ಹುಬ್ಬಳ್ಳಿ, ಜನವರಿ 7,2021(www.justkannada.in): ಬಿಜೆಪಿ ಜತೆ ಜೆಡಿಎಸ್ ವೀಲಿನ ಅಥವಾ ಮೈತ್ರಿ ಬಗ್ಗೆ ಸಾಕಷ್ಟು ಸುದ್ಧಿಯಾದ ಹಿನ್ನೆಲೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಜೆಡಿಎಸ್ ಎಂಎಲ್ ಸಿ ಬಸವರಾಜ ಹೊರಟ್ಟಿ ಬಿಜೆಪಿ ಜತೆ ಜೆಡಿಎಸ್ ವಿಲೀನವೂ ಇಲ್ಲ, ಮೈತ್ರಿಯೂ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಇಂದು ಮಾತನಾಡಿದ ಬಸವರಾಜ ಹೊರಟ್ಟಿ, ಬಿಜೆಪಿ ಜತೆ ಜೆಡಿಎಸ್ ವಿಲೀನವೂ ಇಲ್ಲ, ಮೈತ್ರಿಯೂ ಇಲ್ಲ. ಅದು ಕೇವಲ ಗಾಳಿ ಸುದ್ಧಿ ಅಷ್ಟೆ ಎಂದರು.
ಸಭಾಪತಿ ಸ್ಥಾನಕ್ಕೆ ತಮ್ಮ ಹೆಸರು ಕೇಳಿಬಂದ ಹಿನ್ನೆಲೆ, ಬಿಜೆಪಿ ಜೆಡಿಎಸ್ ಮತ್ತು ಕಾಂಗ್ರೆಸ್ ನಲ್ಲಿ ನನಗೆ ಬೇಕಾದವರು ಸಾಕಷ್ಟು ಜನರಿದ್ದಾರೆ. ಹೀಗಾಗಿ ನಾನು ಎಲ್ಲರಿಗೂ ಸರ್ವಸಮ್ಮತ ಸಭಾಪತಿ ಆಗಬಹುದು. ನನಗೆ ವಿರೋಧ ಮಾಡುವ ಸಂಭವ ಕಡಿಮೆಯಿದೆ. ಕೊನೆ ಘಳಿಗೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಹಾಕಿದರೆ ಆಗ ನೋಡಬೇಕಾಗತ್ತದೆ ಎಂದು ಬಸವರಾಜ ಹೊರಟ್ಟಿ ತಿಳಿಸಿದರು.
Key words: There – no- JDS- merger -alliance – BJP-MLC-Basavaraja horatti