ಬೆಂಗಳೂರು, ಜೂನ್ 26, 2021 (www.justkannada.in): ಕೋವಿಡ್ ಸಂಕಷ್ಟದ ಸಮಯದಲ್ಲಿ ನೇರ ತೆರಿಗೆಗಳ ಕೇಂದ್ರೀಯ ಮಂಡಳಿ ಜನ ಸಾಮಾನ್ಯರಿಗೆ ತುಸು ನೆಮ್ಮದಿ ಸುದ್ದಿ ನೀಡಿದೆ.
ಕೋವಿಡ್-19 ಚಿಕಿತ್ಸೆಗಾಗಿ ಉದ್ಯೋಗದಾತರು ಉದ್ಯೋಗಿಗಳಿಗೆ ನೀಡುವ ಮೊತ್ತಕ್ಕೆ ತೆರಿಗೆಯಿಂದ ವಿನಾಯಿತಿ ನೀಡಿದೆ.
ಕೋವಿಡ್ ನಿಂದ ಉದ್ಯೋಗಿಗಳು ಸಾವನ್ನಪ್ಪಿದರೆ ಕುಟುಂಬ ಸದಸ್ಯರು ಉದ್ಯೋಗದಾತರಿಂದ ಪಡೆದ ನಷ್ಟ ಪರಿಹಾರ ಪಾವತಿಗಳಿಗೆ 2019-20ರ ಹಣಕಾಸು ಮತ್ತು ನಂತರದ ವರ್ಷಗಳಲ್ಲಿ ಆದಾಯ ತೆರಿಗೆಯಿಂದ ವಿನಾಯಿತಿ ಸಿಗಲಿದೆ.
ತೆರಿಗೆದಾರರ ಅನುಸರಣಾ ಹೊರೆಯನ್ನು ಕಡಿಮೆ ಮಾಡುವ ಸಲುವಾಗಿ, ಪರಿಹಾರಗಳನ್ನು ಒದಗಿಸಲಾಗುತ್ತಿದೆ’ ಎಂದು ನೇರ ತೆರಿಗೆಗಳ ಕೇಂದ್ರೀಯ ಮಂಡಳಿ (ಸಿಬಿಡಿಟಿ) ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಕೋವಿಡ್-19 ಚಿಕಿತ್ಸೆಗಾಗಿ ಮಾಡಿದ ವೆಚ್ಚಗಳನ್ನು ಪೂರೈಸಲು ಅನೇಕ ತೆರಿಗೆದಾರರು ತಮ್ಮ ಉದ್ಯೋಗದಾತರು ಮತ್ತು ಹಿತೈಷಿಗಳಿಂದ ಆರ್ಥಿಕ ಸಹಾಯವನ್ನು ಪಡೆದಿದ್ದಾರೆ ಎಂದು ತೆರಿಗೆ ಇಲಾಖೆ ಹೇಳಿದೆ.