ಕಾಲ ಬದಲಾಗುತ್ತಿದ್ದಂತೆ ಬೆದರಿಕೆಗಳು, ಯುದ್ಧದ ರೀತಿಗಳು ಬದಲಾಗುತ್ತಿರುತ್ತವೆ : ಸಚಿವ ರಾಜನಾಥ್ ಸಿಂಗ್

ನವದೆಹಲಿ,ಡಿಸೆಂಬರ್,18,2020(www.justkannada.in) : ಕಾಲ ಬದಲಾಗುತ್ತಿದ್ದಂತೆ ದೇಶದ ಮೇಲಾಗುತ್ತಿರುವ ಬೆದರಿಕೆಗಳು ಮತ್ತು ಯುದ್ಧದ ರೀತಿಗಳು ಬದಲಾಗುತ್ತಿರುತ್ತವೆ. ಭವಿಷ್ಯದಲ್ಲಿ ನಾವು ಹೆಚ್ಚೆಚ್ಚು ಭದ್ರತೆ ಕುರಿತ ವಿಷಯಗಳಿಗೆ ಆದ್ಯತೆ ನೀಡಬೇಕಾಗಬಹುದು ಎಂದು ರಕ್ಷಣಾ ಖಾತೆ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

Teachers,solve,problems,Government,bound,Minister,R.Ashok

ಮಿಲಿಟರಿ ಸಾಹಿತ್ಯ ಸಮ್ಮೇಳನ-2020ನ್ನು ವಿಡಿಯೊ ಕಾನ್ಫರೆನ್ಸ್ ಮೂಲಕ ಉದ್ದೇಶಿಸಿ ಮಾತನಾಡುತ್ತಾ, ಮಿಲಿಟರಿ ಸಾಹಿತ್ಯವನ್ನು ಸಾಮಾನ್ಯ ಜನತೆಯೊಂದಿಗೆ ಸಂಪರ್ಕಿಸುವ ಬಗ್ಗೆ ನನಗೆ ಅತೀವ ಆಸಕ್ತಿಯಿದೆ. ನಮ್ಮ ಮುಂದಿನ ಜನಾಂಗ ದೇಶದ ಇತಿಹಾಸದ ಬಗ್ಗೆ ಅರ್ಥ ಮಾಡಿಕೊಳ್ಳಲು, ಅದರಲ್ಲೂ ವಿಶೇಷವಾಗಿ ಗಡಿಭಾಗಗಳ ಬಗ್ಗೆ ತಿಳಿದುಕೊಳ್ಳಲು ಇದು ಸಹಾಯವಾಗಬಹುದು ಎಂದಿದ್ದಾರೆ.

ನಾನು ರಕ್ಷಣಾ ಇಲಾಖೆ ಸಚಿವನಾದ ನಂತರ ಸಮಿತಿಯನ್ನು ರಚಿಸಿದೆ. ಅದು ನಮ್ಮ ಗಡಿಭಾಗದ ಇತಿಹಾಸ ಮತ್ತು ಅದಕ್ಕೆ ಸಂಬಂಧಪಟ್ಟ ಯುದ್ಧಗಳ ಬಗ್ಗೆ ಜನರಿಗೆ ಸರಳವಾಗಿ ಅರ್ಥವಾಗುವ ರೀತಿಯಲ್ಲಿ ತಿಳಿಸಲು ಕೆಲಸ ಮಾಡುತ್ತಿದೆ ಎಂದು ಹೇಳಿದರು.

ರಕ್ಷಣಾ ಸಚಿವಾಲಯಕ್ಕೆ ಸಂಬಂಧಿಸಿದ ಚಿಂತಕರ ವೇದಿಕೆ ಆಫ್ ಲೈನ್ ಮತ್ತು ಆನ್ ಲೈನ್ ಸಂಶೋಧನೆಗಳು, ಪತ್ರಿಕೆಗಳು ಮತ್ತು ನಿಯತಕಾಲಿಕೆಗಳನ್ನು ಮಿಲಿಟರಿ, ಕಾರ್ಯತಂತ್ರಕ್ಕೆ ಸಂಬಂಧಪಟ್ಟಂತೆ ಕಾಲಕಾಲಕ್ಕೆ ಪ್ರಕಟಿಸಲಾಗುತ್ತಿದೆ. ಈ ಕ್ಷೇತ್ರಗಳಲ್ಲಿ ಆಸಕ್ತಿ ಹೊಂದಿರುವವರು ಇಂತಹ ಮಾಹಿತಿಗಳನ್ನು ಸುಲಭವಾಗಿ ಇಲ್ಲಿ ಪಡೆದುಕೊಳ್ಳಬಹುದು ಎಂದು ಮಾಹಿತಿ ನೀಡಿದ್ದಾರೆ.

ಸೇನೆಗೆ ಸಂಬಂಧಪಟ್ಟ ಮಾಹಿತಿಗಳನ್ನು ಪುಸ್ತಕಗಳ ಮೂಲಕ ಸಂಗ್ರಹಿಸಬಹುದು. ಯೋಧರು ಮತ್ತು ಮಿಲಿಟರಿ ಅಧಿಕಾರಿಗಳ ಜೊತೆ ಸಂವಹನ ಮಾಡುವ ಮೂಲಕ ಸೇನೆಯ ಸಿಬ್ಬಂದಿಯ ಅನುಭವಗಳನ್ನು ಪಡೆದುಕೊಳ್ಳಬಹುದು. ಅವರ ಕಾರ್ಯವೈಖರಿಯನ್ನು ಸಹ ಅರಿತುಕೊಳ್ಳಬಹುದು ಎಂದರು.

Threats-time-goes-Types-War-varying-Minister- Rajanath Singh
ಕೃಪೆ : internet

ನಮ್ಮ ದೇಶದಲ್ಲಿ, ರಾಷ್ಟ್ರೀಯತೆಯ ಮೇಲಿನ ಉತ್ಸಾಹದಲ್ಲಿ ಸಾಹಿತ್ಯ ಬರೆಯುವ ಸಂಪ್ರದಾಯವಿದೆ. ಅದು ಹಿಂದಿ, ಪಂಜಾಬಿ, ಗುಜರಾತಿ ಭಾಷೆಗಳಲ್ಲಾಗಿರಬಹುದು, ಯಾವುದೇ ಭಾಷೆಗಳಲ್ಲಾದರೂ ದೇಶದ ಜನರಲ್ಲಿ ದೇಶಾಭಿಮಾನ ಬೆಳೆಸುವಲ್ಲಿ ಸಾಹಿತ್ಯ  ಪ್ರಮುಖ ಪಾತ್ರ ವಹಿಸಿದೆ. ಪ್ರಾಚೀನ ಕಾಲದಲ್ಲಿ ಇದ್ದ ವಿದ್ವಾಂಸರಾದ ಚಾಣಕ್ಯನಂಥವರು ಯುದ್ಧಗಳ ಬಗ್ಗೆ ಬರೆದಿದ್ದರು, ಅವು ಈಗಲೂ ಹಲವು ಆಯಾಮಗಳಲ್ಲಿ ಪ್ರಸ್ತುತವಾಗಿವೆ ಎಂದು ರಾಜನಾಥ್ ಸಿಂಗ್ ತಿಳಿಸಿದರು.

key words : Threats-time-goes-Types-War-varying-Minister- Rajanath Singh