ಶಿವಮೊಗ್ಗ,ನ,6,2019(www.justkannada.in): ಶಿವಮೊಗ್ಗ ಜಿಲ್ಲೆಯಲ್ಲಿ ಪ್ರಾಣಿಗಳಿಂದ 2000 ಕೋಟಿ ನಷ್ಟವಾಗುತ್ತಿದೆ. ವಿಶೇಷವಾಗಿ ಕಾಡುಕೋಣ, ಮಂಗ ಹಾಗೂ ಹಂದಿ ಇವುಗಳು ಸಾಕಷ್ಟು ಹಾನಿ ಮಾಡುತ್ತಿವೆ. ಹೀಗಾಗಿ ಮಂಗಗಳ ಕಾಟ ತಡೆಯಲು ಮಂಕಿ ಪಾರ್ಕ್ ಮತ್ತು ಕಾಡುಕೋಣಗಳ ಹಾವಳಿ ತಡೆಯಲು ಸೋಲಾರ್ ಬೇಲಿ ನಿರ್ಮಿಸುವಂತೆ ತೀರ್ಥಹಳ್ಳಿ ಶಾಸಕ ಅರಗ ಜ್ಞಾನೇಂದ್ರ ಆಗ್ರಹಿಸಿದರು.
ಇಂದು ಶಿವಮೊಗ್ಗದಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ತೀರ್ಥಹಳ್ಳಿ ಬಿಜೆಪಿ ಶಾಸಕ ಅರಗ ಜ್ಞಾನೇಂದ್ರ, ಮಲೆನಾಡಿನಲ್ಲಿ ಕಾಡುಪ್ರಾಣಿಗಳಿಂದ ಬೇಸಾಯದ ಬದುಕು ಹಾಳಾಗ್ತಿತ್ತು. ಇದರ ಬಗ್ಗೆ ಸರ್ಕಾರದ ಗಮನ ಸೆಳೆದಿದ್ದೆವು. ಈ ಬಗ್ಗೆ ನಿನ್ನೆ ಸರ್ಕಾರ ಮಲೆನಾಡು ಭಾಗದ ಜನಪ್ರತಿನಿಧಿಗಳ ಜೊತೆ ಸಭೆ ನಡೆಸಲಾಗಿದೆ. ಕಾಡುಕೋಣಗಳ ಹಾವಳಿ ತಪ್ಪಿಸಲು ಸೋಲಾರ್ ಬೇಲಿ ಒದಗಿಸಬೇಕು. ಮಂಗಗಳಿಗೆ ಮಂಕಿ ಪಾರ್ಕ್ ಮಾಡಬೇಕು ಎಂಬ ಎರಡು ಬೇಡಿಕೆ ನಮ್ಮದಾಗಿತ್ತು. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನಲ್ಲಿ ನೂರು ಎಕರೆ ಸ್ಥಳದಲ್ಲಿ ಮಂಕಿ ಪಾರ್ಕ್ ನಿರ್ಮಾಣ ಮಾಡಲು ಸರ್ಕಾರ ಒಪ್ಪಿದೆ. ಮಂಗಗಳು ತಪ್ಪಿಸಿಕೊಂಡು ಹೋಗದಂತೆ ಸೋಲಾರ್ ಬೇಲಿ ನಿರ್ಮಾಣ ಮಾಡಲಾಗುತ್ತದೆ. ಈ ಹಿಂದೆ ನಮ್ಮ ಮನೆಗೆ ಬೇಕಾದ ತರಕಾರಿಗಳನ್ನು ನಾವೇ ಮನೆಯಲ್ಲಿ ಬೆಳೆದುಕೊಳ್ತಿದ್ದೆವು. ಆದರೆ ಮಂಗಗಳ ಹಾವಳಿ ಹಿನ್ನಲೆಯಲ್ಲಿ ಈಗ ಅದು ಅಸಾಧ್ಯವಾಗಿದೆ ಎಂದು ಹೇಳಿದರು.
ಆ ಭಾಗದಲ್ಲಿ ಪ್ರಾಣಿಗಳ ಸಂತತಿ ತುಂಬಾ ಹೆಚ್ಚಾಗಿದ್ದು, ವಿಶೇಷವಾಗಿ ಕಾಡುಕೋಣ, ಮಂಗ ಹಾಗೂ ಹಂದಿ ಇವು ಸಾಕಷ್ಟು ಹಾನಿ ಮಾಡುತ್ತಿದೆ. ಕಾಡುಕೋಣಗಳಿಗೆ ಸೋಲರ್ ಪೆನ್ಸ್ ನ್ನ ಸರ್ಕಾರ ಮಾಡಿಕೊಡಬೇಕು. ಸೋಲರ್ ಪೆನ್ಸ್ ಗಳಿಂದ ನಾವು ನಮ್ಮ ಬೆಳೆ ರಕ್ಷಣೆ ಮಾಡಬಹುದು. ಮಂಗಗಳ ಹಾವಳಿ ತಡೆಯಲು ಮಂಕಿ ಪಾರ್ಕ್ ಗೆ ಹೇಳಿದ್ದೆವೆ. ಆ ಭಾಗಕ್ಕೆ ಶಾಸಕರ ಹಾಗೂ ನಿಯೋಗಕ್ಕೆ ಒಪ್ಪಿದೆ. ಇನ್ನು ಕಾಟ ಕೊಡುವ ಮಂಗಗಳನ್ನ ಆ ಪಾರ್ಕ್ ನಲ್ಲಿ ಹಾಕಿ ನೋಡಿಕೊಂಡು ಅವುಗಳನ್ನ ವೀಕ್ಷಣೆ ಮಾಡ್ಬೇಕು ಎಂದರು.
ಮಲೆನಾಡಿನಲ್ಲಿ ಪೇಟೆಯಿಂದ ತರಕಾರಿ ತರುವುದೆ ದೊಡ್ಡ ಅವಮಾನ. ಪ್ರಾಣಿಗಳು ಗಿಡಬಳ್ಳಿಗಳನ್ನ ಹಾಳು ಮಾಡುತ್ತಿವೆ. ನಮ್ಮ ಜೀವನವನ್ನ ಸಾಮಾನ್ಯಮಟ್ಟದಲ್ಲಿ ನಡೆಸುತ್ತಿದ್ದೇವೆ. ಆದ್ರೆ ಮಂಗಗಳ ಹಾವಳಿಯಿಂದ ಏಲಕ್ಕಿ ಹಾಳಗುತ್ತಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಪ್ರಾಣಿಗಳಿಂದ 2000 ಕೋಟಿ ನಷ್ಟವಾಗುತ್ತಿದೆ. ನಮ್ಮ ಕಷ್ಟವನ್ನ ಅರ್ಧ ಮಾಡಿಕೊಂಡಿರುವ ನಮ್ಮ ಭಾಗದ ಯಡಿಯೂರಪ್ಪ ಸಭೆ ಮಾಡಿದ್ದಾರೆ.
Key words: Tirthahalli MLA -Araga Jnanendra – demanded -solar fence – monkey park