ಬೆಂಗಳೂರು,ನವೆಂಬರ್ 22, 2021(www.justkannada.in): ಬೆಂಗಳೂರಿನ ಪೊಲೀಸರು ಇ-ವಾಣಿಜ್ಯ ವೆಬ್‌ಸೈಟ್ ಒಂದಕ್ಕೆ ಸೇರಿದ ಒಂದು ಲಾರಿ ತುಂಬಾ ಇದ್ದಂತಹ ಸಾಮಗ್ರಿಗಳನ್ನು ಕಳ್ಳತನ ಮಾಡಿದ್ದಂತಹ ಮೂರು ವ್ಯಕ್ತಿಗಳಿರುವ ತಂಡವನ್ನು ಬಂಧಿಸಿದ್ದಾರೆ.
ಇ-ವಾಣಿಜ್ಯ ವೆಬ್‌ಸೈಟ್‌ವೊಂದಕ್ಕೆ ಸೇರಿದ್ದಂಥಹ ಅಪಾರ ಪ್ರಮಾಣದ ವಸ್ತುಗಳನ್ನು ಲೂಟಿ ಮಾಡಿದ್ದ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಈ ಘಟನೆ ಅಕ್ಟೋಬರ್ ೩೦ರಂದು ಬೆಳಕಿಗೆ ಬಂದಿದೆ. ಇ-ವಾಣಿಜ್ಯ ವೆಬ್‌ಸೈಟ್ ಗೆ ಸೇರಿದ್ದಂತಹ ಒಟ್ಟು ರೂ.೧.೬೪ ಕೋಟಿ ಮೌಲ್ಯದ, ಸುಮಾರು ೪,೦೨೭ ವಸ್ತುಗಳಿದ್ದಂತಹ ಟ್ರಕ್ ನಾಪತ್ತೆಯಾಗಿತ್ತು.
ವಾಸ್ತವದಲ್ಲಿ ಈ ಟ್ರಕ್ ದೇವನಹಳ್ಳಿಯಿಂದ ಬೆಂಗಳೂರಿನ ಕಡೆಗೆ ಬರುತ್ತಿದ್ದಾಗ ಇದ್ದಕ್ಕಿದ್ದಂತೆ ‘ಜಿಪಿಎಸ್’ ಸಿಗ್ನಲ್‌ನಿಂದ ಮಾಯವಾಯಿತಂತೆ. ಆಗ ವೇರ್‌ಹೌಸ್ (ಗೊಡೌನ್) ಸಿಬ್ಬಂದಿಗಳು ಟ್ರಕ್ ಜಿಪಿಎಸ್ ಸಿಗ್ನಲ್‌ಗೆ ಲಭ್ಯವಾಗುತ್ತಿಲ್ಲವೆಂದು, ನಾಪತ್ತೆಯಾಗಿದೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಪ್ರಕರಣವನ್ನು ದಾಖಲಿಸಿಕೊಂಡ ಕೋಲಾರ ಪೊಲೀಸರು ನಾಪತ್ತೆಯಾದ ಟ್ರಕ್ ನ ಹುಡುಕಾಟವನ್ನು ಆರಂಭಿಸಿದರು. ಶನಿವಾರ ಈ ಸಂಬಂಧ ಪೊಲೀಸರು ನಾಲ್ವರನ್ನು ಬಂಧಿಸಿ, ಅವರಿಂದ ರೂ.೧.೫೨ ಕೋಟಿ ಮೊತ್ತದ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿಸಲಾಗಿರುವ ವ್ಯಕ್ತಿಗಳನ್ನು ಟ್ರಕ್ ನ ಚಾಲಕ ಅಸ್ಸಾಂ ಮೂಲದ ಬದ್ರುಲ್ ಹಖ್ ಹಾಗೂ ಆತನ ಸಹಚರರಾದ ಅಬ್ದುಲ್ ಹುಸೇನ್, ಅಬಿನಾಥ್ ಹಾಗೂ ಪ್ರದೀಪ್ ಕುಮಾರ್ ಎಂದು ಗುರುತಿಸಲಾಗಿದೆ.
ಈ ಟ್ರಿಕ್‌ನಲ್ಲಿ ಒಟ್ಟು ೩೦೦ ವಸ್ತುಗಳಿದ್ದವಂತೆ. ಇದರಲ್ಲಿ ಎಲೆಕ್ಟಾçನಿಕ್ ಸಾಮಗ್ರಿಗಳು, ಮೊಬೈಲ್ ಫೋನ್ ಗಳು, ಸಿದ್ಧ ಉಡುಪುಗಳು, ದಿನನಿತ್ಯ ಉಪಯೋಗಿಸುವ ಉತ್ಪನ್ನಗಳು, ಸೌಂದರ್ಯವರ್ಧಕಗಳು ಇದ್ದವು. ವಾಹನದ ಚಾಲಕ ತನ್ನ ಸಹಚರರೊಂದಿಗೆ ಸೇರಿ ಈ ವಸ್ತುಗಳನ್ನು ಎಗರಿಸುವ ಒಂದು ಯೋಜನೆಯನ್ನು ರೂಪಿಸಿದ. ಆ ಪ್ರಕಾರವಾಗಿ ಟ್ರಕ್ ಚುಂಚನಹಳ್ಳಿ ಗೇಟ್ ಬಳಿ ಬಂದಾಗ ಚಾಲಕ ಟ್ರಕ್ ನ ಜಿಪಿಎಸ್ ಸಾಧನವನ್ನು ಕಳಚಿದ. ಟ್ರಕ್ ನಲ್ಲಿದ್ದ ಎಲ್ಲಾ ವಸ್ತುಗಳನ್ನೂ ಮತ್ತೊಂದು ಟ್ರಕ್ ಗೆ ವರ್ಗಾಯಿಸಿ, ಮೂಲ ಟ್ರಕ್ ಅನ್ನು ಅಲ್ಲೇ ಬಿಟ್ಟು ಹೊರಟುಹೋದ.
ದೂರು ದಾಖಲಿಸಿಕೊಂಡ ನಂತರ ಪೊಲೀಸರು ಕಾರ್ಯಾಚರಣೆ ಆರಂಭಿಸಿ ಟ್ರಕ್ ನ ಚಾಲಕನನ್ನು ಪತ್ತೆ ಹಚ್ಚಿ ಲೂಟಿ ಮಾಡಿದ್ದಂತಹ ಎಲ್ಲಾ ವಸ್ತುಗಳನ್ನು ಮತ್ತು ಅದನ್ನು ಸಾಗಿಸಲು ಬಳಸಿದ್ದಂತಹ ವಾಹನವನ್ನೂ ಸಹ ವಶಕ್ಕೆ ತೆಗೆದುಕೊಂಡಿದ್ದಾರೆ.
ಸುದ್ದಿ ಮೂಲ: ಬೆಂಗಳೂರ್ ಮಿರರ್
Key words: This – massive loot.-three –person- arrest