ಸದ್ಯದಲ್ಲೇ ಈ ಎರಡು ಕಾಲೇಜುಗಳು ಮೈಸೂರು ವಿವಿಯ ಅಂಗಕಾಲೇಜುಗಳು ; ಸಿಂಡಿಕೇಟ್ ಸಭೆ ಅನುಮೋದನೆ

ಮೈಸೂರು, ಸೆಪ್ಟೆಂಬರ್, 04,2020(www.justkannada,in) ; ಚಾಮರಾಜನಗರ ಜಿಲ್ಲೆಯ ತೆರಕಣಾಂಬಿ ಹಾಗೂ ಹಾಸನದ ಹೆತ್ತೂರಿನ ಪದವಿ ಕಾಲೇಜುಗಳನ್ನು ಮೈಸೂರು ವಿವಿ ಅಂಗಕಾಲೇಜುಗಳಾಗಿ ಸಿಂಡಿಕೇಟ್ ಸಭೆ ಅನುಮೋದಿಸಿತು.

jk-logo-justkannada-logo

ಶುಕ್ರವಾರ ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಿಂಡಿಕೇಟ್ ಸಭೆಯಲ್ಲಿ  ಈ ಬಗ್ಗೆ ಅನುಮೋದನೆ ದೊರೆಯಿತು.

Mysore-uom-syndicate-meeting-backlog-appointment-green-signal

ಚಾಮರಾಜನಗರ ಜಿಲ್ಲೆಯ ತೆರಕಣಾಂಬಿ ಹಾಗೂ ಹಾಸನದ ಹೆತ್ತೂರು ಪದವಿ ಕಾಲೇಜುಗಳನ್ನು ಮೈಸೂರು ವಿವಿ ಅಂಗಕಾಲೇಜುಗನ್ನಾಗಿ ಮಾಡುವಂತೆ ಈ ಹಿಂದೆ ಪತ್ರ ಸರಕಾರ ಬರೆದಿತ್ತು. ಈಹಿನ್ನೆಲೆಯಲ್ಲಿ ಸಿಂಡಿಕೇಟ್ ಸಭೆಯಲ್ಲಿ ಸರಕಾರದ ಪತ್ರ ಮಂಡಿಸಿ, ಚರ್ಚಿಸಿ ಬಳಿಕ ಅನುಮೋದನೆ ನೀಡಲಾಯಿತು,

ಈ ಬಗ್ಗೆ ಜಸ್ಟ್ ಕನ್ನಡದೊಂದಿಗೆ ಮಾತನಾಡಿದ ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಅವರು, ಈ ಎರಡು ಕಾಲೇಜುಗಳನ್ನು ರಾಷ್ಟ್ಟ್ರಿಯ ಶಿಕ್ಷಣ ನೀತಿ ಅಡಿಯಲ್ಲಿ ಕೌಶಲ್ಯಾಭಿವೃದ್ಧಿ ಕಾಲೇಜುಗಳಾಗಿ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. ಈ  ಸಂಬಂಧ ತಜ್ಞರ ಸಮಿತಿ ರಚನೆ ಮಾಡಿ ಈ ಕಾಲೇಜುಗಳಲ್ಲಿ ಕೌಶಲ್ಯ ಕೋರ್ಸ್ ಗಳನ್ನು ಆರಂಭಿಸುವ ಬಗ್ಗೆ ವರದಿ ಸಿದ್ಧಪಡಿಸುವಂತೆ ಕೇಳಲಾಗಿದೆ. ಅದರಲ್ಲಿ ಪ್ರಮುಖವಾಗಿ ಪ್ರವಾಸೋದ್ಯಮ ಮತ್ತು ಲಾಜೆಸ್ಟಿಕ್  ವಿಷಯಗಳಲ್ಲಿ ಕೌಶಲ್ಯಾಭಿವೃದ್ಧಿಗೆ ಒತ್ತು ನೀಡುವ ಮುನ್ಸೂಚನೆಯನ್ನು ಕುಲಪತಿಗಳು ತಿಳಿಸಿದರು.

key words ;These-two-colleges-near-future-Mysore-Vivi’s-organ-galleries-Syndicate-meeting-approval