ಬೆಂಗಳೂರು:
ಕನಾ೯ಟಕದ ಹಲವು ಕ್ರೀಡಾಪಟುಗಳು ವಿವಿಧ ಕ್ರೀಡೆಗಳಲ್ಲಿ ಪ್ರತಿನಿಧಿಸಿ ದೇಶಕ್ಕೆ ಕೀತಿ೯ ತಂದಿದ್ದಾರೆ. ಇಂಥ ಕೆಲವು ಕ್ರೀಡಾಪಟುಗಳ ಬಗ್ಗೆ ಗಮನಿಸೋಣ.
೧) ರಾಹುಲ ದ್ರಾವಿಡ್
ಭಾರತ ಕ್ರಿಕೆಟ್ ತಂಡದ ಆಟಗಾರರಲ್ಲೊಬ್ಬರು ಮತ್ತು ತಂಡದ ಮಾಜಿ ನಾಯಕ. ಮೂಲತಃ ಮಧ್ಯಪ್ರದೇಶದವರಾದರೂ ಇವರು ಬೆಳೆದದ್ದು ಬೆಂಗಳೂರಿನಲ್ಲಿ. ತಮ್ಮ ೧೨ನೇ ವಯಸ್ಸಿನಲ್ಲಿಯೇ ಕ್ರಿಕೇಟ ಆಡಲು ಆರಂಭಿಸಿದರು. ಅಂಡರ್-೧೫, ಅಂಡರ್-೧೭, ಅಂಡರ್-೧೯ ಮಟ್ಟದ ತಂಡಗಳಲ್ಲಿ ಕನಾ೯ಟಕದ ಪರವಾಗಿ ಆಡಿದರು.
೧೯೯೬ ರಲ್ಲಿ London Lord’s ನಲ್ಲಿ ತಮ್ಮ ಪ್ರಥಮ ಟೆಸ್ಟ ಮ್ಯಾಚನ್ನು ಆಡಿದರು. ೧೯೯೬ರಿಂದ ಭಾರತ ಕ್ರಿಕೆಟ್ ತಂಡದ ಸದಸ್ಯರಾಗಿರುವ ರಾಹುಲ್ ದ್ರಾವಿಡ್ ಬಲಗೈ ಬ್ಯಾಟ್ಸ್‌ಮನ್.ಔಟಾಗದೆಯೇ ತೀಕ್ಷ್ಣವಾಗಿ ಬ್ಯಾಟಿಂಗ್ ಮಾಡುವ ಇವರಿಗೆ ಸುದ್ದಿ ಮಾಧ್ಯಮದವರಿಂದ “The wall” (ಗೋಡೆ) ಎಂದೂ ಬಣ್ಣಿಸಲಾಗುತ್ತದೆ. ರಾಹುಲ್ ದ್ರಾವಿಡ್, ಟೆಸ್ಟ್ ಕ್ರಿಕೆಟ್ನಲ್ಲಿ ಅತಿ ಹೆಚ್ಚು ಕ್ಯಾಚ್ (೨೧೦) ಹಿಡಿದ ಆಟಗಾರರಾಗಿರುತ್ತಾರೆ. ಆಗಸ್ಟ್ ೨೦೧೧ರಲ್ಲಿ ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್ ನಲ್ಲಿ ೧೦,೦೦೦ ರನ್ ಗಳಿಸಿರುವ ರಾಹುಲ್ ದ್ರಾವಿಡ್ ಸಾಧನೆಯನ್ನು ನೆನಪಿಸುವ ಗೋಡೆಯೊಂದನ್ನು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಿರ್ಮಿಸಿದ್ದಾರೆ.
೨) ವಿರಾಟ ಕೊಹ್ಲಿ
ಭಾರತವು ವಿಶ್ವಕ್ಕೆ ಅನೇಕ ಶ್ರೇಷ್ಠ ಕ್ರಿಕೆಟಿಗರನ್ನು ನೀಡಿದೆ ಆದರೆ ಬಹುಶಃ ವಿರಾಟ್ ಕೊಹ್ಲಿಯಂತ ಮಹತ್ವಾಕಾಂಕ್ಷಿ ಕ್ರಿಕೆಟರ್ ಯಾರು ಇಲ್ಲಾ. ಇವರು ದೆಹಲಿಯಲ್ಲಿ ನವೆಂಬರ್ ೫, ೧೯೮೮ ರಲ್ಲಿ ಜನಿಸಿದರು. ವಿರಾಟ್ ಕೊಹ್ಲಿ ಭಾರತ ಕ್ರಿಕೆಟ್ ತಂಡದ ಆಟಗಾರ ಹಾಗೂ ಭಾರತ ಕ್ರಿಕೆಟ್ ತಂಡದ ನಾಯಕ.
