ಕಾಲ್ತುಳಿತ ಪ್ರಕರಣ : ಸಿನಿಮಾ ನಟನ ವಿರುದ್ಧ ಜರುಗಿಸಿದ ಕ್ರಮ, ಸರಕಾರದ ವಿರುದ್ಧ ಏಕಿಲ್ಲ..?

Stampede case: Why action was taken against the film actor, not against the government?

 

ಮೈಸೂರು, ಜನ.೧೦, ೨೦೨೫ : ವೈಕುಂಠ ಏಕಾದಶಿ ದರ್ಶನದ ಪಾಸ್‌ ವಿತರಣೆ ವೇಳೆ ನಡೆದ ನೂಕು ನುಗ್ಗಲಿಗೆ ೭ ಮಂದಿ ಮೃತಪಟ್ಟು ಹಲವಾರು ಮಂದಿ ಗಾಯಗೊಂಡ ಘಟನೆ ಆಂಧ್ರದ ತಿರುಪತಿಯಲ್ಲಿ ವರದಿಯಾಗಿದೆ. ಆದರೆ, ಈ ದುರ್ಘಟನೆಗೆ ಯಾರನ್ನು ಹೊಣೆಗಾರರನ್ನಾಗಿ ಮಾಡಬೇಕು..?

ಸ್ಥಳೀಯ ದೇವಾಲಯದ ಆಡಳಿತ ವರ್ಗದವರನ್ನೋ ಅಥವಾ ಸ್ಥಳೀಯ ಪೊಲೀಸರನ್ನೋ ಅಥವಾ ಸ್ಥಳೀಯ ಆಡಳಿತವನ್ನೋ..? ಇವೆಲ್ಲಕ್ಕಿಂತ ಮಿಗಿಲಾಗಿ ಇಲ್ಲಿ ಸರಕಾರದ ಜವಾಬ್ದಾರಿ ಗಣನೆಗೆ ಬರುವುದಿಲ್ಲವೋ..? ಎಂಬ ಪ್ರಶ್ನೆ ಉದ್ಭವಿಸಿದೆ.

ನಟ ಅಲ್ಲೂ ಅರ್ಜುನ್‌ ನಟನೆಯ “ ಪುಷ್ಪಾ- 2”  ಸಿನಿಮಾ ಪ್ರದರ್ಶನ ವೇಳೆ ಅಭಿಮಾನಿಗಳ ನೂಕುನುಗ್ಗಲು ಉಂಟಾದ ಕಾರಣ ಓರ್ವ ಮಹಿಳೆ ಮೃತಪಟ್ಟಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ನಟ ಅಲ್ಲೂ ಅರ್ಜುನ್‌ ವಿಚಾರಣೆ ನಡೆಸಿದ ಪೊಲೀಸರು ಕೋರ್ಟ್‌ ಗೆ ಹಾಜರುಪಡಿಸಿದ್ದರು. ಆಗ ಕೋರ್ಟ್‌ ನಟನನ್ನು ನ್ಯಾಯಾಂಗ ಬಂಧನಕ್ಕೆ ಆದೇಶಿಸಿತ್ತು. ನಂತರ ಅಲ್ಲು ಅರ್ಜುನ್‌ ಪರ ವಕೀಲರು ಮೇಲ್ಮನವಿ ಸಲ್ಲಿಸಿ ಜಾಮೀನು ಪಡೆದುಕೊಂಡರು.

ಆದರೆ, ತಿರುಪತಿಯಲ್ಲಿ ವೈಕುಂಠ ದರ್ಶನದ ಪಾಸ್ ವಿತರಣೆ ವೇಳೆ ನಡೆದ ಘಟನೆಗೆ ಯಾರ ವಿರುದ್ಧ ಕ್ರಮ ಜರುಗಿಸಬೇಕು ಎಂಬುದು  ಪ್ರಶ್ನೆ. ಇದು ಇಂಥ ಉದ್ದೇಶಿತ ಕಾರ್ಯಕ್ರಮಗಳ ನಿರ್ವಹಣೆಯ ಅಪಾಯಗಳ ಮೇಲಿನ ಚರ್ಚೆಗೆ ಪ್ರೇರೇಪಿಸಿದೆ.

