ಮೈಸೂರು,ಫೆ,6,2020(www.justkannada.in): ಸಮ್ಮಿಶ್ರ ಸರ್ಕಾರ ಪತನಗೊಳಿಸಿ ಬಿಜೆಪಿ ಸೇರಿ ಶಾಸಕರಾಗಿ ಆಯ್ಕೆಯಾಗಿ ಇದೀಗ ಪ್ರಮಾಣವಚನ ಸ್ವೀಕರಿಸಿರುವ ನೂತನ 10 ಮಂದಿ ಸಚಿವರ ವಿರುದ್ದ ಮಾಜಿ ಸಿಎಂ ಸಿದ್ಧರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಪಕ್ಷದ್ರೋಹಿಗಳು ಸಚಿವರಾಗಿರುವುದು ನನಗೆ ಖುಷಿ ಇಲ್ಲ. ಅವರು ಗೆದ್ದಿರಬಹುದು. ಆದರೆ ಅವರು ಈಗಲೂ ಅನರ್ಹರೇ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಕಿಡಿಕಾರಿದ್ದಾರೆ.
ಮೈಸೂರಿನಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಮಾಜಿ ಸಿಎಂ ಸಿದ್ಧರಾಮಯ್ಯ, ಪಕ್ಷದ್ರೋಹಿಗಳು ಗೆದ್ದು ಬಂದಿರಬಹುದು ಆದ್ರೆ ಅವರು ಕಾನೂನಿನ ಪ್ರಕಾರ ಅನರ್ಹರೇ. ಅವರೆಲ್ಲರೂ ಅರ್ಹರಾಗಲು ಸಾಧ್ಯವೇ ಇಲ್ಲ. ಇವರೆಲ್ಲಾ ಪ್ರಜಾಪ್ರಭುತ್ವ ವಿರೋಧಿಗಳು, ಗೆದ್ದಿದ್ದಾರೆ. ಆದ್ರೂ ಶುಭಕೋರುತ್ತೇನೆ. ಒಳ್ಳೆಯ ಕೆಲಸ ಮಾಡಲಿ ಎಂದು ಹೇಳಿದರು.
ಇದೇ ವೇಳೆ ಸಿಎಂ ಬಿಎಸ್ ಯಡಿಯೂರಪ್ಪ ಬಗ್ಗೆ ಲೇವಡಿ ಮಾಡಿದ ಸಿದ್ಧರಾಮಯ್ಯ, ಬಿಜೆಪಿ ಹೈಕಮಾಂಡ್ ಸಿಎಂ ಬಿಎಸ್ ಯಡಿಯೂರಪ್ಪಗೆ ಸ್ವಾತಂತ್ರ ನೀಡಿಲ್ಲ. ಅವರನ್ನ ನೋಡಿದರೇ ನನಗೆ ಅಯ್ಯೋ ಪಾಪ ಅನ್ನಿಸುತ್ತೆ. ನಾನು ಸಂಪುಟ ವಿಸ್ತರಣೆ ಮಾಡಿರಲಿಲ್ಲ. ನೇಮಿಸಿದ್ದೆ. ನಂತರ ಸಂಪುಟ ಪುನರಚನೆ ಮಾಡಿದ್ದೇ ಎಂದು ತಿಳಿಸಿದರು.
Key words: they-disqualified-new ministers-Former CM -Siddaramaiah -mysore