ಬೆಂಗಳೂರು,ಜೂ,5,2019(www.justkannada.in): ಜಿಂದಾಲ್ ಗೆ ಜಮೀನು ನೀಡಿಕೆ ವಿಚಾರ ಸಂಬಂಧ ಕೈಗಾರಿಕಾ ಸಚಿವ ಕೆ ಜೆ ಜಾರ್ಜ್ ಜಿಂದಾಲ್ ಕಂಪನಿ ಸರ್ಕಾರಕ್ಕೆ ಯಾವುದೇ ಬಾಕಿ ಕೊಡಬೇಕಿಲ್ಲ ಅಂತಾ ಹೇಳಿದ್ರು ಆದ್ರೆ ಜಿಂದಾಲ ಸರ್ಕಾರಕ್ಕೆ ಬಾಕಿ ಹಣ ನೀಡಬೇಕಿದೆ. ನಾನು ದಾಖಲೆ ಸಮೇತ ಜಾರ್ಜ್ ಗೆ ಪತ್ರ ಬರೆದಿದ್ದೇನೆ ಎಂದು ಕಾಂಗ್ರೆಸ್ ನಾಯಕ ಹೆಚ್ ಕೆ ಪಾಟೀಲ್ ತಿಳಿಸಿದ್ದಾರೆ.
ಈ ಬಗ್ಗೆ ಮಾಧ್ಯಮಗಳ ಜತೆ ಮಾತನಾಡಿದ ಹೆಚ್.ಕೆ ಪಾಟೀಲ್, ಜಿಂದಾಲ್ ಕಂಪನಿಗೆ ಜಮೀನು ಮಾರಾಟ ಮಾಡುವ ಮೊದಲು ಎಚ್ಚರಿಕೆ ವಹಿಸಿ ಅಂತಾ ಹೇಳಿದ್ದೆ . ಆದ್ರೂ ನಿರ್ಣಯ ಮಾಡಿದ್ದಾರೆ. ಕಾನೂನು ಇಲಾಖೆ ಅಭಿಪ್ರಾಯವನ್ನಾದರೂ ಗಂಭೀರವಾಗಿ ಪರಿಗಣಿಸಬೇಕಿತ್ತು. ಈಗಲಾದರೂ ನಿರ್ಣಯವನ್ನ ಸರ್ಕಾರ ವಾಪಸ್ ಪಡೆಯಲಿ ಎಂದು ಆಗ್ರಹಿಸಿದರು.
ಅತೃಪ್ತ ಕಾಂಗ್ರೆಸ್ ನಾಯಕರ ಕುರಿತು ಪ್ರತಿಕ್ರಿಯಿಸಿದ ಹೆಚ್.ಕೆ ಪಾಟೀಲ್, ರಾಮಲಿಂಗಾರೆಡ್ಡಿ, ರೋಷನ್ ಬೇಗ್ ಹಾಗೂ ಸುಧಾಕರ ಅವರ ಹೇಳಿಕೆಯನ್ನು ಗಮನಿಸಿದ್ದೇನೆ. ಅದ್ರಲ್ಲೂ ಹಿರಿಯ ನಾಯಕರು ಅಸಮಾಧಾನವನ್ನ ಹೊರಹಾಕುತ್ತಿರೋ ಈ ಸಂದರ್ಭದಲ್ಲಿ ಹೈಕಮಾಂಡ್ ಕೂಡಲೇ ಮಧ್ಯಪ್ರವೇಶ ಮಾಡಬೇಕು. ಹಿರಿಯ ಮುಖಂಡರನ್ನು ಕರೆಸಿಕೊಂಡು ಚರ್ಚೆ ಮಾಡಿ, ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯಬೇಕು ಎಂದು ಮನವಿ ಮಾಡಿದ್ದಾರೆ.
ಸಿದ್ದರಾಮಯ್ಯ ವಿರುದ್ಧ ಹೇಳಿಕೆ ವಿಚಾರ, ಅದಕ್ಕೆ ನಾನು ಹೇಳ್ತಿರೋದು, ಹೈಕಮಾಂಡ್ ಈ ವಿಚಾರವನ್ನ ಗಂಭೀರವಾಗಿ ಪರಿಗಣಿಸಿ, ರಾಹುಲ್ ಗಾಂಧಿ ಅವರು ಕರೆದು ತೀರ್ಮಾನ ಮಾಡಲಿ. ಸಿದ್ದರಾಮಯ್ಯ ಈಗಲೂ ನಮ್ಮ ನಾಯಕರು. ಪಕ್ಷವನ್ನ ಎಲ್ಲ ಸೇರಿ ಸದೃಢಗೊಳಿಸಬೇಕಾಗಿದೆ. ಎಲ್ಲರೂ ಅತ್ತ ಗಮನ ನೀಡಬೇಕಿದೆ ಎಂದು ಹೆಚ್.ಕೆ ಪಾಟೀಲ್ ಸಲಹೆ ನೀಡಿದರು.
Key words: The Jindal Company has to pay the government- HK Patil wrote letter to Minister KJ George
#JindalCompany #HKPatil #letter #MinisterKJGeorge