ಇವರು ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮಾನ್. ಇವರು ಬಲಗೈ ಮಧ್ಯಮ ವೇಗದ ಬೌಲಿಂಗ್ ಕೂಡ ಮಾಡಬಲ್ಲರು. ಕೊಹ್ಲಿ ೨೦೦೮ ರಲ್ಲಿ ಮಲೇಶಿಯಾದಲ್ಲಿ ನಡೆದ ೧೯ ವರ್ಷ ವಯಸ್ಸಿನೊಳಗಿರುವವರ ಕ್ರಿಕೆಟ್ ವಿಶ್ವಕಪ್‍ನಲ್ಲಿ ಭಾರತ ತಂಡದ ನಾಯಕರಾಗಿ ವಿಶ್ವಕಪ್ ಗೆದ್ದರು. IPL Royal Challengers Bangalore ತಂಡಕ್ಕೆ ಆಡುತ್ತಾರೆ. ತಮ್ಮ ಮೊದಲ ಏಕದಿನ ಪಂದ್ಯವನ್ನು ೧೮ ಆಗಸ್ಟ್ ೨೦೦೮ ರಲ್ಲಿ ಆಡಿದರು.
ರಣಜಿ ಟ್ರೋಫಿಯಲ್ಲಿ Delhi ಕ್ರಿಕೆಟ್ ತ೦ಡದ ಪರವಾಗಿ ಆಡುತ್ತಾರೆ.ಇವರಿಗೆ ೨೦೦೭ ರಲ್ಲಿ ಪದ್ಮಶ್ರೀ ಪ್ರಶಸ್ತಿ ಮತ್ತು ೨೦೦೮ ರಲ್ಲಿ ಖೇಲ್ ರತ್ನ ಪ್ರಶಸ್ತಿಯಿಂದ ಸನ್ಮಾನಿಸಲಾಗಿದೆ. ಇವರು ODI ನಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ಕ್ರಮಾಂಕದಲ್ಲಿ ಎರಡನೇಯ ಸ್ಥಾನದಲ್ಲಿದ್ದಾರೆ.ಇವರನ್ನು ಜಗತ್ತಿನ ಅತ್ಯುತ್ತಮ ಬ್ಯಾಟ್ಸ್ ಮನ್ ಎಂದು ಪರಿಗಣಿಸಲಾಗಿದೆ.
ವಿರಾಟ್ ಕೊಹ್ಲಿ ಹಲವಾರು brands ಪ್ರಚಾರ ಮಾಡಿದ್ದಾರೆ. ಅವರು online betting websites ಪ್ರಚಾರ ಮಾಡಿದ್ದಾರೆ. ಭಾರತದಲ್ಲಿ ಈಗ ಕಾನೂನುಬದ್ಧವಾಗಿ ಮತ್ತು ಸುರಕ್ಷಿತವಾಗಿ ಆನ್‌ಲೈನ್‌ನಲ್ಲಿ ಬಾಜಿ ಕಟ್ಟಲು ಸಾಧ್ಯವಿದೆ. ಈ ವೆಬ್‌ಸೈಟ್‌ಗಳು betting on IPL ಮಾಡಲು ನಿಮಗೆ ಅವಕಾಶ ನೀಡುತ್ತವೆ.
೩) ಪ್ರಕಾಶ ಪಡುಕೋಣೆ
ಪ್ರಕಾಶ್ ಪಡುಕೋಣೆ ಭಾರತ ಕಂಡ ಅತ್ಯುತ್ತಮ ಬ್ಯಾಡ್ಮಿಂಟನ್ ಆಟಗಾರರಲ್ಲೊಬ್ಬರು.ಪಡುಕೋಣೆ ೧೯೫೫ ಜೂನ್ ೧೦ ರಂದು ಬೆಂಗಳೂರಿನಲ್ಲಿ ಜನಿಸಿದರು. ಇವರು “All England Badminton” ಪ್ರಶಸ್ತಿ ಗೆದ್ದ ಪ್ರಥಮ ಭಾರತೀಯ.೧೯೬೭ ರಲ್ಲಿ ತಮ್ಮ ಪ್ರಥಮ ಅಧಿಕೃತ ಟೂನ೯ಮೆಂಟ ಆಡಿದರು. ಅದರಲ್ಲಿ ಸೋಲನ್ನನುಭವಿಸಿದರೂ ಎರಡು ವಷ೯ಗಳ ನಂತರ ಕರ್ನಾಟಕ ರಾಜ್ಯ ಜೂನಿಯರ್ ಚಾಂಪಿಯನ್ ಆದರು.ತಮ್ಮ ಆಟದ ಶೈಲ್ಲಿಯಲ್ಲಿ ಮತ್ತಷ್ಟು ಪರಿಣಿತರಾದ ಇವರು ೧೯೭೨ ರಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಜೂನಿಯರ್ ಮತ್ತು ಸೀನಿಯರ್ ಚಾಂಪಿಯನ್‍ಶಿಪ್ ಎರಡನ್ನೂ ಗೆದ್ದರು.
