ರಾಜ್ಯದಲ್ಲಿ ಇಂದು ಒಂದೇ ದಿನ ಮೂರು ಕೊರೋನಾ ಸೋಂಕು ಪತ್ತೆ- ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ ಆರೋಗ್ಯ ಇಲಾಖೆ…

ಬೆಂಗಳೂರು,ಮಾ,21,2020(www.justkannada.in):  ರಾಜ್ಯದಲ್ಲಿ ದಿನೇ ದಿನೇ ಕೊರೋನಾ ವೈರಸ್ ಭೀತಿ ಹೆಚ್ಚಾಗುತ್ತಲೇ ಇದ್ದು ಈ ನಡುವೆ ಇಂದು ಒಂದೇ ದಿನ 3 ಕೊರೊನಾ ವೈರಸ್ ಸೋಂಕು ಪತ್ತೆಯಾಗಿವೆ.

ಈ ಬಗ್ಗೆ ಆರೋಗ್ಯ ಇಲಾಖೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಇದರಲ್ಲಿ  ಇಂದು ಒಂದೇ ದಿನ ರಾಜ್ಯದಲ್ಲಿ ಮತ್ತೆ 3 ಕೊರೊನಾ ಸೋಂಕು ಪತ್ತೆಯಾಗಿವೆ ಎಂದು ಹೇಳಿದೆ. ಈ ಮೂಲಕ ರಾಜ್ಯದಲ್ಲಿ ಕೊರೊನಾ ವೈರಸ್ ಪೀಡಿತರ ಸಂಖ್ಯೆ 18 ಕ್ಕೆ ಏರಿಕೆಯಾಗಿದೆ.

ಕೊರೋನಾ ವೈರಸ್ ಸಂಬಂಧ 48 ಸರ್ಕಾರಿ ಆಸ್ಪತ್ರೆಗಳಲ್ಲಿ 35 ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ. ಇಂದು ಚಿಕ್ಕಬಳ್ಳಾಪುರದ ಗೌರಿಬಿದನೂರಿನ 35 ವರ್ಷದ ವ್ಯಕ್ತಿಯೊಬ್ಬರಿಗೆ ಕೊರೋನಾ ಸೋಂಕು ಪತ್ತೆಯಾಗಿತ್ತು. ಇದಾದ ಬಳಿಕ ವ್ಯಕ್ತಿಯ ತಾಯಿಗೂ ಕೊರೋನಾ ಸೋಂಕು ಇರುವುದು ದೃಢವಾಗಿದೆ. ಈ ಮೂಲಕ ತಾಯಿ ಮಗ ಇಬ್ಬರಿಗೂ ಕೊರೋನಾ ಸೋಂಕು ಇದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ತಿಳಿಸಿದ್ದಾರೆ.

ಬೆಂಗಳೂರಿನ ವರದಿ ಪ್ರಕಾರ ತಾಯಿ ಮಗ ಇಬ್ಬರಿಗೂ ಕೊರೋನಾ ಸೋಂಕು ಇದೆ. ಪುಣೆಯಿಂದ ಮತ್ತೊಂದು ವರದಿ ಬರಬೇಕಿದೆ. ಅದರಲ್ಲಿ ಅಂತಿಮವಾಗಿ ತಿಳಿಯಲಿದೆ ಎಂದು ಸುಧಾಕರ್ ತಿಳಿಸಿದ್ದಾರೆ.

Key words: today –detected- three -coronavirus -infections -Health Department – Health Bulletin.