ಬೆಂಗಳೂರು,ಏಪ್ರಿಲ್,5,2021(www.justkannada.in): ತಮಿಳುನಾಡಿನ ಚುನಾವಣಾ ಪ್ರಚಾರ ಸಭೆಗಳನ್ನು ಗಮನಿಸಿದಾಗ ಬಿಜೆಪಿ ಮತ್ತು ಎನ್‍ಡಿಎ ಅಂಗ ಪಕ್ಷಗಳು ಅತ್ಯುತ್ತಮ ಫಲಿತಾಂಶ ಪಡೆಯುವ ಸಾಧ್ಯತೆ ಗೋಚರಿಸುತ್ತಿದೆ ಎಂದು ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು ಮತ್ತು ತಮಿಳುನಾಡು ರಾಜ್ಯ ಉಸ್ತುವಾರಿಗಳೂ ಆದ ಶ್ರೀ ಸಿ.ಟಿ. ರವಿ ಅವರು ವಿಶ್ವಾಸ ವ್ಯಕ್ತಪಡಿಸಿದರು.
ನಗರದ ಸೆವೆನ್ ಮಿನಿಸ್ಟರ್ಸ್ ಕ್ವಾರ್ಟರ್ಸ್‍ನ ತಮ್ಮ ನಿವಾಸದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೂತ್ ಗೆದ್ದು ಕೊಡಿ, ಅಭ್ಯರ್ಥಿ ಗೆಲ್ಲಿಸಿ ಎಂಬ ಚಿಂತನೆಯೊಂದಿಗೆ ಪಕ್ಷ ತನ್ನನ್ನು ತೊಡಗಿಸಿಕೊಂಡಿತ್ತು. ತಮಿಳು ಅಸ್ಮಿತೆ ಮತ್ತು ಅಭಿವೃದ್ಧಿ ಕಾರ್ಯಸೂಚಿಯನ್ನು ಮತದಾರರ ಮುಂದಿಟ್ಟಿದ್ದು ಅದು ಉತ್ತಮ ಫಲಿತಾಂಶ ನೀಡಲಿದೆ. ಡಿಎಂಕೆ ಮತ್ತು ಕಾಂಗ್ರೆಸ್ ಪಕ್ಷದ ವಂಶ ಪಾರಂಪರ್ಯದ ರಾಜಕಾರಣ ಹಾಗೂ ಭ್ರಷ್ಟಾಚಾರವನ್ನು ಜನರ ಮುಂದಿಡಲಾಗಿದೆ. ಪ್ರಧಾನಿ ಅವರು ತಮಿಳುನಾಡಿನ ಅಭಿವೃದ್ಧಿಗೆ ನೀಡಿದ ಕೊಡುಗೆಗಳನ್ನು ಜನರಿಗೆÀ ತಿಳಿಸಲಾಗಿವೆ ಎಂದು ವಿವರಿಸಿದರು.
ತಮಿಳುನಾಡಿನಲ್ಲಿ ಹಿಂದೆಯೂ ಎಐಎಡಿಎಂಕೆ, ಎನ್.ಡಿ.ಎ ಅಂಗ ಪಕ್ಷವಾಗಿತ್ತು. ತಮಿಳುನಾಡಿನಲ್ಲಿ ಬಿಜೆಪಿ ಗೆಲುವಿಗಾಗಿ ವಿಶೇಷ ಶ್ರಮ ವಹಿಸಿದೆ ಆದ್ದರಿಂದ ತಮಿಳುನಾಡು ಕಬ್ಬಿಣದ ಕಡಲೆಯಲ್ಲ ಎಂಬುದು ಫಲಿತಾಂಶದ ಮೂಲಕ ಗೊತ್ತಾಗಲಿದೆ. ಶಶಿಕಲಾ ಅವರು ಎಐಎಡಿಎಂಕೆ ಪರವಾಗಿದ್ದಾರೆ ಎಂದು ತಿಳಿಸಿದರು.
