ಬೆಂಗಳೂರು,ಆಗಸ್ಟ್,17,2023(www.justkannada.in): ಕೋಮುವಾದಿ, ಜಾತಿವಾದ ವಿರುದ್ಧದ ನಿಲುವುಳ್ಳ ಲೇಖಕರು, ಬುದ್ಧಿಜೀವಿಗಳಿಗೆ ಬೆದರಿಕೆ ಪತ್ರ ಬರುತ್ತಿರುವ ಹಿನ್ನೆಲೆ ಕ್ರಮಕ್ಕೆ ಆಗಹಿಸಿ ಹಾಗೂ ರಕ್ಷಣೆ ನೀಡುವಂತೆ ಕೋರಿ ಸಾಹಿತಿಗಳು ಸರ್ಕಾರದ ಮೊರೆ ಹೋಗಿದ್ದಾರೆ.
ಪ್ರೊ ಕೆ. ಮರಳಸಿದ್ದಪ್ಪ ಎಸ್ ಜಿ ಸಿದ್ದರಾಮಯ್ಯ, ವಸುಂದರಾ ಭೂಪತಿ, ಕುಂ.ವೀರಭದ್ರಪ್ಪ ಸೇರಿ 15ಕ್ಕೂ ಹೆಚ್ಚು ಸಾಹಿತಿಗಳಿಗೆ ಕಳೆದ ಒಂದು ವರ್ಷದಿಂದ ಬೆದರಿಕೆ ಪತ್ರ ಬರುತ್ತಿದೆ ಎನ್ನಲಾಗಿದೆ. ಹೀಗಾಗಿ ಬೆದರಿಕೆ ಪತ್ರ ವಿಚಾರ ಗಂಭೀರವಾಗಿ ಪರಿಗಣಿಸಬೇಕು. ಬೆದರಿಕೆ ಪತ್ರ ಬರೆದವರನ್ನ ಪತ್ತೆ ಮಾಡಿ ಕ್ರಮ ಕೈಗೊಳ್ಳವಂತೆ ಮನವಿ ಮಾಡಿದ್ದಾರೆ. ಹಾಗೆಯೇ ಈ ಸಂಬಂಧ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಭೇಟಿಗೆ ಅವಕಾಶ ನೀಡುವಂತೆ ಕೋರಿದ್ದಾರೆ.
ಕೋಮುವಾದಿ ಗುಂಪಿನಿಂದಲೇ ಈ ಪತ್ರಗಳು ಬರುತ್ತಿವೆ . ನಿಮ್ಮನ್ನು ಮುಗಿಸಿ ಬಿಡ್ತೀವಿ ಎಂದು ಪತ್ರ ಬರ್ತೀವೆ ಜಾತಿವಾದ ಕೋಮುವಾದ ವಿರುದ್ದ ಮಾತನಾಡಿದಾಗ ಬೆದರಿಕೆ ಬರುತ್ತಿದೆ. ಒಂದೇ ಬಗೆಯಲ್ಲಿ ಒಂದೇ ರೀತಿಯಲ್ಲಿ ಎಲ್ಲರಿಗೂ ಪತ್ರ ಬರುತ್ತಿವೆ. ಗೌರಿ ಲಂಕೇಶ್ , ಕಲ್ಬುರ್ಗಿ ಹತ್ಯೆ ಮಾಡಿದ ಗುಂಪು ನಮ್ಮನ್ನು ಹತ್ಯೆ ಮಾಡಬಹುದು ಹೀಗಾಗಿ ಸರ್ಕಾರದ ಗಮನಕ್ಕೆ ತಂದಿದ್ದೇವೆ ಎಂದು ಸಾಹಿತಿ ಡಾ.ಕೆ.ಮರಳಸಿದ್ದಪ್ಪ ತಿಳಿಸಿದ್ದಾರೆ.
Key words: Threat letter – 15 authors- Writers – government- demanding -action.