ಮಂಡ್ಯ ,ಏಪ್ರಿಲ್,8,2025 (www.justkannada.in): ವಿಸಿ ನಾಲೆಗೆ ಕೈ ತೊಳೆಯಲು ಹೋಗಿ ಒಂದೇ ಕುಟುಂಬದ ಮೂವರು ಮಕ್ಕಳು ನೀರು ಪಾಲಾಗಿರುವ ಘಟನೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್ ಎಸ್ ಜಲಾಶಯದ ನಾರ್ತ್ ಬ್ಯಾಂಕ್ ಬಳಿ ನಡೆದಿದೆ.
ಸೋನು(16) ಸಾಯಿಸ್ತಾ (15) ಸಿದ್ದೀಕ್ (10) ಮೃತಪಟ್ಟ ಮಕ್ಕಳು. ಮೂವರು ಸಹ ಮೈಸೂರಿನ ಗೌಸಿಯ ನಗರದ ನಿವಾಸಿಗಳಾಗಿದ್ದು, ಕೆಆರ್ ಎಸ್ ನಲ್ಲಿರುವ ಸಂಬಂಧಿಕರ ಮನೆಗೆ ಹೋಗಿದ್ದರು. ನಿನ್ನೆ ಸಂಜೆ 5 ಗಂಟೆಗೆ ವಿಸಿ ನಾಲೆ ಬಳಿ ಮೂವರು ಮಕ್ಕಳು ಕೈ ತೊಳೆಯಲು ಹೋಗಿದ್ದರು. ಈ ಮಧ್ಯೆ ಮೂವರಿಗೂ ಈಜು ಬಾರದ ಕಾರಣ ಮೂವರು ಒಟ್ಟಿಗೆ ಸಾವನ್ನಪ್ಪಿದ್ದಾರೆ.
ಮೃತ ಸಾಯಿಸ್ತಾ ಎಂಬ ಬಾಲಕಿ ಎಸ್ಎಸ್ಎಲ್ಸಿ ಪರೀಕ್ಷೆ ಬರೆದಿದ್ದಳು. ಮೂವರು ಮಕ್ಕಳು ನೀರು ಪಾಲಾಗಿದ್ದಾರೆ ಎಂದು ತಿಳಿದ ಬಳಿಕ ಸ್ಥಳಕ್ಕೆ ಪೋಷಕರು ಆಗಮಿಸಿದ್ದು ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತು.
Key words: Three children, same family, death, Canal, Mandya