ಮೈಸೂರು, ಜ.೨೭. ೨೦೨೫ : ನಂಜನಗೂಡು ತಾಲೂಕಿನ ಮಡುವಿನಹಳ್ಳಿ ಗ್ರಾಮದ ಕೆರೆಯ ಬಳಿ ಕಾಣಿಸಿಕೊಳ್ಳುತ್ತಿರುವ ಹೆಣ್ಣು ಹುಲಿ. ಮಧ್ಯರಾತ್ರಿಯ ವ್ಯಾಘ್ರನ ಘರ್ಜನೆಗೆ ಬೆಚ್ಚಿಬಿದ್ದ ಗ್ರಾಮಸ್ಥರು.
ತನ್ನ ಮೂರು ಮರಿಗಳ ಜೊತೆ ಘರ್ಜಿಸಿ ಗ್ರಾಮಸ್ಥರನ್ನು ಬೆಚ್ಚಿಸಿರುವ ಬಾರಿ ಗಾತ್ರದ ಹೆಣ್ಣು ಹುಲಿ.
ಮಡುವಿನಹಳ್ಳಿ ಗ್ರಾಮದ ಮಾರ್ಗವಾಗಿ ತೆರಳುತ್ತಿದ್ದ ವಾಹನ ಸವಾರರ ಕಣ್ಣಿಗೆ ಬಿದ್ದು ಮೊಬೈಲ್ ನಲ್ಲಿ ಸೆರೆ ಹಿಡಿದಿರುವ ವ್ಯಾಘ್ರ ಮತ್ತು ಮರಿಗಳು. ಮಡುವಿನಹಳ್ಳಿ ಗ್ರಾಮದ ಮುಂಭಾಗದಲ್ಲಿನ ಕೆರೆಯ ಬಳಿ ಕಾಣಿಸಿಕೊಂಡ ವ್ಯಾಘ್ರ ಪರಿವಾರ.
ಸಮೀಪದಲ್ಲಿರುವ ಹೆಡಿಯಾಲ ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದ ಮಡುವಿನಹಳ್ಳಿ ಗ್ರಾಮಸ್ಥರು. ಹೆಡಿಯಾಲ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ. ಮಡುವಿನಹಳ್ಳಿ ಗ್ರಾಮದ ಸುತ್ತಮುತ್ತಲ ಕೆರೆ ಸಮೀಪ ಬಾರಿ ಗಾತ್ರದ ಹೆಣ್ಣು ಹುಲಿ ಮತ್ತು ಮರಿಗಳ ಹೆಜ್ಜೆ ಗುರುತುಗಳು ಪತ್ತೆ.
ಇಂದು ಸಂಜೆಯೊಳಗೆ ಸ್ಥಳದಲ್ಲಿ ಹುಲಿ ಸೆರೆಗೆ ಬೋನು ಅಳವಡಿಸಲು ಮಡುವಿನಹಳ್ಳಿ ಗ್ರಾಮಸ್ಥರು ಅಗ್ರಹ.
key words: tigress spotted, Maduvinahalli village, Nanjangud
SUMMARY:
The tigress was spotted near a lake in Maduvinahalli village of Nanjangud taluk. The villagers were shocked by the roar of the tiger in the middle of the night.