ಮೈಸೂರು,ಜುಲೈ,2,2021(www.justkannada.in): ಇತ್ತೀಚೆಗೆ ಮೈಸೂರಿನ ಭೂ ಮಾಫಿಯಾ ಬಗ್ಗೆ ಧ್ವನಿ ಎತ್ತಿದ್ದ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಎಸ್ ಶಿವರಾಂ ಅವರಿಗೆ ಬೆದರಿಕೆ ಕರೆ ಬರುತ್ತಿವೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ಬಗ್ಗೆ ಸ್ವತಃ ಕೆ.ಎಸ್ ಶಿವರಾಮ್ ಅವರೇ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ. ಇತ್ತೀಚಿಗೆ ಭೂ ಮಾಫಿಯಾದಿಂದಾಗಿ ನನಗೆ ಬೆದರಿಕೆ ಕಾಲ್ ಗಳು ಜಾಸ್ತಿಯಾಗುತ್ತಿದೆ. ಮೈಸೂರಿನ ಭೂ ಮಾಫಿಯಾ ವಿಚಾರಕ್ಕೆ ಕೈ ಹಾಕಿದ್ದಕ್ಕೆ ಬೆದರಿಕೆ ಕರೆ ಬರುತ್ತಿವೆ. ಭೂ ಮಾಫಿಯಾ ಬಗ್ಗೆ ತಲೆ ಹಾಕಿರೋದ್ರಿಂದ ಬೆದರಿಕೆಯ ಕರೆ ಬರುತ್ತಿದೆ. ನನ್ನ ಮೇಲೆ ಷಡ್ಯಂತ್ರ ನಡೆಯುತ್ತಿದೆ ಎಂದು ಬಹಿರಂಗವಾಗಿ ಹೇಳಿದರು.
ನನಗೆ ತ್ರೇಟ್ ಆಗ್ತಿದೆ. ಈ ಬಗ್ಗೆ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸುತ್ತಿದ್ದೇನೆ. ಪೊಲೀಸ್ ಬಂದೂಬಸ್ತ್ ಬೇಕು ಎಂದು ಮನವಿ ಮಾಡಲಿದ್ದೇನೆ. ನಾನು ಎಲ್ಲೆಲ್ಲಿ ಹೋಗುತ್ತಿದ್ದೇನೋ ಅಲ್ಲೆಲ್ಲ ನನ್ನ ಚಲನ ವಲನ ಗಮನ ಹರಿಸುತ್ತಿದ್ದಾರೆ ಎಂದು ಕೆ.ಎಸ್ ಶಿವರಾಮ್ ತಿಳಿಸಿದ್ದಾರೆ.
ತಪ್ಪು, ಹಗರಣ ನಡೆದಾಗ ಸಮಾಜ ಮುಂದೆ ಇಡುವ ಕೆಲಸ ಮಾಡುತ್ತಿದ್ದೇನೆ. ಈ ರೀತಿಯ ಬೆದರಿಕೆಗೆ ನಾನು ಬಗ್ಗಲ್ಲ, ಹೆದರೋದಿಲ್ಲ. ನನ್ನ ಕೆಲಸ ಮುಂದುವರಿಸುತ್ತೇನೆ ಎಂದು ಶಿವರಾಂ ತಿಳಿಸಿದರು. ಆದರೆ ಯಾರೂ ಬೆದರಿಕೆ ನೀಡುತ್ತಿದ್ದರೆಂದು ಕೆ.ಎಸ್.ಶಿವರಾಮ್ ಮಾಹಿತಿ ನೀಡಲಿಲ್ಲ.
Key words: threatening call – KS Sivaram-land mafia – Mysore.