ಬೆಂಗಳೂರು,ಜನವರಿ,03,2021(www.justkannada.in) : ರಾಜ್ಯ ಸರ್ಕಾರವು ಚಿತ್ರಮಂದಿರಗಳಲ್ಲಿ ಶೇ.50 ರಷ್ಟು ಪ್ರೇಕ್ಷಕರಿಗೆ ಮಾತ್ರ ಅವಕಾಶ ನೀಡಿರುವುದಕ್ಕೆ ಸ್ಯಾಂಡಲ್ ವುಡ್ ನಟ ಧ್ರುವ ಸರ್ಜಾ ಸರ್ಕಾರದ ವಿರುದ್ಧ ಗರಂ ಆಗಿದ್ದಾರೆ.
ಕೊರೊನಾ ವೈರಸ್ ನ ಎರಡನೇ ಅಲೆ ಭೀತಿ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಚಿತ್ರಮಂದಿರಗಳಲ್ಲಿ ಶೇ.50 ರಷ್ಟು ಪ್ರೇಕ್ಷಕರಿಗೆ ಅವಕಾಶ ನೀಡಿರುವುದರ ವಿರುದ್ಧ ಟ್ವಿಟರ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾರ್ವಜನಿಕರ ಹಿತದೃಷ್ಟಿಯಿಂದ 28ನೇ ಫೆಬ್ರವರಿ 2021ವರೆಗೆ ಸಿನಿಮಾ ಹಾಲ್ ಗಳಲ್ಲಿ 50% ಪ್ರೇಕ್ಷಕರಿಗೆ ಮಾತ್ರ ಅವಕಾಶ ಕಲ್ಪಿಸಲು ಸೂಚಿಸಲಾಗಿದೆ. ಈ ಬಗ್ಗೆ ರಾಜ್ಯ ಸರ್ಕಾರ ಅಧಿಕೃತ ಸುತ್ತೋಲೆ ಹೊರಡಿಸಿದೆ.
ಮಾರ್ಕೆಟ್ ನಲ್ಲಿ ಗಿಜಿಗಿಜಿ ಜನ, ಬಸ್ ನಲ್ಲೂ ಫುಲ್ ರಶ್
ರಾಜ್ಯ ಸರ್ಕಾರದ ಈ ನಿರ್ಧಾರಕ್ಕೆ ನಟ ಧ್ರುವ ಸರ್ಜಾ ಕಿಡಿಕಾರಿದ್ದು, ಮಾರ್ಕೆಟ್ ನಲ್ಲಿ ಗಿಜಿಗಿಜಿ ಜನ, ಬಸ್ ನಲ್ಲೂ ಫುಲ್ ರಶ್, ಚಿತ್ರಮಂದಿರಕ್ಕೆ ಮಾತ್ರ ಶೇ.50 ರಷ್ಟು ನಿರ್ಬಂಧ ಏಕೆ? ಎಂದು ಪ್ರಶ್ನಿಸಿದ್ದಾರೆ.
ಫೆಬ್ರವರಿ 19 ರಂದು ಧ್ರುವ ಸರ್ಜಾ ಪೊಗರು ಸಿನಿಮಾ ಬಿಡುಗಡೆ
ಧ್ರುವ ಸರ್ಜಾ ನಟನೆಯ ಬಹುನಿರೀಕ್ಷಿತ ಪೊಗರು ಸಿನಿಮಾ ಫೆಬ್ರವರಿ 19 ರಂದು ಬಿಡುಗಡೆಯಾಗಲಿದ್ದು, ಶೇ.50 ರಷ್ಟು ಚಿತ್ರಮಂದಿರಗಳಿಗೆ ಪ್ರೇಕ್ಷಕರಿಗೆ ಅವಕಾಶ ನೀಡಿರುವುದರಿಂದ ನಟ ಧ್ರುವ ಸರ್ಜಾ ಅಸಮಾಧಾನ ಹೊರಹಾಕಿದ್ದಾರೆ.
ENGLISH SUMMARY…
Only 50% seats in Cinemas: Actor Dhruva Sarja expresses ire on Govt.
Bengaluru, Feb. 03, 2021 (www.justkannada.in): Renowned Kannada film action hero Dhruva Sarja has expressed his ire upon the State Government for restricting seating capacity in cinema halls for only 50%.
The State Government has issued orders restricting cinema halls to fill only 50% of its capacity up to Feb. 28, 2021, keeping in view the possibility of a second wave of Corona pandemic.
In his tweet, Dhruva Sarja has questioned why only Cinema halls are restricted, whereas all the markets, buses, and other places are exempted.
His much-expected movie will be released on Feb. 19, following which the actor has expressed his ire in his tweet.
Keywords: Actor Dhruva Sarja/ State Government/ restriction in cinema halls/ 50% capacity
key words : theaters-50 percent-audience-Only-Opportunity-
Government-opposite-Actor-Dhruva Sarja