ತಮಿಳುನಾಡಿನಲ್ಲಿ ಬಿಜೆಪಿ ಪ್ರಮುಖ ಪಕ್ಷವಲ್ಲ ಎನ್‍ಡಿಎಯ ಒಂದು ಭಾಗವಾಗಿ ಬಿಜೆಪಿ ಸ್ಪರ್ಧಿಸಿದೆ, ಎಐಎಡಿಎಂಕೆ ಜೊತೆಗೆ ಬಿಜೆಪಿ, ಪಿಎಂಕೆ, ತಮಿಳ್ ಮಹಿಳಾ ಕಾಂಗ್ರೆಸ್ ಮತ್ತಿತರ ಪಕ್ಷಗಳು ಸ್ಪರ್ಧಿಸಿವೆ. ಎದುರಾಳಿ ಪಕ್ಷವಾಗಿ ಡಿಎಂಕೆ, ಕಾಂಗ್ರೆಸ್ ಮತ್ತಿತರ ಪಕ್ಷಗಳಿವೆ. ಮೇಲ್ನೋಟಕ್ಕೆ ಎಐಎಡಿಎಂಕೆ ಮತ್ತು ಡಿಎಂಕೆ ನಡುವೆ ಸ್ಪರ್ಧೆ ಇದೆ. ಇಡೀ ಚುನಾವಣೆಯ ಕಾರ್ಯಸೂಚಿಯÀನ್ನು ಬಿಜೆಪಿ ಹೆಣೆದಿದೆ ಎಂದರು.
ಚುನಾವಣಾ ಪೂರ್ವದಲ್ಲಿ ನವೆಂಬರ್‍ನಲ್ಲಿ ನಾವು ವೆಟ್ರಿವೇಲ್ ಯಾತ್ರೆಯನ್ನು ಕೈಗೊಂಡೆವು. ತಮಿಳುನಾಡಿನ ಆರಾಧ್ಯ ದೈವ ಲಾರ್ಡ್ ಮುರುಗನ್ ಅವರನ್ನು ಅವಹೇಳನ ಮಾಡುವ ಡಿಎಂಕೆ ಅಂಗ ಪಕ್ಷಗಳ ಕ್ರಮದ ವಿರುದ್ದ ಈ ಯಾತ್ರೆ ಹಮ್ಮಿಕೊಳ್ಳಲಾಯಿತು. ಈ ಯಾತ್ರೆಗೆ ಅಭೂತಪೂರ್ವ ಬೆಂಬಲವೂ ಲಭಿಸಿತು. ಈ ಯಾತ್ರೆ ಪರಿಣಾಮವಾಗಿ ನಾವು ಹಿಂದೂ ವಿರೋಧಿಯಲ್ಲ ಎಂದು ತೋರಿಸಿಕೊಳ್ಳಲು ಡಿಎಂಕೆ ಮುಂದಾಯಿತು ಎಂದು ಅವರು ತಿಳಿಸಿದರು.
ಜಲ್ಲಿಕಟ್ಟು ಚುನಾವಣೆಯ ಪ್ರಮುಖ ವಿಷಯವಾಯಿತು. ಸಂಸ್ಕøತಿಯ ಉಳಿವಿನ ದೃಷ್ಟಿಯಿಂದ ಜಲ್ಲಿಕಟ್ಟು ಮೇಲೆ ಹೇರಿದ್ದ ನಿಷೇಧವನ್ನು ಪ್ರಧಾನಿಗಳಾದ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದ ಸರಕಾರದ ಪ್ರಯತ್ನದಿಂದ ತೆರವುಗೊಳಿಸಲಾಗಿತ್ತು. ಜಲ್ಲಿಕಟ್ಟು ಕ್ರೀಡೆಯನ್ನು ಕಾಂಗ್ರೆಸ್‍ನವರು ಬೆಂಬಲಿಸುವುದು ಅನಿವಾರ್ಯವಾಯಿತು ಎಂದು ತಿಳಿಸಿದರು.
ಕರ್ನಾಟಕ ಮತ್ತು ತೆಲಂಗಾಣದಿಂದ ಪಕ್ಷದ ಪ್ರಮುಖರು ಚುನಾವಣಾ ಉಸ್ತುವಾರಿಗಳಾಗಿ ಪಾಲ್ಗೊಂಡಿದ್ದರು. ಸಂಘಟನಾ ಉಸ್ತುವಾರಿಗಳಾಗಿ ನಾನು ಮತ್ತು ತೆಲಂಗಾಣದ ವಿಧಾನಪರಿಷತ್ ಮಾಜಿ ಸದಸ್ಯರಾದ ಶ್ರೀ ಸುಧಾಕರ್ ರೆಡ್ಡಿ ಕಾರ್ಯನಿರ್ವಹಿಸಿದರು. ಕರ್ನಾಟಕದ ಸಚಿವರಾದ ಶ್ರೀ ಬೈರತಿ ಬಸವರಾಜ್, ಶ್ರೀ ಎಸ್.ಟಿ. ಸೋಮಶೇಖರ್, ಸಂಸದರಾದ ಶ್ರೀ ಪಿ.ಸಿ. ಮೋಹನ್, ಶ್ರೀ ಮುನಿಸ್ವಾಮಿ, ಶಾಸಕರಾದ ಶ್ರೀ ಸತೀಶ್ ರೆಡ್ಡಿ, ಶ್ರೀ ಮುನಿರತ್ನ, ಶ್ರೀ ರವಿ ಸುಬ್ರಹ್ಮಣ್ಯ ಹಾಗೂ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡು ತಮಿಳುನಾಡಿನಲ್ಲಿ ಪಕ್ಷದ ಗೆಲುವಿಗೆ ಶ್ರಮಿಸಿದ್ದಾರೆ ಎಂದರು.
