ಮೈಸೂರು, ಫೆಬ್ರವರಿ 16, 2020 (www.justkannada.in): ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ಗೆ ತಿರುವನಂತಪುರಂ ನ್ಯಾಯಾಲಯವೊಂದು ಸಮನ್ಸ್ ನೀಡಿದೆ.
ಕಾಂಗ್ರೆಸ್ ನಾಯಕ ಶಶಿ ತರೂರ್ ಸಲ್ಲಿಸಿರುವ ಮಾನಹಾನಿ ಪ್ರಕರಣದ ವಿಚಾರಣೆ ಎದುರಿಸಲು ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ.
ಸುನಂದಾ ಪುಷ್ಕರ್ ಸಾವಿನ ಸಂಬಂಧ ಪ್ರಸಾದ್ ತಮ್ಮ ವಿರುದ್ಧ ಅವಹೇಳನಾಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪ ಮಾಡಿದ್ದ ತರೂರ್, 2018ರ ಡಿಸೆಂಬರ್ನಲ್ಲಿ ಮಾನಹಾನಿ ಪ್ರಕರಣ ದಾಖಲಿಸಿದ್ದರು.
ತಮ್ಮನ್ನು ‘ಕೊಲೆ ಆಪಾದಿತ’ ಎಂದಿದ್ದ ಪ್ರಸಾದ್ ತಮ್ಮ ಹೇಳಿಕೆಗಳಿಗೆ ಬೇಷರತ್ ಕ್ಷಮೆಯಾಚಿಸಬೇಕೆಂದು ಕೋರಿ ತರೂರ್ ಲೀಗಲ್ ನೋಟಿಸ್ ಕಳಿಸಿದ್ದರು.