ಮೈಸೂರು,ಜನವರಿ,31,2022(www.justkannada.in): ಮೈಸೂರು ಮತ್ತು ಕೊಡಗು ಗಡಿಭಾಗಕ್ಕೆ ಹೊಂದಿಕೊಂಡಿರುವ ನಾಗರಹೊಳೆ ಹುಲಿ ಅರಣ್ಯ ಸಂರಕ್ಷಿತ ಪ್ರದೇಶದಲ್ಲಿ ಹುಲಿ ಗಣತಿ ಕಾರ್ಯ ಚುರುಕುಗೊಂಡಿದ್ದು ಮೂರು ಹಂತದಲ್ಲಿ ಹುಲಿ ಗಣತಿ ನಡೆಸಲಾಗುತ್ತಿದೆ.
ಒಟ್ಟು 8 ದಿನಗಳ ಕಾಲ ಹುಲಿ ಗಣತಿ ಕಾರ್ಯ ನಡೆಯುತ್ತಿದೆ. ಮೊದಲ 2 ದಿನಗಳು ಲೈನ್ ಟ್ರಾಂಜಕ್ಟ್ ಮೂಲಕ ಗಣತಿ ನಡೆಯುತ್ತಿದ್ದು, ಖುದ್ದು ಅಭಯಾರಣ್ಯದಲ್ಲಿ ನಾಲ್ನಡಿಗೆಯಲ್ಲಿ ಸಾಗುವ ಮೂಲಕ ಹುಲಿ ಎಣಿಕಾ ಕಾರ್ಯ ಮಾಡಲಾಗುತ್ತಿದೆ.
ಪ್ರತಿ ಬೀಟ್ ಕೇಂದ್ರದಲ್ಲಿ ನಾಲ್ಕು ಮಂದಿ ಅರಣ್ಯ ಸಿಬ್ಬಂದಿ ನೇರ ದರ್ಶನ ಹಾಗೂ ಬಾಹ್ಯ ದರ್ಶನದ ಮೂಲಕ ಅರಣ್ಯ ಇಲಾಖೆಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಗಣತಿ ನಡೆಸುತ್ತಿದ್ದಾರೆ. ಅಲ್ಲಲ್ಲಿ ಹುಲಿ ಗಣತಿ ಸಹಕಾರಿಯಾಗಿರುವ ಟ್ರಾಪಿಂಗ್ ಕ್ಯಾಮರ ಅಳವಡಿಕೆ ಮಾಡಲಾಗಿದ್ದು, ಇದೀಗ ಹುಲಿ ಗಣತಿ ಕಾರ್ಯ ಅಂತಿಮ ಹಂತದಲ್ಲಿದೆ. ಈ ಬಾರಿ ಹುಲಿ ಸಂತತಿ ಹೆಚ್ಚಾಗಿರುವ ನಿರೀಕ್ಷೆಯಿದ್ದು, ನಾಗರಹೊಳೆ ನಂಬರ್ ಒನ್ ಹುಲಿ ಸಂರಕ್ಷಿತ ಪ್ರದೇಶವಾಗುವ ವಿಶ್ವಾಸ ಹೊಂದಲಾಗಿದೆ.
Key words: Tiger -census – Nagarahole