ಮೈಸೂರು,ಮೇ,21,2019(www.justkannada.in): ತೋಟಗಾರಿಕೆ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಮಾವು ಅಭಿವೃದ್ದಿ ಮತ್ತು ಮಾರುಕಟ್ಟೆ ನಿಗಮ ನಿಯಮಿತಿ ವತಿಯಿಂದ ಮೇ 24 ರಿಂದ 28ರವರೆಗೆ ಮೈಸೂರಿನಲ್ಲಿ ಮಾವು ಮತ್ತು ಹಲಸು ಮೇಳ ಆಯೋಜಿಸಲಾಗಿದೆ.
ನಗರದ ಕರ್ಜನ್ ಪಾರ್ಕ್ ನಲ್ಲಿ ಮಾವು ಮತ್ತು ಹಲಸು ಮೇಳ ನಡೆಯಲಿದೆ. ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಸಂಜಯ್, ಮೇಳದಲ್ಲಿ ವಿವಿಧ ಜಾತಿಯ ಮಾವು ಹಾಗೂ ಹಲಸು ತಳಿಗಳು ಸೇರಿದಂತೆ ಪ್ರದರ್ಶನ ಮಾಡಲಾಗುವುದು. ಈ ಹಿನ್ನೆಲೆ ನಗರದ ಕರ್ಜನ್ ಪಾರ್ಕ್ ನಲ್ಲಿ ಸುಮಾರು 40 ಮಾವಿನ ಹಣ್ಣಿನ ಮಳಿಗೆಗಳು ಹೊರ ಭಾಗದಲ್ಲಿ ಹಾಗೂ ಒಳಭಾಗದಲ್ಲಿ 2 ಹಲಸು ಹಣ್ಣಿನ ಮಳಿಗೆಗಳನ್ನು ನಿರ್ಮಾಣ ಮಾಡಲಾಗುತ್ತದೆ ಎಂದು ತಿಳಿಸಿದರು.
ಪರಿಸರ ಸ್ನೇಹಿ ಮೇಳ ಆಯೋಜನೆಗೆ ಒತ್ತು..
5 ದಿನಗಳ ಕಾಲ ನಡೆಯಲಿರುವ ಮಾವು ಹಾಗೂ ಹಲಸು ಮೇಳದಲ್ಲಿ ಪ್ಲಾಸ್ಟಿಕ್ ಬದಲು ಬಟ್ಟೆ ಬ್ಯಾಗ್ ಬಳಸಲು ತೋಟಗಾರಿಕೆ ಇಲಾಖೆಯಿಂದ ಮನವಿ ಮಾಡಲಾಗಿದೆ. ರೈತರು ಹಾಗೂ ಗ್ರಾಹಕರು ಕೂಡ ಹಣ್ಣುಗಳನ್ನು ಗ್ರಾಹಕರಿಗೆ ಒದಗಿಸಲು ಪೇಪರ್ ಕಾರ್ಟನೆ ಬಾಕ್ಸ್ ಹಾಗೂ ಬಟ್ಟೆ ಬ್ಯಾಗ್ ಗಳನ್ನು ಬಳಸಬೇಕು ಎಂದು ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಸಂಜಯ್ ಹೇಳಿದರು.
ಮೈಸೂರು, ಚಾಮರಾಜನಗರ , ಮಂಡ್ಯ , ರಾಮನಗರ ಮತ್ತು ಬೆಂಗಳೂರು ಜಿಲ್ಲೆಗಳ ಮಾವು ಬೆಳೆಗಾರರು ಸೇರಿದಂತೆ ವಿವಿಧ ಜಿಲ್ಲೆಗಳ ಮಾವು ಹಾಗೂ ಹಲಸು ಬೆಳೆಗಾರರು ಈ ಮೇಳದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.
Key words: The mango and jackfruit fair is held from May 24 to 5 days in Mysore.
#mysore #mango #fair