ನವದೆಹಲಿ,ಜು,22,2019(www.justkannada.in): ಇಂದು ಸಿಎಂ ಹೆಚ್.ಡಿ ಕುಮಾರಸ್ವಾಮಿ ವಿಶ್ವಾಸಮತ ಯಾಚಿಸಲು ನಿರ್ದೇಶನ ನೀಡಬೇಕು ಎಂದು ಕೋರಿ ಇಬ್ಬರು ಪಕ್ಷೇತರ ಶಾಸಕರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಾಳೆ ಮಾಡುವುದಾಗಿ ಸುಪ್ರೀಂಕೋರ್ಟ್ ತಿಳಿಸಿದೆ.
ಪಕ್ಷೇತರ ಶಾಸಕರಿಬ್ಬರ ಅರ್ಜಿ ವಿಚಾರಣೆ ಇಂದು ಸಾಧ್ಯವಿಲ್ಲ. ಆದರೆ ನಾಳೆ ವಿಚಾರಣೆ ಬಗ್ಗೆ ನೋಡುತ್ತೇವೆ ಎಂದು ಸುಪ್ರೀಂಕೋರ್ಟ್ ಸ್ಪಷ್ಟನೆ ನೀಡಿದೆ. ಸನಾಳೆ ಮೊದಲ ಪ್ರಕರಣವಾಗಿ ವಿಚಾರಣೆ ಕೈಗೆತ್ತಿಕೊಳ್ಳಿ ಎಂದು ಆದರೆ ಪಕ್ಷೇತರ ಶಾಸಕ ಮುಕುಲ್ ರೋಹ್ಟಗಿ, ಸುಪ್ರೀಂಕೋರ್ಟ್ ಗೆ ಮನವಿ ಮಾಡಿದರು.
ಆದರೆ ಸುಪ್ರೀಂಕೋರ್ಟ್ ತರಾತುರಿಯಲ್ಲಿ ಅರ್ಜಿ ವಿಚಾರಣೆಗೆ ನಿರಾಕರಿಸಿದೆ. ಸಿಎಂ ಹೆಚ್.ಡಿ ಕುಮಾರಸ್ವಾಮಿ ಇಂದೇ ವಿಶ್ವಾಸಮತಯಾಚನೆ ಮಾಡುವಂತೆ ನಿರ್ದೇಶಿಸಬೇಕು ಎಂದು ಮನವಿ ಮಾಡಿ ಇಬ್ಬರು ಪಕ್ಷೇತರ ಶಾಸಕರಾದ ಶಂಕರ್ ಮತ್ತು ನಾಗೇಶ್ ಸುಪ್ರೀಂಕೋರ್ಟ್ ಗೆ ಅರ್ಜಿಸಲ್ಲಿಸಿದ್ದರು.
Key words: Today- petition-independet mla- cannot –heard-Supreme Court