ಮೈಸೂರು, ಜೂ.13, 2019 : (www.justkannada.in news ) ಸಾಂಸ್ಕೃತಿಕ ನಗರಿಯ ಪ್ರೇಕ್ಷಣೀಯ ಸ್ಥಳಗಳಲ್ಲಿ ಒಂದಾದ ಹಾಗೂ ಚಿಣ್ಣರ ಅಚ್ಚುಮೆಚ್ಚಿನ ತಾಣ ‘ ಮೈಸೂರು ರೈಲ್ವೆ ಮ್ಯೂಸಿಯಂ ‘ ವೀಕ್ಷಣೆಗೆ ಸಾರ್ವಜನಿಕರಿಗೆ ಇನ್ನು ಕಾಲಕೂಡಿ ಬಂದಿಲ್ಲ.
ನಗರದ ಕೆ.ಆರ್.ಎಸ್. ರಸ್ತೆಯಲ್ಲಿನ ಸಿಎಫ್‌ಟಿಆರ್‌ಐ ಎದುರು ಭಾರತೀಯ ರೈಲ್ವೆಯ ಮ್ಯೂಸಿಯಂ ಅನ್ನು ಉನ್ನತೀರಿಸುವ ಮೂಲಕ ಮತ್ತಷ್ಟು ಆಕರ್ಷಣೀಯಗೊಳಿಸಲು ನೈರುತ್ಯ ರೈಲ್ವೆ ಇಲಾಖೆ 2 ಕೋಟಿ ರೂ. ವೆಚ್ಚದಲ್ಲಿ ಯೋಜನೆಯೊಂದನ್ನು ರೂಪಿಸಿ ಕಾಮಗಾರಿ ಆರಂಭಿಸಿತ್ತು. ರೈಲ್ವೆ ವಸ್ತು ಸಂಗ್ರಹಾಲಯವನ್ನು ಉನ್ನತೀಕರಿಸಲು ಕ್ರಮ ಕೈಗೊಂಡ ಹಿನ್ನೆಲೆಯಲ್ಲಿ ಮಾರ್ಚ್ 7 ರಿಂದ ಮೂರು ತಿಂಗಳುಗಳ ವರೆಗೆ ಅಂದ್ರೆ ಜೂ.07 ರ ತನಕ ರಜೆ ಘೋಷಿಸಲಾಗಿತ್ತು. ಆಧರೆ ಇದೀಗ ಜೂ. 13 ಆದರು ಸಾರ್ವಜನಿಕರ ವೀಕ್ಷಣೆಗೆ ಇನ್ನು ಮ್ಯೂಸಿಯಂ ಮುಕ್ತವಾಗಿಲ್ಲ.
ಈ ನಡುವೆ ರೈಲ್ವೆ ನಿಲ್ದಾಣದ ದ್ವಾರ ನವೀಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರ ಹಾಗೂ ರೈಲ್ವೆ ಇಲಾಖೆ ನಡುವೆ ಕೋಲ್ಡ್ ವಾರ್ ನಡೆದಿರುವುದು ಗುಟ್ಟಾಗಿ ಉಳಿದಿಲ್ಲ. ಪಾರಂಪರಿಕತೆಗೆ ದಕ್ಕೆ ಬರುವಂತೆ ಕಾಮಗಾರಿ ನಡೆಸಲಾಗುತ್ತಿದೆ ಎಂದು ಪ್ರವಾಸೋದ್ಯಮ ಸಚಿವ ಸಾ.ರ.ಮಹೇಶ್ ಬಹಿರಂಗವಾಗಿಯೇ ಅಸಮಧಾನ ವ್ಯಕ್ತಪಡಿಸಿದ್ದರು. ಇದಕ್ಕೆ ಪ್ರತಿಯಾಗಿ ರೈಲ್ವೆ ಇಲಾಖೆ ಅಧಿಕಾರಿಗಳ ಕ್ರಮವನ್ನು ಬಿಜೆಪಿ ಸಂಸದ ಪ್ರತಾಪಸಿಂಹ ಸಮರ್ಥಿಸಿಕೊಂಡಿದ್ದು ಮುಸುಕಿನ ಗುದ್ದಾಟಕ್ಕೆ ಸಾಕ್ಷಿ.
