ಮೈಸೂರು, ಜು.29, 2020 : (www.justkannada.in news) : ಫ್ರಾನ್ಸ್ ನಿಂದ ಯುದ್ಧ ವಿಮಾನ ರಫೆಲ್ ಭಾರತಕ್ಕೆ ಬಂದಿಳಿಯುವ ಹೊತ್ತಿಗೆ ಸರಿಯಾಗಿ, ಈ ನೆಲದಲ್ಲಿ ರಾಕೆಟ್ ತಂತ್ರಜ್ಞಾನವನ್ನು ನೂರಾರು ವರ್ಷಗಳ ಹಿಂದೆಯೇ ಮೊಟ್ಟ ಮೊದಲು ಪರಿಚಯಿಸಿದ ವ್ಯಕ್ತಿಯ ಜೀವನ ಚರಿತ್ರೆಯನ್ನು ಪಠ್ಯದಿಂದ ಕೈ ಬಿಡಲು ನಿರ್ಧರಿಸಿದ್ದು ವಿಪರ್ಯಾಸ.
ಮೈಸೂರು ಹುಲಿ ಎಂದೇ ಹೆಸರುವಾಸಿಯಾಗಿರುವ ಟಿಪ್ಪು ಸುಲ್ತಾನ್ ಅವರ ಜೀವನ ಚರಿತ್ರೆಯನ್ನು ಶಾಲಾ ಪಠ್ಯದಿಂದ ಕೈಬಿಡಲು ಕರ್ನಾಟಕದ ಬಿಜೆಪಿ ಸರಕಾರ ತೀರ್ಮಾನಿಸಿದೆ. ಈ ಸಂಬಂಧ ಅಧಿಕೃತವಾಗಿ ನೀಡಿರುವ ಹೇಳಿಕೆ ಸಹ ಇಂದೇ ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ಈ ಸುದ್ದಿ ಬಿತ್ತರಗೊಳ್ಳುವ ಹೊತ್ತಿಗೆ ಸರಿಯಾಗಿ ಫ್ರಾನ್ಸ್ ನಿಂದ ಭಾರತದತ್ತ ತೆರಳಿದ್ದ ರಫೆಲ್ ಯುದ್ಧ ವಿಮಾನ, ಭಾರತ ನೆಲ ಸ್ಪರ್ಶಿಸಿದ ಸುದ್ಧಿ ಬಂದಿದೆ.
ಟಿಪ್ಪು ಮತ್ತು ರಾಕೆಟ್ :
ಹೈದರಾಲಿ ರಾಕೆಟ್ಟುಗಳನ್ನು ಅಭಿವೃದ್ಧಿಪಡಿಸಿ ಅದರ ಒಂದು ಪಡೆಯನ್ನೇ ಇಟ್ಟಿದ್ದರೆ, ಟಿಪ್ಪು ಕಬ್ಬಿಣದ ಹೊರಕವಚ ಹೊಂದಿದ ‘ಮೈಸೂರು ರಾಕೆಟ್ಟುಗಳನ್ನು ಅಭಿವೃದ್ಧಿಪಡಿಸಿದ. ಮುಂದೆ ಚೂಪಾದ ಬ್ಲೇಡು ಕಟ್ಟಿ, ಕಬ್ಬಿಣದ ಕೇಸುಗಳೊಳಗೆ ಮದ್ದಿನಪುಡಿ ತುಂಬಿದ್ದರಿಂದ ಅವುಗಳ ದೂರಗಾಮಿತ್ವ ಎರಡು ಕಿ.ಮೀ.ನಷ್ಟು ಹೆಚ್ಚಾಯಿತು.
1799 ರಲ್ಲೇ ಶ್ರೀರಂಗಪಟ್ಟಣದಲ್ಲಿ ಮೊದಲು ಈ ರಾಕೆಟ್ಟುಗಳನ್ನು ಟಿಪ್ಪು ಪ್ರಯೋಗಿಸಿದ್ದು. ಆಗ ಬ್ರಿಟಿಷರ ತಂತ್ರಜ್ಞಾನ ಟಿಪ್ಪು ಬಳಸಿದ್ದ ರಾಕೆಟ್ ತಂತ್ರಜ್ಞಾನಕ್ಕಿಂತ ಹಿಂದಿತ್ತು. ಈ ಕಾರಣದಿಂದಲೇ ಮೊದಲ ಯುದ್ಧಗಳನ್ನು ಟಿಪ್ಪು ಗೆಲ್ಲಲು ಸಾಧ್ಯವಾಯಿತು ಎಂಬುದನ್ನು ಇತಿಹಾಸಕಾರರು ಉಲ್ಲೇಖಿಸಿದ್ದಾರೆ.
ರಾಫೆಲ್ ವಿಮಾನ :
ಭಾರತಕ್ಕೆ ಬಂದಿಳಿದಿರುವ ರಾಫೆಲ್ ಯುದ್ಧ ವಿಮಾನ, ಶೀಘ್ರದಲ್ಲೇ ಸೇನಾ ಬತ್ತಳಿಕೆಗೆ ಅಧಿಕೃತವಾಗಿ ಸೇರ್ಪಡೆಯಾಗಲಿವೆ. ಈ ರಾಫೆಲ್ ಯುದ್ಧ ವಿಮಾನ ವಿವಾದಗಳಿಗೂ ಕಾರಣವಾಗಿತ್ತು. ಫ್ರಾನ್ಸ್‌ನ ಡಸಾಲ್ಟ್ ಏವಿಯೇಷನ್ ತಯಾರಿಸಿರುವ ಈ ಯುದ್ಧ ವಿಮಾನ ಖರೀದಿ ಒಪ್ಪಂದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಕೆಸರೆರಚಾಟ ನಡೆದಿತ್ತು.
key words : tippu-sulthan-karnataka-mysore-rocket-technology-Rafale