ಮೈಸೂರು,ಜುಲೈ,16,2021(www.justkannada.in): ‘ಕೋವಿಡ್ ಮತ್ತು ಮಕ್ಕಳು’ ಕುರಿತು ಇಂದು ಸಂಜೆ 7 ಗಂಟೆಗೆ ಕುತೂಹಲಿ ಕನ್ನಡ ವಿಜ್ಞಾನ ಜಾಲಗೋಷ್ಠಿ ಆಯೋಜನೆ ಮಾಡಲಾಗಿದೆ.
ವಿಜ್ಞಾನ ಪ್ರಸಾರ್, ನವದೆಹಲಿ ಹಾಗೂ ಕರ್ನಾಟಕ ವಿಜ್ಞಾನ ತಂತ್ರಜ್ಞಾನ ಅಕಾಡೆಮಿ, ಬೆಂಗಳೂರು ವತಿಯಿಂದ ಈ ಕುತೂಹಲಿ ಕನ್ನಡ ವಿಜ್ಞಾನ ಜಾಲಗೋಷ್ಠಿ ಆಯೋಜನೆ ಮಾಡಲಾಗಿದ್ದು ಇದಕ್ಕೆ ಮೈಸೂರು ಸ್ವಾಮಿ ವಿವೇಕಾನಂದ ಯೂಥ್ ಮೂವ್ ಮೆಂಟ್ ನೆರವು ನೀಡಿದೆ.
ಮೂರನೇ ಅಲೆ ಮಕ್ಕಳನ್ನೇ ಗುರಿಯಾಗಿಡುವುದೇ? ಮಕ್ಕಳಿಗೆ ಕೋವಿಡ್ ಸೋಂಕಿದಾಗ ಏನು ಮಾಡುವುದು? ಮಕ್ಕಳಿಗೆ ಕೋವಿಡ್ ಸೋಂಕು ತಗುಲಿದಾಗ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಕುತೂಹಲಿ ಕನ್ನಡ ವಿಜ್ಞಾನ ಜಾಲಗೋಷ್ಠಿಯಲ್ಲಿ ಚರ್ಚಿಸಲಾಗುತ್ತದೆ.
ಈ ಜಾಲಗೋಷ್ಠಿಯಲ್ಲಿ ಮಕ್ಕಳ ತಜ್ಞರು ವಿವೇಕಾನಂದ ಸ್ಮಾರಕ ಆಸ್ಪತ್ರೆ ಹಾಗೂ ಎಸ್‌ವಿವೈಎಂ, ಸರಗೂರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಜಿ. ಎಸ್. ಕುಮಾರ್ ಪಾಲ್ಗೊಳ್ಳಲಿದ್ದಾರೆ. ಜೂಮ್ ಜಾಲತಾಣದಲ್ಲಿ ಪಾಲ್ಗೊಳ್ಳಲು https://bit.ly/3tl8aWn ID: 838 3460 8715 ಪಾಸ್ ವರ್ಡ್ : 941968 ಸಂಪರ್ಕಿಸಿ.
Key words: Today-kutuhali- Kannada Science -Workshop -covid and Children