ಏನಿದು ಈ ಮ್ಯೂಸಿಯಂನಲ್ಲಿ :
1979ರಲ್ಲಿ ಒಟ್ಟು 32 ಎಕರೆ ವಿಶಾಲ ಪ್ರದೇಶದಲ್ಲಿರುವ ಈ ರೈಲ್ವೆ ಮ್ಯೂಸಿಯಂನಲ್ಲಿ ಆಕರ್ಷಕ ಹಾಗೂ ಅಪರೂಪದ ಬ್ರಿಟಿಷರ ಕಾಲದ ರೈಲು ಎಂಜಿನ್‌ಗಳು ಹಾಗೂ ಸ್ಟೀಮ್ ಎಂಜಿನ್‌ಗಳಿವೆ. ಹೊಸದಿಲ್ಲಿಯಲ್ಲಿ ನ್ಯಾಷನಲ್ ರೈಲ್ವೆ ಮ್ಯೂಸಿಯಂ ಹೊರತು ಪಡಿಸಿದರೆ ಮೈಸೂರಿನಲ್ಲಿರುವುದೇ ಎರಡನೇ ಮ್ಯೂಸಿಯಂ . ಜತೆಗೆ ವಿಂಟೇಜ್ ಲೋಕೋಮೋಟರ್‌ಗಳನ್ನು ಹೊರಗಡೆ ಪ್ರದರ್ಶನಕ್ಕಿಟ್ಟಿರುವ ಏಕೈಕ ಮ್ಯೂಸಿಯಂ.
ಮೊದಲ ರೈಲಿನ ಎಂಜಿನ್, ಸ್ಟೀಮ್ ರೈಲು, ಕಲ್ಲಿದ್ದಲು ಎಂಜಿನ್ ಸೇರಿದಂತೆ ಹಳೆ ಕಾಲದ ನಾನಾ ಬಗೆಯ ಎಂಜಿನ್‌ಗಳು ಪ್ರದರ್ಶನದಲ್ಲಿವೆ. 1899ರ ಸಮಯದಲ್ಲಿ ಮೈಸೂರಿನ ರಾಜ ವಂಶಸ್ಥರು ಪ್ರಯಾಣಿಸಲು ಬಳಸುತ್ತಿದ್ದ ಬೋಗಿಗಳು ಹಾಗೂ ಮಹಾರಾಣಿ ಸಲೂನ್ ಕ್ಯಾರೇಜ್ (ಮಹಾರಾಣಿ ಪ್ರಯಾಣಿಸುತ್ತಿದ್ದ ಬೋಗಿ) ಗಮನಾರ್ಹವಾಗಿದೆ. ಅದರಲ್ಲೂ ಅಡುಗೆ ಕೋಣೆ, ಮರದ ವೆಸ್ಟರ್ನ್ ಟಾಯ್ಲೆಟ್‌ಗಳು ಆಕರ್ಷಣೀಯವಾಗಿದೆ. ಹಳೆ ಕಾಲದ ಟೆಲಿಫೋನ್‌ಗಳು, ಛಾಯಾಚಿತ್ರಗಳು, ಆರಂಭಿಕ ಕಾಲದ ರೈಲ್ವೆ ಟಿಕೆಟ್‌ಗಳು ಮ್ಯೂಸಿಯಂನ ಪ್ರದರ್ಶನದಲ್ಲಿವೆ.
——–
The three-month deadline has ended, but the public does not able to visits the railway museum …!
The Railway Museum at Mysore, India is an outdoor exhibit of vintage locomotives. The Railway Museum was established in 1979 by Indian Railways, the second such museum after the National Railway Museum in Delhi. The museum is opposite the Central Food Technology and Research Institute on Krishnaraja Sagar Road.
One of the oldest Rail Museums of the nation in Mysuru, run by the Mysuru division of South Western Railways is being revamped in order to promote tourism and to preserve a significant part of the history of Indian Railways.