ಮೈಸೂರು: ಹಸುಕಳ್ಳನನ್ನ ಥಳಿಸಿ ಪೊಲೀಸರಿಗೊಪ್ಪಿಸಿದ ಗ್ರಾಮಸ್ಥರು..

ಮೈಸೂರು,ಜೂ,6,2019(www.justkannada.in):  ಹಸು ಕಳ್ಳತನ ಮಾಡುತ್ತಿದ್ದ ಕಳ್ಳನನ್ನ ಗ್ರಾಮಸ್ಥರೇ ಹಿಡಿದು ಥಳಿಸಿ ಪೊಲೀಸರಿಗೊಪ್ಪಿಸಿದ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ.

ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಹುಲ್ಲಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಹುಲ್ಲಹಳ್ಳಿ ಗ್ರಾಮದಲ್ಲಿ 20 ದಿನಗಳಲ್ಲಿ ಕಳ್ಳ ಸುಮಾರು 40 ಹಸುಗಳನ್ನ ಕಳ್ಳತನ ಮಾಡಿದ್ದ ಎನ್ನಲಾಗಿದೆ.ಹಸುಕಳ್ಳರು ಅರೆಬೆತ್ತಲೇಯಾಗಿ ಬಂದು ಕಳ್ಳತನ ಮಾಡುವ ಗ್ಯಾಂಗ್ ಆಗಿದೆ. ಇನ್ನು ನಿನ್ನೆ ತಡರಾತ್ರಿ ಹಸು ಕಳ್ಳತನಕ್ಕೆ ಬಂದಿದ್ದ ವೇಳೆ ಕಳ್ಳನನ್ನ ಗ್ರಾಮಸ್ಥರು ಹಿಡಿದಿದ್ದಾರೆ. ಕಳ್ಳತನದ ವೇಳೆ‌ ಓರ್ವಸಿಕ್ಕಿಬಿದ್ದಿದ್ದು ಇಬ್ಬರು ಪರಾರಿಯಾಗಿದ್ದಾರೆ.

ಸಿಕ್ಕ ಹಸುಗಳ್ಳನಿಗೆ ಗ್ರಾಮಸ್ಥರು  ಸಖತ್ ಗೂಸ ನೀಡಿದ್ದು ಸದ್ಯ ಹುಲ್ಲಹಳ್ಳಿ ಪೊಲೀಸ್ ಠಾಣೆಗೆ ಕಳ್ಳನನ್ನ ಗ್ರಾಮಸ್ಥರು ಒಪ್ಪಿಸಿದ್ದಾರೆ. ಕಳ್ಳತನ ಮಾಡಿದ  ಹಸುಗಳನ್ನ  ಕೇರಳಕ್ಕೆ ರವಾನೆಮಾಡುತ್ತಿದ್ದರು ಎನ್ನಲಾಗಿದೆ.

ರಾತ್ರೋರಾತ್ರಿ ಬಂದು ಕಳ್ಳತನ ಮಾಡಿತ್ತಿದ್ದ ಗ್ಯಾಂಗ್.

 

Key words: The villagers who beat the cow thief

#mysore #villagers #beat #cowthief