ಮಿಡತೆ ದಾಳಿ : ಪಾಕಿಸ್ತಾನದಲ್ಲಿ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಣೆ

 

ಇಸ್ಲಾಮಾಬಾದ್, ಫೆ.3, 2020 : ( www.justkannada.in news ) ಮರುಭೂಮಿ ಮಿಡತೆಗಳ ಆಕ್ರಮಣದಿಂದ ವ್ಯಾಪಕ ಪ್ರಮಾಣದಲ್ಲಿ ಬೆಳೆಗಳು ನಾಶಗೊಂಡಿದೆ. ಈ ಮಿಡತೆ ಹಿಂಡುಗಳನ್ನು ತೊಡೆದುಹಾಕಲು ಮುಂದಾಗಿರುವ ಪಾಕಿಸ್ತಾನ ಸರ್ಕಾರ, ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಿಸಿದೆ.

ಈಗಾಗಲೇ ಸಿಂಧ್‌ ಪ್ರಾಂತ್ಯದಲ್ಲಿ ಮಿಡತೆಗಳ ಹಾವಳಿಯಿಂದ ರೈತರು ಬೆಳೆದ ಬೆಳೆಗಳು ಸಂಪೂರ್ಣ ನಾಶವಾಗಿದ್ದು, ಇದೀಗ ಈ ಮಿಡತೆ ಹಿಂದು ಪಂಜಾಬ್‌ ಗೆ ದಾಳಿ ಇಟ್ಟಿದ್ದು, ಇಲ್ಲು ಸಹ ದೊಡ್ಡ ಪ್ರಮಾಣದಲ್ಲಿ ಬೆಳೆನಾಶ ಮಾಡುತ್ತಿದೆ  ಎಂದು ಮಾಧ್ಯಮಗಳು ವರದಿ ಮಾಡಿವೆ.

The Pakistan government has declared a national emergency. to eliminate the attacking swarms of desert locusts
ಈ ಹಿನ್ನೆಲೆಯಲ್ಲಿ ಪ್ರಧಾನಿ ಇಮ್ರಾನ್ ಖಾನ್ , ತುರ್ತು ಸಭೆ ಕರೆದು ಅಲ್ಲಿ ಮಿಡತೆ ಹಾವಳಿ ನಿಯಂತ್ರಣ ಸಂಬಂಧ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಿಸಿದರು ಎಂದು ಡಾನ್ ಪತ್ರಿಕೆ ವರದಿ ಮಾಡಿದೆ.

ಫೆಡರಲ್ ಮಂತ್ರಿಗಳು ಮತ್ತು ನಾಲ್ಕು ಪ್ರಾಂತ್ಯಗಳ ಹಿರಿಯ ಅಧಿಕಾರಿಗಳು ಭಾಗವಹಿಸಿದ ಸಭೆಯು ರಾಷ್ಟ್ರೀಯ ಕ್ರಿಯಾ ಯೋಜನೆಗೆ (ಎನ್‌ಎಪಿ) ಅನುಮೋದನೆ ನೀಡಿತು, ಈ ಬಿಕ್ಕಟ್ಟನ್ನು ನಿವಾರಿಸಲು ತಕ್ಷಣಕ್ಕೆ ಪಾಕ್ ಸರಕಾರಕ್ಕೆ 7.3 ಬಿಲಿಯನ್ ಪಾಕಿಸ್ತಾನಿ ರೂಪಾಯಿಗಳ ಅಗತ್ಯವಿದೆ ಎನ್ನಲಾಗಿದೆ.

ದೇಶದಲ್ಲಿ ಮಿಡತೆ ಹರಡುವುದನ್ನು ತಡೆಗಟ್ಟಲು ಮತ್ತು ಬೆಳೆ ನಷ್ಟವನ್ನು ತಡೆಗಟ್ಟಲು ತುರ್ತು ಆಧಾರದ ಮೇಲೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಪ್ರಧಾನಿ ಇಮ್ರಾನ್ ಖಾನ್ ನಿರ್ದೇಶನ ನೀಡಿದರು.

ಮಿಡತೆ ದಾಳಿಯನ್ನು ದೇಶದಲ್ಲಿ ಮೊದಲ ಬಾರಿಗೆ 2019 ರ ಮಾರ್ಚ್‌ನಲ್ಲಿ ಗುರುತಿಸಲಾಯಿತು. ನಂತರ ಈ ಮಿಡತೆ ಹಿಂಡುಗಳು ಸಿಂಧ್, ದಕ್ಷಿಣ ಪಂಜಾಬ್ ಮತ್ತು ಖೈಬರ್ ಪಖ್ತುನ್ಖ್ವಾಗಳಲ್ಲಿ ದಾಳಿ ನಡೆಸಿತು. ಪರಿಣಾಮ 900,000 ಹೆಕ್ಟೇರ್ ಪ್ರದೇಶದಲ್ಲಿ ಹರಡಿತು, ಲಕ್ಷಾಂತರ ರೂಪಾಯಿ ಮೌಲ್ಯದ ನಿಂತಿರುವ ಬೆಳೆಗಳು ಮತ್ತು ಮರಗಳಿಗೆ ಹಾನಿಯಾಗಿದೆ ಎಂದು ವರದಿ ತಿಳಿಸಿದೆ.

The Pakistan government has declared a national emergency. to eliminate the attacking swarms of desert locusts- which are destroying crops on a large scale in pakisthan.