ಬೀದರ್,ಸೆ,28,2019(www.justkannada.in): ಡ್ಯಾಂ ನಿರ್ಮಿಸಲು ರೈತರ ಕೃಷಿ ಜಮೀನು ಪಡೆದು ಮೂರು ದಶಕಗಳೇ ಕಳೆದರೂ ಪರಿಹಾರ ನೀಡದ ಹಿನ್ನೆಲೆ ಸರ್ಕಾರದ ವಿರುದ್ದ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೀದರ್ ಜಿಲ್ಲೆ ಬಾಲ್ಕಿ ತಾಲ್ಲೂಕಿನಲ್ಲಿರುವ ಕಾರಂಜಾ ಜಲಾಶಯ ನಿರ್ಮಿಸಲು 1972ರಲ್ಲಿ ಸರ್ಕಾರ ರೈತರಿಂದ ಕೃಷಿ ಜಮೀನು ಪಡೆದಿತ್ತು. ಆದರೆ ಜಮೀನು ಪಡೆದು ಮೂರು ದಶಕಗಳೇ ಕಳೆದರೂ ರೈತರಿಗೆ ಸರ್ಕಾರದಿಂದ ಪರಿಹಾರ ಸಿಕ್ಕಿಲ್ಲ. ಹೀಗಾಗಿ ರೈತರು ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದೇ ವಿಚಾರವಾಗಿ ಸಿಎಂ ಬಿಎಸ್ ಯಡಿಯೂರಪ್ಪ 2018ರಲ್ಲಿ ರೈತರ ಜತೆ ಪ್ರತಿಭಟನೆ ನಡೆಸಿದ್ದರು. ಆದರೆ ಈಗ ಬಿಜೆಪಿ ಸರ್ಕಾರವಿದ್ದು ಬಿಎಸ್ ಯಡಿಯೂರಪ್ಪ ಸಿಎಂ ಆದರೂ ರೈತರ ಭೇಟಿಗೆ ಅವಕಾಶ ನೀಡಿಲ್ಲ ಎಂದು ರೈತರು ಕಿಡಿಕಾರಿದ್ದಾರೆ.
Key words: three decades- Land-government-farmer- Outrage -bidar