ಮೂರು ಪಕ್ಷದವರು ಲೋಕಾಯುಕ್ತಕ್ಕೆ ವಿರೋಧಿ, ಭ್ರಷ್ಟಾಚಾರಿಗಳಾಗಿದ್ದಾರೆ- ಸಂತೋಷ್ ಹೆಗ್ಡೆ.

ಮೈಸೂರು,ಆಗಸ್ಟ್,12,2022(www.justkannada.in): ಭ್ರಷ್ಟರಿಗೆ ಮಣೆ ಹಾಕ್ತಾರೆ. ಮೂರು ಪಕ್ಷಗಳಲ್ಲೂ ಭ್ರಷ್ಟಾಚಾರಿಗಳಿದ್ದಾರೆ. ಮೂರು ಪಕ್ಷದವರು ಲೋಕಾಯುಕ್ತಕ್ಕೆ ವಿರೋಧಿಯಾಗಿದ್ದಾರೆ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಕಿಡಿಕಾರಿದರು.

ಮೈಸೂರಿನಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಂತೋಷ್ ಹೆಗ್ಡೆ,  ಜೈಲಿಗೆ ಹೋಗಿ ಬಂದವರಿಗೆ ಸೇಬಿನ ಹಾರ ಹಾಕುತ್ತಾರೆ. ಭ್ರಷ್ಟರಿಗೆ, ಭ್ರಷ್ಟಾಚಾರಿಗೆ ಜೈಕಾರ ಹಾಕ್ತಾರೆ. ಏರ್ಪೋರ್ಟ್ ಹೊರಗೆ ಹೋಗಿ ಸ್ವಾಗತ  ಕೋರುತ್ತಾರೆ. ಸದ್ಯ ಜನರ ಮನಃ ಸ್ಥಿತಿ ಹಣ, ಅಧಿಕಾರದ ಹಿಂದೆ ಸಾಗಿದೆ. ಅದಕ್ಕಾಗಿ ಹಂಬಲಿಸುತ್ತಾರೆ ಹಾತೋರಿಯುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಭ್ರಷ್ಟರಿಗೆ ಮಣೆ ಹಾಕ್ತಾರೆ. ಮೂರು ಪಕ್ಷಗಳಲ್ಲೂ ಭ್ರಷ್ಟಾಚಾರಿಗಳಿದ್ದು,  ಮೂರು ಪಕ್ಷದವರು ಲೋಕಾಯುಕ್ತಕ್ಕೆ ವಿರೋಧಿಯಾಗಿದ್ದಾರೆ. ಚುನಾವಣೆಯ ಕಾರಣದಿಂದ ಗಿಮಿಕ್ ಮಾಡ್ತಿದ್ದಾರೆ. ಒಂದು ವೇಳೆ ಸುಪ್ರೀಂ ಕೋರ್ಟ್ ಮೊರೆ ಹೋದರೆ ಅಧಿಕಾರ ಕಳೆದುಕೊಳ್ಳುವ ಭಯ ಇದೆ. ಚುನಾವಣೆ ಸಮಿಪಿಸುತ್ತಿರುವ ಹಿನ್ನಲೆ ನೇರವಾಗಿ ಅಪೀಲು ಹೋಗ್ತಿಲ್ಲ. ಹಿಂಬಾಲಕರು ಹಿಂಬಾಗಿಲ ಮೂಲಕ ಸುಪ್ರೀಂ ಮೊರೆ ಹೋಗಬಹುದು ಅದಕ್ಕೆ ಅವಕಾಶ ಇದೆ. ಸದ್ಯಕ್ಕೆ ಚುನಾವಣೆ ಇರುವ ಕಾರಣ ಗೌಣವಾಗಿದ್ದಾರೆ. ರಾಜ್ಯದಲ್ಲಿ ಪ್ರವಾಹ ಉಂಟಾಗಿ ಸಾವಿರರು ಕೋಟಿ ನಷ್ಠ ಉಂಟಾಗಿದೆ. ಆದ್ರೇ ೪೦% ಕಮಿಷನ್ ಆಸೆಗಾಗಿ ಜನಪ್ರತಿನಿಧಿಗಳು ಅಧಿಕಾರಿಗಳು ಸೈಲೆಂಟ್ ಆಗಿದ್ದಾರೆ ಎಂದು ಆರೋಪಿಸಿದರು.

