ತಿರುಪತಿ ಲಡ್ಡು ವಿವಾದ : ಬಹಿರಂಗ ಹೇಳಿಕೆ ತಡೆಯುವಂತೆ ಸೂಚನೆ: ವಿಚಾರಣೆ ಮುಂದೂಡಿದ ಸುಪ್ರೀಂಕೋರ್ಟ್

ನವದೆಹಲಿ,ಸೆಪ್ಟಂಬರ್,30,2024 (www.justkannada.in):  ತಿರುಪತಿ ಲಡ್ಡು ತಯಾರಿಕೆಯಲ್ಲಿ ಪ್ರಾಣಿಗಳ ಕೊಬ್ಬು ಬಳಕೆ ಆರೋಪಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ವಿಚಾರಣೆಯನ್ನು ಅಕ್ಟೋಬರ್ 3ಕ್ಕೆ ಮುಂದೂಡಿಕೆ ಮಾಡಿದೆ.

ತಿರುಪತಿ ಲಡ್ಡು ವಿವಾದಕ್ಕೆ ಸಂಬಂಧಿಸಿದಂತೆ  ಸುಪ್ರೀಂಕೋರ್ಟ್ ನ್ಯಾ. ಬಿ.ಆರ್. ಗವಾಯಿ ನೇತೃತ್ವದ ನ್ಯಾಯಾಪೀಠದಲ್ಲಿ ಅರ್ಜಿಯ ವಿಚಾರಣೆ ನಡೆಯಿತು.  ಲಡ್ಡು ವಿವಾದವನ್ನು ಮಾಧ್ಯಮದಲ್ಲಿ ಪ್ರಚಾರ ಮಾಡಿದ್ದು ಏಕೆ? ತನಿಖೆ ಪೂರ್ಣ ಆಗೋವವರೆಗೂ ಮಾಧ್ಯಮದಲ್ಲಿ ಪ್ರಚಾರ ಏಕೆ ಮಾಡಿದ್ದೀರಿ? ದೇವರನ್ನು ರಾಜಕೀಯದಿಂದ ದೂರವಿಡಿ. ಇಂತಹ ಪ್ರಚಾರದಿಂದ ಭಕ್ತರ ನಂಬಿಕೆಗೆ ಧಕ್ಕೆ ಆಗುವುದಿಲ್ಲವೇ? ಇನ್ನಾದರೂ ಬಹಿರಂಗ ಹೇಳಿಕೆ ನೀಡುವುದನ್ನು ತಡೆಯುವಂತೆ  ಆಂಧ್ರ ರಾಜ್ಯ ಸರ್ಕಾರದ ಪರವಕೀಲರಿಗೆ  ಸೂಚನೆ ನೀಡಿ ವಿಚಾರಣೆಯನ್ನು ಅಕ್ಟೋಬರ್ 3ಕ್ಕೆ ಮುಂದೂಡಿತು.

ಮಾಜಿ ಸಿಎಂ ಜಗನ್ ಮೋಹನ್ ರೆಡ್ಡಿ ಅವಧಿಯಲ್ಲಿ  ತಿರುಪತಿ ಲಡ್ಡುಗಳ ತಯಾರಿಕೆಯಲ್ಲಿ ಪ್ರಾಣಿಗಳ ಕೊಬ್ಬು ಕಳಪೆ ಎಣ್ಣೆ ಬಳಸಲಾಗುತ್ತಿತ್ತು ಎಂದು ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಆರೋಪ ಮಾಡಿದ್ದರು. ಇದು ತೀವ್ರ ವಿವಾದಕ್ಕೆ ಕಾರಣವಾಗಿತ್ತು.

Key words: Tirupati Laddu, Supreme Court, adjourned , hearing