ನವದೆಹಲಿ,ಜೂನ್,29,2021(www.justkannada.in): ಬಿಜೆಪಿಯ ಮೂವರು ನನಗೆ ದ್ರೋಹ ಮಾಡಿದ್ದಾರೆ. ಜೊತೆಯಲ್ಲೇ ಇದ್ದು ನನ್ನ ಮೇಲೆ ದ್ವೇಷ ಸಾಧಿಸುತ್ತಿದ್ದಾರೆ. ಎಲ್ಲರ ಷಡ್ಯಂತ್ರ ಬಯಲು ಮಾಡೋ ಕಾಲ ಬಂದೇ ಬರುತ್ತೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೊಸ ಬಾಂಬ್ ಸಿಡಿಸಿದ್ದಾರೆ.
ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವುದಾಗಿ ಹೇಳಿದ್ದ ಶಾಸಕ ರಮೇಶ್ ಜಾರಕಿಹೊಳಿ ಇಂದು ದಿಢೀರ್ ದೆಹಲಿಗೆ ತೆರಳಿದ್ದಾರೆ. ಮಾಧ್ಯಮಗಳ ಜತೆ ಮಾತನಾಡಿ ಸ್ವಪಕ್ಷೀಯದವರ ವಿರುದ್ಧವೇ ಕಿಡಿಕಾರಿದ ರಮೇಶ್ ಜಾರಕಿಹೊಳಿ, ಜೊತೆಯಲ್ಲೇ ಇದ್ದು ನನ್ನ ಮೇಲೆ ದ್ವೇಷ ಸಾಧಿಸುತ್ತಿದ್ದಾರೆ. ಕೆಳಗೆ ಬಿದ್ದವನ ಮೇಲೆ ಆಳಿಗೊಂದು ಕಲ್ಲು ಹೊಡೆಯುತ್ತಿದ್ದಾರೆ . ಎಲ್ಲರ ಷಡ್ಯಂತ್ರ ಬಯಲು ಮಾಡೋ ಕಾಲ ಬಂದೇ ಬರುತ್ತೆ ನಾನು ಯಾರಿನ್ನ ಭೇಟಿಯಾಗುತ್ತೇನೆ ಎಂದು ಹೇಳಲ್ಲ. ನನ್ನ ದೆಹಲಿ ಭೇಟಿಯಿಂದ ಶಾಕ್ ಆಗುತ್ತೀರಿ. ನಾನು ಯಾರನ್ನ ಭೇಟಿಯಾಗುತ್ತೇನೆ ಎಂದು ವಿಡಿಯೋ ಬಿಡುಗಡೆ ಮಾಡಿದಾಗ ಶಾಕ್ ಆಗುತ್ತೀರಿ ಎಂದು ಹೇಳಿದರು.
ಡಿಕೆಶಿ ನನ್ನ ರಾಜಕೀಯ ವಿರೋಧಿ. ಡಿಕೆಶಿ ಸವಾಲನ್ನ ಎದುರಿಸಬಲ್ಲೆ. ಆದರೆ ಬಿಜೆಪಿಯಲ್ಲಿ ಮೂವರು ನನಗೆ ದ್ರೋಹ ಬಗೆದಿದ್ದಾರೆ. ಮೂವರ ಹೆಸರು ಬಹಿರಂಗ ಮಾಡುವ ಸಮಯ ಬರುತ್ತೆ ಎಂದರು.
Key words: Three- BJP- leaders -betrayed –me-former minister-Ramesh jarakiholi