ಮುಂಬೈ:ಜುಲೈ-25:(www.justkannada.in) ಬಾಲಿವುಡ್ ನಟ ಅರ್ಜುನ್ ಕಪೂರ್ ಧರಿಸಿದ್ದ ಕೈ ಗಡಿಯಾರವೊಂದು ಇತ್ತೀಚೆಗೆ ಸಾಮಾಜಿಕ ಜಾಲತಾನಗಳಲ್ಲಿ ಭಾರೀ ಸದ್ದು ಮಾಡುತ್ತಿದೆ. ಮಾತ್ರವಲ್ಲ ಇದರ ಬೆಲೆ ಕೇಳಿದರೆ ಶಾಕ್ ಆಗೋದು ಗ್ಯಾರಂಟಿ.
ಇತ್ತೀಚೆಗೆ ಯುಎಸ್ ಎ ನಲ್ಲಿನ ತಮ್ಮ ಪ್ರವಾಸದ ಹಲವಾರು ಫೋಟೋಗಳನ್ನು ಅರ್ಜುನ್ ಕಪೂರ್ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದರು. ಅದರಲ್ಲಿನ ಒಂದು ಫೋಟೊ ಭಾರೀ ವೈರಲ್ ಆಗಿತ್ತು. ಕಾರಣ ಅದರಲ್ಲಿ ಅರ್ಜುನ್ ಕಪೂರ್ ಧರಿಸಿದ್ದ ದುಬಾರಿ ವಾಚ್.
ಹೌದು. ಅರ್ಜುನ್ ಕಪೂರ್ ಧರಿಸಿದ್ದ ಈ ಕೈಗಾಡಿಯಾರ ಯಾಚ್ಟ್ ಮಾಸ್ಟರ್ II. ಇದು ವಿಶ್ವದ ಅತಿ ದುಬಾರಿ ಕೈ ಗಡಿಯಾರಗಳಲ್ಲಿ ಒಂದು. ಈ ಐಷಾರಾಮಿ ಕೈ ಗಡಿಯಾರದ ಬೆಲೆ ಬರೋಬ್ಬರಿ 2,757,000 ರೂ.
ಅರ್ಜುನ್ ಕಪೂರ್ ಅವರ ಈ ದುಬಾರಿ ವಾಚ್ ಮಾತ್ರವಲ್ಲ, ಅವರ ದುಬಾರಿ ಶೂ ಕಲೆಕ್ಷನ್ಸ್, ಸ್ಟೈಲಿಶ್ ಬಟ್ಟೆಗಳು ಹೀಗೆ ಐಷಾರಾಮಿ ಎಕ್ಸಸರೀಸ್ ಗಳ ಮೂಲಕ ಬಾಲಿವುಡ್ ನಲ್ಲಿ ಭಾರೀ ಗಮನಸೆಳೆಯುತ್ತಿರುವುದು ವಿಶೇಷ.