ಬೆಂಗಳೂರು, ಮೇ 26, 2020 : (www.justkannada.in news) ಕೋವಿಡ್ಡೇ ಬರಲಿ, ಕರೋನಾನೆ ದಾಳಿ ಇಡಲಿ, ತಿರುಪತಿ ತಿಮ್ಮಪ್ಪನ ಪ್ರಸಾದ ‘ಲಡ್ಡು’ ಕೊಳ್ಳುವಿಕೆಯ ಭಕ್ತರ ಅಪರಿಮಿತ ಉತ್ಸಾಹಕ್ಕೆ ಅದು ಭಂಗವಾಗದು. ಲಾಕ್ ಡೌನ್, ಕೊಂಚ ಸಡಿಲಿಸಿದ ಕಾರಣ, ತಿರುಪತಿ ಲಡ್ಡು ಮಾರಾಟಕ್ಕೆ ಸ್ಥಳೀಯ ಆಡಳಿತ ಅನುವು ಮಾಡಿತ್ತು. ಇದರಿಂದ ಕೆಲವೇ ಕೆಲ ಗಂಟೆಗಳಲ್ಲಿ ರಾಜ್ಯದ ವಿವಿಧ ಕೇಂದ್ರಗಳಲ್ಲಿ ಲಕ್ಷಾಂತರ ಲಡ್ಡುಗಳು ಸೇಲಾಗಿರುವುದೇ ಭಕ್ತರ ಈ ಅಮಿತೋತ್ಸಾಹಕ್ಕೆ ಸಾಕ್ಷಿ.
ಕೋವಿಡ್ -19 ಪ್ರಭಾವದಿಂದಾಗಿ ಆಂಧ್ರದ ಗುಂಟೂರು ಜಿಲ್ಲೆಯಲ್ಲಿ ತಿರುಪತಿ ಲಡ್ಡುಗಳ ಮಾರಾಟದ ಮೇಲೆ ನಿರ್ಬಂಧ ವಿಧಿಸಲಾಗಿತ್ತು. ಜತೆಗೆ ಸಂಗ್ರಹಗೊಂಡಿದ್ದ ಪ್ರಸಾದವನ್ನು ಹತ್ತಿರದ ವಿಜಯವಾಡಕ್ಕೆ ಸ್ಥಳಾಂತರಿಸಲಾಗಿತ್ತು.
ಸ್ಥಳೀಯ ಸರ್ಕಾರಿ ಮೇಲ್ವಿಚಾರಕರ ಉಪಸ್ಥಿತಿಯಲ್ಲಿ, ಎಲ್ಲಾ ಕೋವಿಡ್ -19 ಮಾರ್ಗಸೂಚಿ ಪಾಲಿಸಿ ಭಕ್ತರು ಪವಿತ್ರ ಪ್ರಸಾದಕ್ಕಾಗಿ ಟಿಟಿಡಿ ಮದುವೆ ಸಭಾಂಗಣಗಳು ಮತ್ತು ಟಿಟಿಡಿ ಮಾಹಿತಿ ಕೇಂದ್ರಗಳಲ್ಲಿ ಸಾಲುಗಟ್ಟಿ ನಿಂತು ಪ್ರಸಾದ ಖರೀದಿಸಿದ್ದಾರೆ.
ಪರಿಣಾಮ ಲಡ್ಡುಗಳ ಸಂಪೂರ್ಣ ದಾಸ್ತಾನು ಕೆಲವೇ ಗಂಟೆಗಳಲ್ಲಿ ರಾಜ್ಯದ ಜಿಲ್ಲೆಗಳಲ್ಲಿ ಮಾರಾಟವಾಗಿದೆ. ಜತೆಗೆ ಕೋವಿಡ್ -19 ಲಾಕ್‌ಡೌನ್ ಅವಧಿಯಲ್ಲಿ ಭಕ್ತರಿಗೆ ಉಡುಗೊರೆ ರೂಪದಲ್ಲಿ ತಲಾ 50 ರೂ.ಗಳ ಬೆಲೆಯ ಲಡ್ಡುಗಳನ್ನು 25 ರೂ.ಗೆ ಮಾರಾಟ ಮಾಡಲಾಗಿದೆ.
ಸಾಮಾನ್ಯ ವೇಳೆ ಪ್ರತಿದಿನ ದೇಶಾದ್ಯಂತ ಸಾವಿರಾರು ಜನ ಭೇಟಿ ನೀಡುತ್ತಿದ್ದ, 2,000 ಕ್ಕೂ ಹೆಚ್ಚು ವರ್ಷಗಳಷ್ಟು ಹಳೆಯದಾದ ದೇವಾಲಯಕ್ಕೆ ಭಕ್ತರ ಪ್ರವೇಶವನ್ನು ಮಾರ್ಚ್ 20 ರಿಂದ ನಿರ್ಬಂಧಿಸಲಾಗಿದೆ ಎಂಬುದನ್ನು ಸ್ಮರಿಸಿಕೊಳ್ಳಬಹುದು.
ಈ ನಡುವೆ ಟಿಟಿಡಿ (ತಿರುಮಲ-ತಿರುಪತಿ ದೇವಸ್ತಾನಂ) ಲಾಕ್‌ಡೌನ್ ಸಮಯದಲ್ಲಿ ಚೆನ್ನೈ, ಬೆಂಗಳೂರು ಮತ್ತು ಹೈದರಾಬಾದ್‌ನ ಭಕ್ತರಿಗೆ ಲಾಡುಗಳನ್ನು ಸಾಗಿಸಲು ತಮಿಳುನಾಡು, ಕರ್ನಾಟಕ ಮತ್ತು ತೆಲಂಗಾಣ ಸರ್ಕಾರಗಳ ಅನುಮೋದನೆಗಾಗಿ ಕಾಯುತ್ತಿದೆ. ಈ ರಾಜ್ಯಗಳಲ್ಲೂ ಲಡ್ಡು ಮಾರಾಟಕ್ಕೆ ಅನುಮತಿ ದೊರೆತಲ್ಲಿ ಪ್ರಸಾದ ಮಾರಾಟ ಮತ್ತಷ್ಟು ಹೆಚ್ಚಾಗಲಿದೆ ಎನ್ನಲಾಗಿದೆ.
KEY WORDS : The whole stock of laddus was sold within a few hours in Andhra pradesh
ENGLISH SUMMARY :
On day-one, 2.4 lakh Tirupati laddus sold in Andhra Pradesh.
The whole stock of laddus was sold within a few hours in the districts of the state,The laddu, which is priced at Rs 50 each, was sold at Rs 25 as a token of gift to the devotees during the Covid-19 lockdown period.
The TTD (Tirumala-Tirupati Devasthanom) that governs the hill shrine is awaiting the nod of governments of Tamil Nadu, Karnataka and Telangana to transport the laddus to devotees in Chennai, Bengaluru and Hyderabad during the lockdown.