೧೯೭೯ ರ ವರೆಗೆ ಸತತವಾಗಿ ಭಾರತದ ರಾಷ್ಟ್ರೀಯ ಚಾಂಪಿಯನ್‍ಶಿಪ್ ಇವರದಾಯಿತು.ಕಾಮನ್ವೆಲ್ತ್ ಒಕ್ಕೂಟದ ಚಾಂಪಿಯನ್‍ಶಿಪ್ ಅವರ ಮೊದಲ ಮುಖ್ಯ ಅಂತಾರಾಷ್ಟ್ರೀಯ ಯಶಸ್ಸು. ನಂತರ ಲಂಡನ್ ನ Master’s Open, Danish Open ಮತ್ತು Swedish Open ಗಳನ್ನು ಗೆದ್ದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತರಾದರು. ಇವರು ಹೆಚ್ಚಿನ ತರಬೇತಿ ಪಡೆದದ್ದು ಡೆನ್ಮಾಕ೯ನಲ್ಲಿ.ಇವರಿಗೆ ೧೯೮೨ ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಲಾಯಿತು. ೧೯೯೧ ರಲ್ಲಿ ನಿವೃತ್ತಿಯಾದನಂತರ ರಾಷ್ಟ್ರೀಯ ಬ್ಯಾಡ್ಮಿಂಟನ್ ತಂಡದ ಮುಖ್ಯ ತೆರಬೇತುದಾರರಾಗಿ ಕಾರ್ಯ ನಿರ್ವಹಿಸಿದರು.
ಈಗ ಇವರು “ಪ್ರಕಾಶ್ ಪಡುಕೋಣೆ ಬ್ಯಾಡ್ಮಿಂಟನ್ ಅಕಾಡೆಮಿ”ಯನ್ನು ನಡೆಸುತ್ತಾ ಬಂದಿದ್ದಾರೆ.
೪) ಪಂಕಜ ಆಡ್ವಾನಿ
ಭಾರತದ ಅತ್ಯಂತ ಸ್ಥಿರ ಕ್ರೀಡಾಪಟುಗಳಲ್ಲಿ ಒಬ್ಬರೆನಿಸಿರುವ ಹಾಗೂ ಗೋಲ್ಡನ್ ಬಾಯ್ ಎಂದು ಕರೆಯಲ್ಪಡುವ ಪಂಕಜ್ ಆಡ್ವಾಣಿ ೧೯೮೫ ರಲ್ಲಿ ಪುನೆಯಲ್ಲಿ ಜನಿಸಿದರು. ಕ್ರಿಕೆಟಿಗೆ ಹೆಚ್ಚು ಮಹತ್ವವಿರುವ ಭಾರತ ದೇಶದಲ್ಲಿ ತಮ್ಮ Billiards and Snooker ಆಟದಿಂದ ದೇಶದಲ್ಲಿ ಕ್ರೀಡೆಗಳ ದೃಷ್ಟಿಕೋನವನ್ನೇ ಬದಲಾಯಿಸಿದರು. ತಮ್ಮ ಶಿಕ್ಷಣವನ್ನು ಬೆಂಗಳೂರಿನಲ್ಲಿ ಮುಗಿಸಿದ ಕೇವಲ ೧೫ ನೇ ವಯಸ್ಸಿನಲ್ಲಿ “ಇಂಡಿಯನ್ ಜ್ಯುನಿಯರ್ ಬಿಲಿಯಡ್ಸ್೯ ಚಾಂಪಿಯನ್ ಷಿಪ್” ನ್ನು ಗೆದ್ದರು.
೨೦೦೩ ರಲ್ಲಿ ಚೀನಾದಲ್ಲಿ ನಡೆದ “World snooker championship“ ನಲ್ಲಿ ತಮ್ಮ ಪ್ರಥಮ ಅಂತರಾಷ್ರ್ಟೀಯ ಪ್ರಶಸ್ತಿಯನ್ನು ಪಡೆದರು.
