ಮೈಸೂರು, ಡಿಸೆಂಬರ್ 12, 2019 (www.justkannada.in): ಮೋದಿ ಭರವಸೆಗಳು ಸಿಲ್ಲಿ ಲಲ್ಲಿ ಸೀರಿಯಲ್ ನ ಸಮಾಜ ಸೇವಕಿ ಲಲಿತಾಂಭರವರ ಭರವಸೆಯಂತಿದೆ ಎಂದು ಮೈಸೂರಿನಲ್ಲಿ ಹಿರಿಯ ಸಾಹಿತಿ ದೇವನೂರು ಮಹದೇವು ವ್ಯಂಗ್ಯವಾಡಿದ್ದಾರೆ.
ಸಿಲ್ಲಿ ಲಲ್ಲಿ ಸೀರಿಯಲ್ ನಲ್ಲಿ ಸಮಾಜ ಸೇವಕಿ ಲಲಿತಾಂಭ “ನನ್ನ ನಂಬಿ ನನ್ನ ನಂಬಿ” ಅಂತಾರೆ. ಅದೇ ರೀತಿ ಮೋದಿ ಸಹ ಜನರನ್ನ ನಂಬಿಸ್ತಿದ್ದಾರೆ. ಪೌರತ್ವ ಕಾಯಿದೆ ಅನುಮೋದನೆ ಆದಾಗ ಮೋದಿ ಟ್ವೀಟ್ ಮಾಡಿದ್ರು. ಜನರು ಆತಂಕಕ್ಕೆ ಒಳಗಾಗಬೇಡಿ ನನ್ನ ನಂಬಿ ನನ್ನ ನಂಬಿ ಎಂದು ಟ್ವೀಟ್ ಮಾಡಿದ್ರು. ಇಲ್ಲಿ ಸಿಲ್ಲಿ ಲಲ್ಲಿ ಲಲಿತಾಂಭಗೂ ಮೋದಿಗೂ ಯಾವುದೇ ವ್ಯತ್ಯಾಸವಿಲ್ಲ ಎಂದು ಟೀಕಿಸಿದ್ದಾರೆ.
ನರೇಂದ್ರ ಮೋದಿಯನ್ನ ಜನರು ನಂಬಿದಷ್ಟು ಯಾರನ್ನೂ ನಂಬಿಲ್ಲ. ಇವರ ನಂಬಿಕೆಗೆ ನಾವು ತೆತ್ತ ಬೆಲೆ ಎಷ್ಟು.ಮೋದಿ ನಂಬಿಸಿದ್ದು ಒಂದಾ ಎರಡಾ? ವಿದೇಶಿ ಹಣತಂದು ಎಲ್ಲರ ಖಾತೆಗೆ 15 ಲಕ್ಷ ಹಾಕ್ತಿವಿ ಅಂದ್ರು. ಇನ್ನೂ ಜನ ಆ ಹಣ ಬರುತ್ತೆ ಅಂತ ಕಾಯ್ದುಕೊಂಡಿದ್ದಾರೆ. ಪ್ರತಿ ವರ್ಷ ಕೋಟಿ ಉದ್ಯೋಗ ಸೃಷ್ಟಿ ಮಾಡ್ತಿನಿ ಅಂದ್ರು, ಎಲ್ಲಿ ಮಾಡಿದ್ರು? ಮೋದಿ 50 ದಿನಕ್ಕೆ ದೇಶವನ್ನ ಭಿಕ್ಷೆ ಬೇಡುತ್ತೇನೆ ಅಂದ್ರು. ನಾನು ಮೋಸ ಮಾಡಿದ್ರೆ ನಾಲ್ಕು ದಿಕ್ಕು ಸೇರುವ ದಾರಿಯಲ್ಲಿ ಇಲ್ಲಿಸಿ ಶಿಕ್ಷಿಸಿ ಅಂದ್ರು. ಆ ಮಾತು ಹೇಳಿ 3 ವರ್ಷ ತುಂಬುತ್ತಾ ಬಂತು ಎಂದು ದೂರಿದರು.
ಈಗ ಮತ್ತಷ್ಟು ಬೆಲೆ ಏರಿಕೆ ಆಗುತ್ತಿದೆ. ದೇಶದಲ್ಲಿ ಆರ್ಥಿಕ ಕುಸಿತ ಕಾಣುತ್ತಿದೆ. ಇಲ್ಲಿ ನಂಬಿಸಿದವರ ತಪ್ಪೋ, ನಂಬಿದವರ ತಪ್ಪೋ ಗೊತ್ತಿಲ್ಲ. ಆದರೆ ಮೋದಿ ಮಾತ್ರ ಜನರನ್ನ ನಂಬಿಸಿ ಮೋಸ ಮಾಡಿದ್ದಾರೆ. ನಾವು ಈಗ ಲೆಕ್ಕ ಕೇಳ ಬೇಕಿದೆ. ಈಗ ಜನರ ಜೊತೆಗೆ, ವಿರೋಧ ಪಕ್ಷದವರು ಹಾಗೂ ಆರ್ ಎಸ್ ಎಸ್ ನವರು ಸಹ ಮಾತನಾಡಬೇಕಿದೆ ಸುದ್ದಿಗೋಷ್ಠಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸಾಹಿತಿ ದೇವನೂರು ಮಹದೇವ ವಾಗ್ದಾಳಿ ನಡೆಸಿದರು.