ಮೈಸೂರು,ಮಾ,3,2020(www.justkannada.in): ಕಬ್ಬು ಕಟಾವು ಮಾಡುತ್ತಿದ್ದ ವೇಳೆ ಮೂರು ನವಜಾತ ಚಿರತೆ ಮರಿಗಳು ಪತ್ತೆಯಾಗಿದ್ದು ಚಿರತೆ ಮರಿಗಳನ್ನ ರಕ್ಷಿಸಲಾಗಿದೆ.
ಮೈಸೂರು ಜಿಲ್ಲೆ ತಿ.ನರಸೀಪುರ ತಾಲ್ಲೂಕಿನ ತುಂಬಲ ಗ್ರಾಮದಲ್ಲಿ 3ಚಿರತೆ ಮರಿಗಳು ಪತ್ತೆಯಾಗಿವೆ. ಊಟಿ ನಂಜುಂಡೇಗೌಡ ರವರ ಕಬ್ಬಿನಗದ್ದೆಯಲ್ಲಿ ಕಬ್ಬು ಕಟಾವು ಮಾಡುವ ವೇಳೆ ಈ ಚಿರತೆ ಮರಿಗಳು ಪತ್ತೆಯಾಗಿವೆ. ಸುಮಾರು 8 ದಿನಗಳ ಹಿಂದೆ ಚಿರತೆ ಮರಿಗಳು ಜನ್ಮ ತಾಳಿವೆ ಎನ್ನಲಾಗಿದೆ.
ಇನ್ನು ಚಿರತೆ ಮರಿಗಳನ್ನು ಕಂಡು ಗ್ರಾಮಸ್ಥರು ಭಯಭೀತರಾಗಿದ್ದು, ಸ್ಥಳಕ್ಕೆ ಆಗಮಿಸಿದ ಅರಣ್ಯ ಅಧಿಕಾರಿಗಳು ಮರಿಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ್ದಾರೆ
ಸುತ್ತ ಮುತ್ತಲಿನ ಗ್ರಾಮಗಳಲ್ಲಿ ಚಿರತೆಗಳ ಹಾವಳಿಯಿಂದ ಈಗಾಗಲೇ ಸ್ಥಳೀಯರು ಭಯಭೀತರಾಗಿದ್ದಾರೆ. ಈ ನಡುವೆ ಈಗಾಗಲೇ ಮೂರುನಾಲ್ಕು ಚಿರತೆಗಳನ್ನ ಅರಣ್ಯ ಇಲಾಖೆ ಅಧಿಕಾರಿಗಳು ಸೆರೆ ಹಿಡಿದಿದ್ದಾರೆ.
Key words: Three- newborn -leopard -cubs – discovered-mysore