ಕರ್ನಾಟಕದಲ್ಲಿ ನಿತ್ಯ ಮೂರು ಟನ್ ಕೊರೊನಾ ತ್ಯಾಜ್ಯ ಉತ್ಪತ್ತಿ!

ಬೆಂಗಳೂರು, ಜೂನ್ 16, 2020 (www.justkannada.in): ಕರ್ನಾಟಕದಲ್ಲಿ ದಿನಂಪ್ರತಿ 3000 ಕೆಜಿ ಯಷ್ಟು ಕೊರೊನ ತ್ಯಾಜ್ಯ ಉತ್ಪತ್ತಿಯಾಗುತ್ತಿದೆ.

ಮಾಸ್ಕ್ , ಪಿಪಿಇ ಕಿಟ್ ,ಕೈ ಗವುಸುಗಳು ಇದರ ಮೂಲ.ಈ ತ್ಯಾಜ್ಯದ ವಿಲೇವಾರಿ ವೈಜ್ಞಾನಿಕವಾಗಿ ಆಗಬೇಕು ಅದು ಕ್ಲಿಷ್ಟಕರ ಕೂಡಾ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸುಧಾಕರ್ ಆತಂಕ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಈ ತ್ಯಾಜ್ಯಕಡಿಮೆ ಮಾಡಲು ಸಾರ್ವಜನಿಕರು ಮನೆಯಲ್ಲೇ ತಯಾರಿಸಿದ ಮರು ಬಳಕೆಯ ಮಾಸ್ಕ್ ಬಳಕೆಯನ್ನು ರೂಡಿಸಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.