ಬೆಂಗಳೂರು, ಸೆಪ್ಟೆಂಬರ್ 05, 2020 (www.justkannada.in): ಹರ್ಭಜನ್ ಸಿಂಗ್ “ವೈಯಕ್ತಿಕ ಕಾರಣ’ಗಳಿಂದ ಈ ಬಾರಿಯ ಐಪಿಎಲ್ನಿಂದ ಹೊರಗುಳಿಯುವುದಾಗಿ ಪ್ರಕಟಿಸಿದ್ದಾರೆ.
ಕಳೆದೆರಡು ವರ್ಷ ಚೆನ್ನೈ ತಂಡವನ್ನು ಪ್ರತಿನಿಧಿಸಿದ್ದ 40 ವರ್ಷದ ಹರ್ಭಜನ್ ಸಿಂಗ್, ಪ್ರಸ್ತುತ ಕುಟುಂಬದೊಂದಿಗೆ ಜಾಲಂಧರ್ನಲ್ಲಿ ಇದ್ದಾರೆ. ಪತ್ನಿ ಗೀತಾ ಮತ್ತು 4 ವರ್ಷದ ಮಗಳು ಹಿನಾಯ ಜತೆಯಲ್ಲಿದ್ದಾರೆ. ತಮಗೆ ಏಕಾಂತ ಬೇಕಿದೆ ಎಂದು ಹೇಳಿದ್ದಾರೆ.
ತಾಯಿಯ ಅನಾರೋಗ್ಯದಿಂದ ಅವರು ಚೆನ್ನೈ ತಂಡದೊಂದಿಗೆ ಯುಎಇಗೆ ಪಯಣಿಸಿರಲಿಲ್ಲ. ಚೆನ್ನೈಯಲ್ಲಿ ನಡೆದ ಶಿಬಿರದಲ್ಲೂ ಪಾಲ್ಗೊಂಡಿರಲಿಲ್ಲ. ಈಗ ಕೂಟದಿಂದಲೇ ಹಿಂದೆ ಸರಿದಿದ್ದಾರೆ.