ಬೆಂಗಳೂರು,ಮೇ,17,2022(www.justkannada.in): ರಾಜ್ಯದಲ್ಲಿ ವಿವಾದವನ್ನುಂಟು ಮಾಡಿದ್ಧ ಟಿಪ್ಪು ಪಠ್ಯ ಗೊಂದಲವನ್ನ ಪಠ್ಯ ಪುಸ್ತಕ ಸಮಿತಿ ಬಗೆಹರಿಸಿದ್ದು, ಶಾಲಾ ಪುಸ್ತಕದಲ್ಲಿ ಟಿಪ್ಪು ವೈಭವೀಕರಣಕ್ಕೆ ಸಂಪೂರ್ಣ ಬ್ರೇಕ್ ಹಾಕಲಾಗಿದೆ.
ಟಿಪ್ಪು ಇತಿಹಾಸಕ್ಕೆ ಬ್ರೇಕ್ ಹಾಕಲಾಗಿದ್ದು, ಎರಡೇ ಎರಡು ಸಾಲಿನಲ್ಲಿ ಟಿಪ್ಪು ಕುರಿತ ಪಾಠ ಮುಕ್ತಾಯವಾಗುತ್ತದೆ. ಮೈಸೂರು ಹುಲಿ ಟಿಪ್ಪು ಸುಲ್ತಾನ್ ಎಂಬ ಬಿರುದು ಕೂಡಾ ಕಡಿತ ಮಾಡಲಾಗಿದ್ದು, ಪಠ್ಯದಲ್ಲಿ ಎಲ್ಲಿಯೂ ಮೈಸೂರು ಹುಲಿ ಟಿಪ್ಪು ಎಂಬ ಬಿರುದು ಬಳಸಿಲ್ಲ. ಈ ಹಿಂದೆ 6ನೇ ತರಗತಿ ಸಮಾಜ ವಿಜ್ಞಾನ ವಿಷಯದಲ್ಲಿ ಮೈಸೂರು ಹುಲಿ ಟಿಪ್ಪು ಬಳಸಲಾಗಿತ್ತು.
ಆದರೆ ಈ ಬಾರಿ ಮೈಸೂರು ವಿಭಾಗದ ಪಠ್ಯದಲ್ಲಿದ್ದ ಟಿಪ್ಪು ವೈಭವೀಕರಣಕ್ಕೆ ಕತ್ತರಿ ಬಿದ್ದಿದೆ. ಪರಿಷ್ಕೃತ ಪಠ್ಯದಲ್ಲಿ ಸಾಧನೆ, ಟಿಪ್ಪು ಹೋರಾಟ, ಮೈಸೂರಿನ ಅಳ್ವಿಕೆ ಬಗೆಗಿನ ಮಾಹಿತಿಗೆ ಕತ್ತರಿ ಹಾಕಲಾಗಿದ್ದು, 10ನೇ ತರಗತಿಯ ಸಮಾಜ ವಿಜ್ಞಾನದ ಪಠ್ಯದಲ್ಲೂ ಟಿಪ್ಪು ಬಗ್ಗೆ ಪಾಠವಿಲ್ಲ. ಕರ್ನಾಟಕದಲ್ಲಿ ಬ್ರಿಟಿಷ್ ಆಳ್ವಿಕೆಗೆ ಪ್ರತಿರೋಧಗಳು ಸೇರಿದಂತೆ ಮೈಸೂರಿನ ಒಡೆಯರ ಎಂಬ ಪಾಠದಲ್ಲಿಯೂ ಟಿಪ್ಪು ಬಗ್ಗೆ ಮಾಹಿತಿ ನೀಡಲಾಗಿಲ್ಲ.
ಪಠ್ಯದಲ್ಲಿ ಟಿಪ್ಪು ಹೆಸರು ಇರುವ ಕಡೆಗಳಲ್ಲಿ ಏಕವಚನ ಬಳಕೆ ಮಾಡಲಾಗಿದೆ. ‘ಹೋರಾಡಿದವನು, ವಶಪಡಿಸಿಕೊಂಡ’ ಎಂಬ ಪದಗಳನ್ನ ಬಳಸಲಾಗಿದೆ. ಆದರೆ ಪಠ್ಯ ಪುಸ್ತಕ ಸಮಿತಿ ಮೈಸೂರಿನ ರಾಜರಿಗೆ ಗೌರವಯುತವಾದ ಪದ ಬಳಸಿದೆ.
Key words: Tippu- glorification – school- text-break