ಬೆಂಗಳೂರು, ಮೇ.21, 2022 : (www.justkannada.in news) ನಾವು ಸುಮಾರು ಎರಡು ವರ್ಷಗಳ ಕಾಲ ನಮ್ಮನ್ನೆಲ್ಲಾ ಕಾಡಿದ ಕೋವಿಡ್-೧೯ ಸಾಂಕ್ರಾಮಿಕ ಹಾಗೂ ಅದರಿಂದಾಗಿ ವಿಧಿಸಲಾಗಿದ್ದ ಲಾಕ್‌ಡೌನ್ ಅವಧಿಯನ್ನು ನೆನಪು ಮಾಡಿಕೊಂಡಾಗ ನಮ್ಮ ಕಣ್ಣ ಮುಂದೆ ಹಲವಾರು ಚಿತ್ರಗಳು ಹಾದು ಹೋಗುತ್ತವೆ. ಪ್ರತಿಯೊಬ್ಬರಿಗೂ ಇದರ ಅನುಭವ ಹಾಗೂ ನೆನಪುಗಳು ಭಿನ್ನವಾಗಿವೆ. ಈ ಅವಧಿಯಲ್ಲಿ, ಬೆಂಗಳೂರು ಮಹಾನಗರವನ್ನು ತೊರೆದು ಹೋದ ಅಪಾರ ಸಂಖ್ಯೆಯ ಕಾರ್ಮಿಕರ ವ್ಯಥೆ, ಬೆಂಗಳೂರು ಮೂಲದ ಕಲಾವಿದೆ ಸುರೇಖಾ ಅವರ ಮೇಲೆ ಗಾಢವಾದ ಪ್ರಭಾವ ಬೀರಿತು. ವಲಸೆ ಕಾರ್ಮಿಕರ ಅಗ್ನಿಪರೀಕ್ಷೆಯ ಆ ದಿನಗಳನ್ನು ಸುರೇಖಾ ಅವರು ತಮ್ಮದೇ ಆದ ವಿಶಿಷ್ಟ ರೀತಿಯಲ್ಲಿ ಸೆರೆ ಹಿಡಿದಿದ್ದಾರೆ.
‘ಬೆಂಗಳೂರಿನಲ್ಲಿ ನಿನ್ನೆಗಿಂತ ಇಂದು ಉತ್ತಮವಾಗಿದೆ’ ಎಂಬ ಶೀರ್ಷಿಕೆಯಡಿ ಕಲಾವಿದೆ, ಮರೆಯಬೇಕೆಂದರೂ ಪದೇ ಪದೇ ನೆನಪಾಗುವ ಆ ಸನ್ನಿವೇಶ ಮತ್ತು ಭಾವನೆಗಳನ್ನು ಅತ್ಯದ್ಭುತವಾದ ಕಲಾತ್ಮಕ ರೀತಿಯಲ್ಲಿ ವ್ಯಕ್ತಪಡಿಸಿ ಪ್ರದರ್ಶಿಸಿದ್ದಾರೆ.
ಸಮಕಾಲೀನ ಕಲಾವಿದೆಯಾಗಿರುವ ಸುರೇಖಾ ಅವರು, ಬೆಂಗಳೂರಿಗೆ ವಲಸೆ ಬಂದ ಕಟ್ಟಡ ನಿರ್ಮಾಣ ಕಾರ್ಮಿಕರು, ಅದರಲ್ಲಿಯೂ ವಿಶೇಷವಾಗಿ ವಲಸೆ ಕಾರ್ಮಿಕರು, ಸಾಂಕ್ರಾಮಿಕದ ಅವಧಿಯಲ್ಲಿ ಎದುರಿಸಿದ ಸಂಕಷ್ಟವನ್ನು ವಿಶೇಷವಾದ ರೀತಿಯಲ್ಲಿ ಸಾದರಪಡಿಸಿದ್ದಾರೆ. ನಗರದ ವಿವಿಧ ಸ್ಥಳಗಳಲ್ಲಿ ಕಟ್ಟಡ ನಿರ್ಮಾಣ ಕಾರ್ಮಿಕರು ಧರಿಸಿದ್ದಂತಹ ಹಾಗೂ ಬಿಟ್ಟು ಹೋಗಿರುವಂತಹ ಸುಮಾರು ೨೦೦೦ ಪಾದರಕ್ಷೆಗಳನ್ನು ಸಂಗ್ರಹಿಸಿದ್ದಾರೆ. ಈ ಪಾದರಕ್ಷೆಗಳೆಲ್ಲವೂ ಬಹಳ ಕೊಳಕಾಗಿದ್ದು, ಅದರ ಆಕಾರವನ್ನೇ ಕಳೆದುಕೊಂಡಿವೆ.
