ಬೈಕ್ ಗೆ ಟಿಪ್ಪರ್ ಡಿಕ್ಕಿ: ಯುವಕನಿಗೆ ಗಂಭೀರ ಗಾಯ

ಚಾಮರಾಜನಗರ,ಡಿಸೆಂಬರ್,4,2024 (www.justkannada.in): ದ್ವಿಚಕ್ರ ವಾಹನಕ್ಕೆ ಟಿಪ್ಪರ್ ಡಿಕ್ಕಿಯಾಗಿ ಬೈಕ್ ಸವಾರನಿಗೆ ಗಂಭೀರ ಗಾಯವಾಗಿರುವ ಘಟನೆ ಗುಂಡ್ಲುಪೇಟೆಯಲ್ಲಿ ನಡೆದಿದೆ.

ಗುಂಡ್ಲುಪೇಟೆ ಆರ್ ಟಿಓ ಸರ್ಕಲ್ ಬಳಿ ಈ ಭೀಕರ ಅಪಘಾತ ಸಂಭವಿಸಿದೆ. ಕೇರಳದ ಮಲಪುರಂನ ಜಾಸ್ಮಿನ್  (35) ಗಂಭಿರ ಗಾಯಗೊಂಡ ಯುವಕ. ಯುವಕನ ಎಡಗಾಲು ಸಂಪೂರ್ಣ ನಜ್ಜುಗುಜ್ಜಾಗಿದೆ.

ಕೆ ಎ10 ಎ 6398 ನೋಂದಣಿಯ ಟಿಪ್ಪರ್ ದ್ವಿಚಕ್ರ ವಾಹನದ ಹಿಂಬದಿಗೆ ಗುದ್ದಿ 20 ಮೀಟರ್ ದೂರ ಎಳೆದೊಯ್ದಿದೆ. ಈ ವೇಳೆ ಟಿಪ್ಪರ್ ಲಾರಿಯಡಿ ಸಿಲುಕಿದಯುವಕ ಕಾಲನ್ನೆ ಕಳೆದುಕೊಂಡಿದ್ದಾನೆ. ಭೀಕರ ದೃಶ್ಯ ಕಂಡು ವಾಹನ ಸವಾರರು ಕ್ಷಣಕಾಲ ಭಯಭೀತರಾದರು. ಇನ್ನು ಟಿಪ್ಪರ್ ಆರ್ಭಟಕ್ಕೆ ಬೇಸತ್ತ ಜನರು ಹಿಡಿಶಾಪ ಹಾಕಿದ್ದಾರೆ

ರಕ್ತದ ಮಡುವಿನಲ್ಲಿ ಬಿದ್ದಿದ್ದ ಯುವಕನನ್ನ ಸ್ಥಳೀಯರು ಆಸ್ಪತ್ರೆಗೆ ಸಾಗಿಸಿದ್ದು, ಯುವಕನಿಗೆ ಪಟ್ಟಣ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಮೈಸೂರಿಗೆ ರವಾನೆ ಮಾಡಲಾಗಿದೆ.  ಎರಡು ತಿಂಗಳ ಹಿಂದಷ್ಟೇ ಕೇರಳದ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದರು.

ಸ್ಥಳಕೆ ಗುಂಡ್ಲುಪೇಟೆ ಪೊಲೀಸರ ದೌಡಾಯಿಸಿದ್ದು ಪರಿಶೀಲನೆ ನಡೆಸಿ  ಟಿಪ್ಪರ್ ಲಾರಿ ವಶಕ್ಕೆ ಪಡೆದಿದ್ದಾರೆ.

Key words: Tipper, collides, bike, Young man, injured