ಕರ್ನಾಟಕದಿಂದ ಸಂಸದರಾದ ಶ್ರೀ ಆನೆಕಲ್ ನಾರಾಯಣಸ್ವಾಮಿ, ಸಚಿವರಾದ ಶ್ರೀ ಆರ್ ಅಶೋಕ್, ಶ್ರೀ ವಿ ಸೋಮಣ್ಣ, ಶಾಸಕರಾದ ಶ್ರೀ ರಾಜು ಗೌಡ ಅವರೂ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿದ್ದರು. ಪ್ರಧಾನ ಮಂತ್ರಿಗಳು ಚುನಾವಣಾ ಪೂರ್ವದಲ್ಲಿ ಎರಡು ಸಭೆಗಳಿಗೆ ಬಂದು ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದ್ದರು. ವಾಂಗೋ ಮೋದಿ, ವಣಕ್ಕಂ ಮೋದಿ ಕಾರ್ಯಕ್ರಮದ ಮೂಲಕ ಪ್ರಧಾನಿ ಅವರನ್ನು ಅದ್ದೂರಿಯಾಗಿ ಸ್ವಾಗತಿಸಲಾಗಿತ್ತು. ರಾಷ್ಟ್ರೀಯ ಅಧ್ಯಕ್ಷರು, ಪ್ರಧಾನಿ ಅವರು ಮಾತ್ರವಲ್ಲದೆ ಕೇಂದ್ರ ಗೃಹ ಸಚಿವರು, ಉತ್ತರ ಪ್ರದೇಶದ ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯನಾಥ್ ಅವರು ಹಲವು ಸಭೆಗಳಲ್ಲಿ ಭಾಗವಹಿಸಿದ್ದರು ಎಂದರು.
ವಂಶಪಾರಂಪರ್ಯದ ಆಡಳಿತ ನಮ್ಮ ಪಕ್ಷದ ಡಿಎನ್‍ಎ ಒಳಗೆ ಇಲ್ಲ. ಕಾಂಗ್ರೆಸಿಗೆ ನೆಹರೂ ಕುಟುಂಬ ಮಾಲಿಕರು, ಡಿಎಂಕೆಗೆ ಕರುಣಾನಿಧಿ ಕುಟುಂಬದ್ದೇ ಮಾಲಕತ್ವ, ಜೆಡಿಎಸ್‍ಗೆ ದೇವೇಗೌಡರ ಕುಟುಂಬವೇ ಮಾಲಕರು. ಎನ್‍ಸಿಪಿಗೆ ಶರದ್ ಪವಾರ್ ಕುಟುಂಬವೇ ಮಾಲಕರು. ಆದರೆ, ನಮ್ಮ ಪಕ್ಷಕ್ಕೆ ಕಾರ್ಯಕರ್ತರೇ ಮಾಲಕರು ಎಂದು ಪ್ರಶ್ನೆಗೆ ಉತ್ತರಿಸಿದರು.
ರಾಜ್ಯದಲ್ಲಿ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್. ಯಡಿಯೂರಪ್ಪ ಅವರು ನಮ್ಮ ಸರ್ವೋಚ್ಚ ನಾಯಕರು. ಆದರೆ, ಕಾರ್ಯಕರ್ತರೇ ನಮ್ಮ ಪಕ್ಷದ ಮಾಲಕರು. ಕರ್ನಾಟಕದಲ್ಲಿ ಕೋರ್ ಕಮಿಟಿ ಹಾಗೂ ಕೇಂದ್ರದಲ್ಲಿ ಸಂಸದೀಯ ಮಂಡಳಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ. ಅವುಗಳು ಕುಟುಂಬ ಆಧಾರಿತವಾಗಿಲ್ಲ. ವಂಶ ಪಾರಂಪರ್ಯವಾದ ಉತ್ತರಾಧಿಕಾರಿ ಪ್ರವೃತ್ತಿ ನಮ್ಮ ಪಕ್ಷದೊಳಗಿಲ್ಲ ಎಂದು ಶ್ರೀ ಸಿ.ಟಿ.ರವಿ ಅವರು ಸ್ಪಷ್ಟಪಡಿಸಿದರು.
key words: NDA- result-Tamil Nadu-National Secretary General-ct Ravi