ಅವುಗಳನ್ನು ಮರುಬಳಕೆ ಮಾಡಲಾಗದ ಪರಿಸ್ಥಿತಿ ತಲುಪಿವೆ. ಕೆಲಸ ಕಳೆದುಕೊಂಡು ಉತ್ತಮ ಹಾಗೂ ಸುರಕ್ಷಿತವಾದ ಸ್ಥಳವನ್ನು ಅರಿಸಿ ತಮ್ಮ ತಮ್ಮ ಮನೆಗಳಿಗೆ ಹಿಂದಿರುಗುವ ಸಮಯದಲ್ಲಿ ಈ ಪಾದರಕ್ಷೆಗಳನ್ನು ಕಾರ್ಮಿಕರು ಬಿಟ್ಟು ಹೋಗಿದ್ದಾರೆ. ಕೋವಿಡ್-೧೯ ಮಹಾಮಾರಿಯ ಭಯ, ಜೀವನ ನಡೆಸಲು ಹಣದ ಕೊರತೆ, ನಿರುದ್ಯೋಗ, ಅಥವಾ ಆಹಾರದ ಕೊರತೆಗಳೇ ಈ ಎಲ್ಲಾ ಕಾರ್ಮಿಕರು ಬೆಂಗಳೂರನ್ನು ತೊರೆಯಲು ಕಾರಣವಾದವು.
ಈ ಕಾರ್ಮಿಕರಿಗೆ ಕಟ್ಟಡ ನಿರ್ಮಾಣ ಮಾಡುವ ಗುತ್ತಿಗೆದಾರರು ಪಾದರಕ್ಷೆಗಳನ್ನು ಒದಗಿಸುತ್ತಾರೆ. ಕೆಲಸ ಪೂರ್ಣಗೊಂಡ ನಂತರ ಈ ಪಾದರಕ್ಷೆಗಳನ್ನು ಹಿಂದಿರುಗಿಸಬೇಕಂತೆ. ಕಟ್ಟಡ ನಿರ್ಮಾಣ ಕೆಲಸದ ಬೇಡಿಕೆಯಂತೆ ಈ ಪಾದರಕ್ಷೆಗಳು ಬಹಳ ಉತ್ತಮ ಗುಣಮಟ್ಟವುಳ್ಳವು. ಸುರೇಖಾ ಅವರು ಸಂಗ್ರಹಿಸಿರುವ ಇಂತಹ ಪಾದರಕ್ಷೆಗಳ ರಾಶಿ, ಈ ಕಾರ್ಮಿಕರು ದಿನಗಳು ಹಾಗೂ ವಾರಗಳ ಕಾಲ ಬರಿ ಕಾಲುಗಳಲ್ಲಿ ಓಡಾಡಿದ ಅವರು ಎದುರಿಸಿದ ನೋವು, ಸಂಕಷ್ಟವನ್ನು ನಿಶ್ಯಬ್ಧವಾಗಿ ವಿವರಿಸುತ್ತದೆ.
ಸುರೇಖಾ ಅವರಿಗೆ ಈ ತೊರೆದ ಪಾದರಕ್ಷೆಗಳು ಒಂದು ರೂಪಕದಂತಾಗಿದೆ. ಈ ಪಾದರಕ್ಷೆಗಳ ರಾಶಿ ಅನೇಕ ಕತೆಗಳನ್ನು ಹೇಳುತ್ತವೆ. “ಒಂದು ಪಾದರಕ್ಷೆಗಳ ಜೋಡಿ, ಸ್ವಲ್ಪ ಕಾಲ ಉಪಯೋಗಿಸಿದ ನಂತರ, ನಮ್ಮ ಜೀವನದ ಭಾಗವಾಗುತ್ತವೆ. ಅವು ನಮ್ಮ ಗುಣಲಕ್ಷಣದ ಒಂದು ಭಾಗವಾಗುತ್ತವೆ,” ಎನ್ನುವುದು ಅವರ ಅನಿಸಿಕೆ.
ಪಾದರಕ್ಷೆಗಳ ಮೇಲ್ಭಾಗ ಕೆಲವೊಮ್ಮೆ ಮಾನವನ ಮುಖದ ಭಾವನೆಗಳನ್ನು ಹೋಲುತ್ತವೆ. ಈ ಹಿನ್ನೆಲೆಯಲ್ಲಿ ಸುರೇಖಾ ಅವರು ಈ ಪಾದರಕ್ಷೆಗಳ ರಾಶಿಯಿಂದ ಕೆಲವನ್ನು ಆಯ್ಕೆ ಮಾಡಿಕೊಂಡು ಅವುಗಳನ್ನು ಮಾನವ ಗುಣಲಕ್ಷಣಗಳನ್ನಾಗಿ ಪರಿವರ್ತಿಸಲು ಯೋಜಿಸಿದ್ದಾರೆ.