ಈ ರೀತಿಯ ಘಟನೆಗಳಲ್ಲಿ ಏನಾದರೂ ತಪ್ಪಿದರೆ, ಸಂಬಂಧಿಸಿದವರ ವಿರುದ್ಧ ಕ್ರಮ ಕೈಗೊಳ್ಳುವುದು ಅಗತ್ಯ. ಆದರೆ, ಸರ್ಕಾರದ ವಿರುದ್ಧವೂ ಕ್ರಮ ಜರುಗಿಸಲು ಸಂಬಂಧಿಸಿದ ಘಟನೆ ಮತ್ತು ನಿರ್ವಹಣೆಯಲ್ಲಿ ಸರ್ಕಾರದ ಭಾಗವಹಿಸುವಿಕೆಯ ನಿಟ್ಟಿನಲ್ಲಿ ಸೂಕ್ತವಾದ ಕಾನೂನು ಕ್ರಮಗಳ ಅವಲೋಕನ ನಡೆಯಬೇಕಲ್ಲವೆ ಎಂಬ ವಾದ ಕೇಳಿ ಬಂದಿದೆ.

ಸಿನಿಮಾ ಪ್ರದರ್ಶನದ ವೇಳೆ ಆರ್ಟಿಸ್ಟ್ ಅಥವಾ ನಿರ್ಮಾಪಕರನ್ನೇ  ನೇರ ಹೊಣೆ ಮಾಡುವಂತೆ  ಕಾರ್ಯಕ್ರಮ ನಿರ್ವಹಣೆ, ಜನಸ್ತೋಮ ನಿರ್ವಹಣಾ ಜವಾಬ್ದಾರಿ ಹೊಂದಿರುವ ಸ್ಥಳೀಯ ಅಧಿಕಾರಿಗಳು ಮತ್ತು ಸಂಘಟಕರ ಜತೆಗೆ ಸರಕಾರವನ್ನು ಯಾಕೆ ಹೊಣೆಗಾರರನ್ನಾಗಿಸಬಾರದು..?

ತಿರುಪತಿ ದೇಗುಲದ ಘಟನೆಗೆ ಸಂಬಂಧಿಸಿದಂತೆ, ದೇಗುಲದ ಆಡಳಿತ ಮಂಡಳಿಯ ಮುಖ್ಯಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸರ್ಕಾರದ ನಿರ್ವಹಣಾ ಜವಾಬ್ದಾರಿಯನ್ನು ಪರಿಶೀಲಿಸಿ ಸರಕಾರದ ಮುಖ್ಸಸ್ಥರ ವಿರುದ್ಧವೂ ಕ್ರಮ ಜರುಗಿಸಬಾರದೇಕೆ..?

ಹೆಚ್ಚಿನ ಮಟ್ಟದ ಬಿಗಿ ನಿಯಮಾವಳಿ, ಜನಸ್ತೋಮ ನಿಯಂತ್ರಣಕ್ಕೆ ಸೂಕ್ತ ಕ್ರಮ, ಹಾಗೂ ತುರ್ತು ಪರಿಸ್ಥಿತಿಗಳ ಸಮಯದಲ್ಲಿ ತಕ್ಷಣದ ಪರಿಹಾರ ನೀಡುವ ವ್ಯವಸ್ಥೆಯನ್ನು ಅನುಸರಿಸುವುದು ಈ ರೀತಿಯ ದುರಂತಗಳನ್ನು ತಡೆಗಟ್ಟಲು ಸಹಾಯಕವಾಗುತ್ತದೆ.

key words: Stampede case, Tirumala, pushpa-2, Andra Pradesh,

Stampede case: Why action was taken against the film actor, not against the government?