ಲೋಕಾಯುಕ್ತಕ್ಕೆ ಮತ್ತೆ ಬಲ: ಭ್ರಷ್ಟಾಚಾರಿಗಳಿಗೆ  ನಡುಕ

ಲೋಕಾಯುಕ್ತಕ್ಕೆ ಮತ್ತೆ ಬಲ ಬಂದಿದೆ. ಭ್ರಷ್ಟಾಚಾರಿಗಳಿಗೆ  ನಡುಕ ಹುಟ್ಟಿದೆ. ಮೂರು ಪಕ್ಷದಲ್ಲೂ ಕೂಡ  ಈ ತೀರ್ಪುನ್ನ ವಿರೋಧಿಸಬಹುದು. ಕಾರಣ ಲೋಕಾಯುಕ್ತ ಇದ್ದ ವೇಳೆ ಸಾಕಷ್ಟು ಪ್ರಕರಣಗಳಲ್ಲಿ ಶಿಕ್ಷೆ ಆಗಿತ್ತು. ಎಸಿಬಿ ಬಂದ ಬಳಿಕ ಯಾವೊಬ್ಬ ರಾಜಕಾರಣಿ ಮೇಲೆ, ಅಧಿಕಾರಿಯ ಮೇಲೆ ಕ್ರಮ ಜರುಗಿಸರಲಿಲ್ಲ. ಲೋಕಾಯುಕ್ತಕ್ಕೆ ಸ್ವಾತಂತ್ರ್ಯವಾದ ಅಧಿಕಾರ ಹಾಗೂ ಸವಲತ್ತುಗಳನ್ನ ನೀಡಬೇಕು. ಈ ಮೂಲಕ ಲೋಕಾಯುಕ್ತವನ್ನ ಬಲ ಪಡಿಸಬೇಕು.ಎಸಿಬಿಯಲ್ಲಿ ಈವರಗೆ ಸಾವಿರಾರು ಕೇಸ್ ಗಳು ದಾಖಲಾಗಿವೆ ಆದರೆ ಯಾರಿಗೂ ಶಿಕ್ಷೆ ಆಗಿಲ್ಲ ಎಂಬುದೆ ಬೇಸರ. ಅಧಿಕಾರಿಗಳು ಹಾಗೂ ರಾಜಕಾರಣಿಗಳಿಗೆ ಶಿಕ್ಷಯೇ ಆಗಿಲ್ಲ. ಮಂತ್ರಿ ಇರಲಿ ಒಬ್ಬ ಶಾಸಕನನ್ನು ಕೂಡ ಎಸಿಬಿ ವಿಚಾರಣೆ ಮಾಡಿಲ್ಲ. ನಮ್ಮ ನಿಮ್ಮಂತವರು ತಪ್ಪು ಮಾಡಿದರೆ ಹೀಗೆ ನಡೆದುಕೊಳ್ಳುತ್ತಿದ್ದಾರಾ? ಸರ್ಕಾರಿ ಅಧಿಕಾರಿಗಳು ತನಿಖೆ ಮಾಡಬೇಕಾದರೆ ಸರ್ಕಾರದ ಅನುಮತಿ ಕೇಳುತ್ತಾರೆ. ಇದು ಬ್ರಿಟಿಷ್ ಆಡಳಿತದ ಕಾನೂನು. ಅಂದಿನ ಬ್ರಿಟಿಷರು ತಮ್ಮ ಪ್ರಾಬಲ್ಯಕ್ಕಾಗಿ ಈ ನಿಯಮ ಜಾರಿಗೆ ತಂದಿದ್ದರು. ಆದರೆ ಇಂದು ನಮ್ಮದೇ ಸರ್ಕಾರ ಇರುವಾಗ ಸರ್ಕಾರದ ಅನುಮತಿ ಯಾಕೆ ಬೇಕು.? ಸಾಮಾನ್ಯ ಜನರನ್ನ ನೇರವಾಗಿ ತನಿಖೆ ಮಾಡುತ್ತಾರೆ ಆದರೆ ಅಧಿಕಾರಿಗಳನ್ನ ತನಿಖೆ ಮಾಡಬೇಕಾದರೆ ಸರ್ಕಾರದ ಅನುಮತಿ ಏಕೆ..? ಎಂದು  ಸಂತೋಷ್ ಹೆಗ್ಡೆ ಟೀಕಿಸಿದರು.

Key words: three- parties – anti-Lokayukta – corrupt-  Santhosh Hegde-mysore

ENGLISH SUMMARY…

All the three major party leaders are against Lokayukta and corrupt: Santosh Hegde
Mysuru, August 12, 2022 (www.justkannada.in): “They yield to corrupt people. Corrupt people exist in all the three major parties of the State. All of them are against the Lokayukta,” observed retired Lokayukta Justice Santosh Hegde.
Speaking to the press persons in Mysuru today, Santosh Hegde said, “a person who comes out of jail is given a grand welcome, people hail corrupt people. They go to the airport and welcome them while they come out. The mindset of the people as of now is only on earning money and power. They yearn for it.”
“There are corrupt people in all the three major parties, all of them are against Lokayukta. They do gimmicks due to elections. If anyone appeals to the Supreme Court they fear losing power. That is why they are not appealing to the Supreme Court directly. The followers approach the apex court through back door, there is an opportunity for it. However, as the elections are nearing they are keeping quiet. The state has incurred crores of rupees loss due to rains. But the elected representatives and bureaucrats are silent for the want of 40% commission,” he alleged.
The re-establishment of power to the Lokyuta has given chilly shivers to many
The Lokayukta has again gained power and strength. It has caused shivering among corrupt politicians and officials. According to me, all three parties might oppose this. The reason is many corrupt people who were trapped in the cases had suffered punishment. However, after establishing ACB, action has not been initiated against even a single politico or official. The Lokayukta should be given freedom of power and facilities and strengthened. More than 1,000 cases have been registered in the ACB, but none have been punished. I feel so sorry about it. Officials and politicians are never punished. Leave a Minister, the ACB has not interrogated even an MLA. If ordinary people like you and me commit a crime will they keep quiet? Government officials seek permission from the government to interrogate or investigate government officials. This is the law that was being followed during British rule. They had framed it as they wanted. Why permission from the government is required when there is our government? Won’t they interrogate common people, but why permission of the government is required to question the officials?” he questioned.
Keywords: Lokayukta/ Santosh Hegde/ corrupt/ all the three parties