ಇದು ನನಗೆ, ಹಳೆಯ ಪಾದರಕ್ಷೆಗಳನ್ನು ವಿವಿಧ ಮುಖಗಳಿರುವ ವಿಶೇಷ ಪಾತ್ರಗಳನ್ನಾಗಿ ಪರಿವರ್ತಿಸಿದ ಅಮೇರಿಕಾದ ಗ್ವೆನ್ ಮರ್ಫಿ ಅವರ ‘ಫುಟ್ ಫೆಟಿಷ್’ ಸರಣಿ, ಭಾನವೆಗಳನ್ನು ತೋರಿಸಲು ಮುಖಗಳಿರುವ ಭಾವಚಿತ್ರಗಳ ಜೋಡಣೆಯನ್ನು ಬಳಸಿದ ದುಬೈನ ಕಲಾವಿದ ಜ್ಯೋ ಜಾನ್ ಮುಲ್ಲೂರ್ ಅವರ ‘ದಿ ಷೂ ಎಮೋಷನ್ಸ್’ ಗಳನ್ನು ನೆನಪಿಸುತ್ತದೆ.
ಸುರೇಖಾ ಅವರು ಸಾಂಕ್ರಾಮಿಕದಿಂದಾಗಿ ಉದ್ಭವಿಸಿದ ಹಲವು ಸಮಸ್ಯೆಗಳು ಹಾಗೂ ಭಾವನೆಗಳನ್ನು ಬಿಟ್ಟು ಹೋಗಿರುವ ಪಾದರಕ್ಷೆಗಳ ಮೂಲಕ ಬಿಂಬಿಸುವ ಕ್ರಿಯಾಶೀಲ ಪ್ರಯತ್ನವನ್ನು ನಡೆಸಿದ್ದಾರೆ. ಜತೆಗೆ, ಲಾಕ್‌ಡೌನ್ ಅವಧಿಯ ಪರಿಸ್ಥಿತಿಯನ್ನು ಸೆರೆ ಹಿಡಿದಂತಹ ಸುದ್ದಿಪತ್ರಿಕೆಗಳ ಹೆಡ್‌ಲೈನ್‌ಗಳನ್ನೂ ಸಹ ಸಂಗ್ರಹಿಸಿದ್ದಾರೆ.
ಬೆಂಗಳೂರಿನ, ಡಬ್ಬಲ್ ರೋಡ್‌ನಲ್ಲಿರುವ ಶಾಂತಿ ರೋಡ್ ಸ್ಟುಡಿಯೋ/ಗ್ಯಾಲರಿಯಲ್ಲಿ ಮೇ ೨೪ ರ ವರೆಗೆ ಈ ಪ್ರದರ್ಶನದ ವ್ಯವಸ್ಥೆ ಕಲ್ಪಿಸಲಾಗಿದೆ. ದಿನ ಬೆಳಿಗ್ಗೆ ೧೧ ಗಂಟೆಯಿಂದ ಸಂಜೆ ೭ ಗಂಟೆಯವರೆಗೆ ಸಾರ್ವಜನಿಕರ ವೀಕ್ಷಣಗೆ ಅವಕಾಶವಿದೆ.
key words : canvas-today-is-better-than-yesterday-art-exhibiton-surekha-bangalore
ENGLISH SUMMARY :
Shoes, feelings, and an exhibitionWhen one thinks of the COVID-19-induced pandemic and lockdown period, which stretched for not less than two years, many images come to mind. For each individual, the experience and memories are different. For Bengaluru-based artist Surekha, the large-scale migration of labourers has left a lasting impression.
Her way of capturing the ordeal of migrant labourers has come out artistically. Her exhibition – Today is Better than Yesterday – in Bengaluru has beautifully captured a time that one wishes to forget but cannot.Surekha, as in the past as a video contemporary artist, has chosen an unusual way to narrate and offer comments on the ordeal faced by construction workers, mainly migrant workers into Bengaluru.
She has collected at least 2000 shoes that were worn and discarded by construction workers at different sites. They are muddy. They have lost shape. They can’t be reused. These shoes have been left behind by labourers as they lost their jobs and rushed out of the city to reach their homes, presuming that there was a better and safer world. The fear of the COVID-19 virus, not having money, a job, or food forced labourers to pack off from wherever they were. Not that every hungry mouth was fed two meals a day. It is the building construction contractors who provide shoes to labourers. Once the work is completed, the shoes are taken back. Invariably, they are of good quality as the job demands durable footwear.
The shoe pile is silently narrating the woes of labourers who walked for days and weeks barefoot.For Surekha, discarded shoes have become a metaphor. The pile of shoes narrates many stories. “A pair of shoes, after wearing for some time, becomes part of our daily life. They become part of our character, “she says.
She says the upper part of a shoe sometimes resembles a human face with emotions. She is planning to select some shoes from the pile of shoes and convert them into human characters. That reminds me of the Foot Fetish series by Gwen Murphy of America, who has transformed old shoes into unique characters with different faces, and that of The Shoe Emotions series by Dubai artist Jyo John Mulloor, who has used the merger of photos with faces to convey feelings. One hope to see Surekha’s creativity to show pandemic blues and emotions using the abandoned shoes. Surekha has also come up with a compilation of newspaper headlines that captured the mood of the lockdown period. They are also displayed at the exhibition, which is on till May 24, from 11 am to 7 pm at Shanti Road Studio/Gallery, Double Road, Bengaluru.