you a very good TRP(television rating point). But do you hold yourself responsible when something really goes wrong in their life Cos u tried tampering their image too??
Are u gonna be a part of this blame game too?
You would require permission from higher authority and monetary involvement when you have to cover us for good things/movie promotion. But unwanted news like this is Freeeeeee of cost n free slots?. It’s high time you spread some positivity during this pandemic time.
Stop pushing people to their edge. And am done keeping quiet here. If you have the freedom to showcase ,I have the freedom of speech too.
And to all other people who were concerned about my health or my state of mind, Thank you so much. Am doing really great. Thank u for all the love❤️
.
#itsmylife #amdonekeepingquiet @ The GameChanger