ಧಾರವಾಡ,ಡಿಸೆಂಬರ್,23,2024 (www.justkannada.in): ಲಾರಿ ಮತ್ತು ಟೆಂಪೊ ನಡುವೆ ಮುಖಾಮುಖಿ ಡಿಕ್ಕಿಯಾಗಿ ಮೂವರು ಸಾವನ್ನಪ್ಪಿರುವ ಘಟನೆ ಧಾರವಾಡ ಜಿಲ್ಲೆ ಅಳ್ನಾವರ ತಾಲ್ಲೂಕಿನ ಅಡಬಗಟ್ಟಿ ಬಳಿ ನಡೆದಿದೆ.
ಹನುಮಂತ ಮಲ್ಲಾಡ್ (36), ಮಹಾಂತೇಶ ಚವಾಣ (37) ಹಾಗೂ ಮಹಾದೇವಪ್ಪ ಹುಲ್ಲಳ್ಳಿ (39) ಮೃತಪಟ್ಟವರು ಎಂದು ಗುರುತಿಲಾಗಿದೆ. ಮೃತರು ಲಾರಿಯಲ್ಲಿದ್ದ ಸವದತ್ತಿ ತಾಲ್ಲೂಕಿನ ಶಿರಸಂಗಿಯ ಮೂಲದವರು ಎನ್ನಲಾಗಿದೆ. ಘಟನೆಯಲ್ಲಿ ಗಾಯಗೊಂಡವರನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೆಳಿಗ್ಗೆ 3 ಗಂಟೆ ವೇಳೆಗೆ ‘ಶಿರಸಂಗಿಯಿಂದ ಗೋವಾ ಕಡೆಗೆ ಸಾಗುತ್ತಿದ್ದ ಲಾರಿ, ಗೋವಾದಿಂದ ಚಿತ್ರದುರ್ಗಕ್ಕೆ ಸಂಚರಿಸುತ್ತಿದ್ದ ಟೆಂಪೂ ಡಿಕ್ಕಿ ಈ ಘಟನೆ ಸಂಭವಿಸಿದೆ.
Key words : Three death, accident, lorry, tempo