ರೆಡ್ ಬುಲ್ ಟೀಮ್ ಸ್ನೂಕರ್ ಚಾಂಪಿಯನ್ ಷಿಪ್, ಇಂಗ್ಲೀಷ ಬಿಲಿಯಡ್ಸ್೯ನಲ್ಲಿ ಚಿನ್ನದ ಪದಕ ಹೀಗೆ ಹಲವಾರು ಅಂತರಾಷ್ರ್ಟೀಯ ಟೂನ೯ಮೆಂಟಗಳನ್ನು ಗೆದ್ದು ದೇಶದ ಗೌರವವನ್ನು ಹೆಚ್ಚಿಸಿದ್ದಾರೆ. ಹೀಗೆ ಅವರ ಅದ್ಬುತ ಸಾಧನೆಗೆ ಅವರನ್ನು “ಅಜು೯ನ ಪುರಸ್ಕಾರ” ಮತ್ತು “ರಾಜೀವ್ ಖೇಲ್ ರತ್ನ” ಪುರಸ್ಕಾರದಿಂದ ಸನ್ಮಾನಿಸಲಾಗಿದೆ.
೫) ನಿಶಾ ಮಿಲೆಟ್
ನಿಶಾ ಮಿಲೆಟ್ (ಜನನ ೨೦ ಮಾರ್ಚ್೧೯೮೨) ಭಾರತದ ಕರ್ನಾಟಕ ರಾಜ್ಯದ ಬೆಂಗಳೂರಿನ ಈಜುಗಾರ್ತಿ.ಅರ್ಜುನ ಪ್ರಶಸ್ತಿ ವಿಜೇತೆ ನಿಶಾ ಮಿಲೆಟ್ ಮತ್ತು ೨೦೦೦ನೆ ಇಸವಿಯ Sydney Olympics ಈಜು ತಂಡದಲ್ಲಿ ಭಾಗವಹಿಸಿದ ಏಕೈಕ ಮಹಿಳೆ.
೧೯೯೪ರಲ್ಲಿ ಇನ್ನೂ ಸಬ್-ಜ್ಯೂನಿಯರ್ ಆಗಿದ್ದಾಗ ರಾಷ್ಟ್ರಮಟ್ಟದ ಸೀನಿಯರ್ ಸ್ಪರ್ಧೆಯಲ್ಲಿ ಎಲ್ಲಾ ಐದು ಫ್ರೀ ಸ್ಟೈಲ್ ಗಳಲ್ಲಿ ಚಿನ್ನದ ಪದಕವನ್ನು ಗಳಿಸಿದರು. ಅದೇ ವರ್ಷ ಹಾಂಗಕಾಂಗ್ ಏಜ್ ಗ್ರೂಪ್ ಚಾಂಪಿಯನ್ ಶಿಪ್ ನಲ್ಲಿ ಅವರು ಪ್ರಥಮ ಬಾರಿಗೆ ಅಂತರಾಷ್ರ್ಟೀಯ ಮಟ್ಟದಲ್ಲಿ ಭಾಗವವಹಿಸಿ ಪದಕವನ್ನೂ ಪಡೆದರು. ಇಲ್ಲಿಂದ ಈಜು ನಿಶಾ ಅವರ ವೃತ್ತಿಜೀವನವಾಯಿತು.ಏಷ್ಯನ್ ಗೇಮ್ಸ್ (ಥೈಲ್ಯಾ೦ಡ್) ನಲ್ಲಿ ಮತ್ತು ವರ್ಲ್ಡ್ ಚ್ಯಾಂಪಿಯನ್ ಶಿಪ್ ನಲ್ಲಿ( ಪರ್ತ್ ,ಇ೦ಡಿಯಾನಪೋಲಿಸ್) ಭಾರತವನ್ನು ಪ್ರತಿನಿಧಿಸಿದರು.
ಅದಲ್ಲದೆ Afro-Asian games ಹಾಗೂ SAF games ನಲ್ಲಿ ದೇಶಕ್ಕೆ ಪದಕಗಳನ್ನು ಗೆದ್ದರು.ಇವರಿಗೆ ಪ್ರಧಾನ ಮಂತ್ರಿ ಪುರಸ್ಕಾರ, ಅರ್ಜುನ ಪ್ರಶಸ್ತಿ,ಕರ್ನಾಟಕ ರಾಜ್ಯ ಏಕಲವ್ಯ ಪ್ರಶಸ್ತಿ ಹೀಗೆ ಹಲವು ಪ್ರಶಸ್ತಿಗಳಿಂದ ಸನ್ಮಾನಿಸಲಾಗಿದೆ.