ಮೈಸೂರು,ಮೇ,21,2022(www.justkannada.in): ಟಿಪ್ಪು ಮಕ್ಕಳ ಅಪಪ್ರಚಾರಕ್ಕೆ ಕಿವಿಗೊಡಬೇಡಿ ಎಂಬ ಸಂಸದ ಪ್ರತಾಪ್ ಸಿಂಹ ಟ್ಬೀಟ್ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ್ ಕಿಡಿಕಾರಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ್ ಸಂಸದ ಪ್ರತಾಪ್ ಸಿಂಹ ಬಾಲೀಶ ಹೇಳಿಕೆ ಕೊಡುತ್ತಿದ್ದಾರೆ. ಮೈಸೂರು-ಬೆಂಗಳೂರು ರಸ್ತೆಯ ಅವ್ಯವಹಾರ, ಕಳೆಪೆ ಕಾಮಗಾರಿಗೆ ಬಗ್ಗೆ ತನಿಖೆಗೆ ಸಂಸದರಾಗಿ ಆದೇಶ ಮಾಡಬೇಕಿತ್ತು. ಟಿಪ್ಪುವಿಗೂ ರಸ್ತೆ ಕಾಮಗಾರಿಗೂ ಏನು ಸಂಬಂಧ. ಅವರ ಭ್ರಷ್ಟಾಚಾರ ಮರೆ ಮಾಚಲು ಧರ್ಮವನ್ನ ಗುರಿಯಾಗಿಟ್ಟುಕೊಂಡು ಮಾತನಾಡುವುದು ಬಿಜೆಪಿ ಅವರ ಚಾಳಿ. ಇವರಿಗೆ ಬೇರೆ ವಿಷಯಗಳೇ ಇಲ್ಲ. ಒಬ್ಬ ಸಂಸತ್ ಸದಸ್ಯರಾಗಿ ಹೃದಯ ವೈಶಾಲ್ಯತೆ ಇರಬೇಕು.ಈ ರೀತಿ ಒಬ್ಬ ಮಹಾನ್ ನಾಯಕನಿಗೆ ಅಗೌರವ ತೋರುವ ಕೆಲಸ ಮಾಡುತ್ತಿದ್ದಾರೆ ಎಂದು ಧೃವನಾರಾಯಣ್ ವಾಗ್ದಾಳಿ ನಡೆಸಿದರು.
ರಾಜ್ಯ ರಾಜಕಾರಣಕ್ಕೆ ಬರುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಆರ್. ಧ್ರುವನಾರಾಯಣ್, ಈಗ ಆ ವಿಚಾರ ಅಪ್ರಸ್ತುತ. ಈ ಬಗ್ಗೆ ಯಾವುದೇ ಪ್ರಸ್ತಾವನೆ ಇಲ್ಲ. ನಾನು 8 ವಿಧಾನಸಭಾ ಕ್ಷೇತ್ರದಲ್ಲಿ ಸಮಾನಾಂತರವಾಗಿ ಪ್ರವಾಸ ಮಾಡುತ್ತಿದ್ದೇನೆ . 9 ಜಿಲ್ಲೆಗಳ 49 ಕ್ಷೇತ್ರಗಳಲ್ಲಿ ನಾವು 7 ಮಾತ್ರ ಗೆದ್ದಿದ್ದೇವೆ. ಹಾಗಾಗಿ ಇಲ್ಲಿ ಹೆಚ್ಚು ಸ್ಥಾನ ಗೆಲ್ಲಲು ಯಾರು ಅರ್ಹ ಅಭ್ಯರ್ಥಿ ಎಂಬುದನ್ನ ಗುರುತಿಸಲು ಸಂಘಟನೆ ಮಾಡುತ್ತಿದ್ದೇವೆ. ನಾನು ರಾಜ್ಯ ರಾಜಕಾರಣಕ್ಕೆ ಬರುವ ಯಾವುದೇ ಪ್ರಸ್ತಾವನೆ ಇಲ್ಲ ಎಂದು ತಿಳಿಸಿದರು.
ಕಾಂಗ್ರೆಸ್ ನಲ್ಲಿ ಒಂದು ಕುಟುಂಬಕ್ಕೆ ಒಂದೇ ಟಿಕೆಟ್ ವಿಚಾರ ಕುರಿತು ಪ್ರತಿಕ್ರಿಯಿಸಿದ ಆರ್.ಧೃವನಾರಾಯಣ್, ಪಕ್ಷ ಒಂದು ಕುಟುಂಬಕ್ಕೆ ಒಂದೇ ಟಿಕೆಟ್ ಹಾಗೂ 5 ವರ್ಷ ಪಕ್ಷದಲ್ಲಿ ನಿರಂತರವಾಗಿ ಕೆಲಸ ಮಾಡಿದ್ರೆ ವಿನಾಯಿತಿ ಇದೆ ಎಂಬ ನಿರ್ಣಯ ತೆಗೆದುಕೊಂಡಿದೆ. ಇದನ್ನ ನಾನು ಸಂಪೂರ್ಣವಾಗಿ ಸ್ವಾಗತ ಮಾಡುತ್ತೇನೆ. ಪಕ್ಷದ ತೀರ್ಮಾನವನ್ನು ನಾನು ಸ್ವಾಗತ ಮಾಡುತ್ತೇನೆ ಎಂದು ಹೇಳಿದರು.
Key words: Tippu sultan-KPCC president- R. Dhruvanarayan -against -MP -Pratap simha